NEWSಕೃಷಿನಮ್ಮರಾಜ್ಯ

ಟೊಮೆಟೊ ಬೆಲೆ ಕುಸಿತದಿಂದ ರೈತ ಕಂಗಾಲು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಕೋಲಾರ: ಟೊಮೆಟೊ ಬೆಲೆ ಕುಸಿದಿದ್ದರಿಂದ, ಕೋಲಾರದ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆಬದಿ ಎಸೆದು ಹೋಗುತ್ತಿದ್ದಾರೆ. 15 ಕೆಜಿ ಬಾಕ್ಸ್ ಟೊಮೆಟೊ ಕೇವಲ 30 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಮಾರುಕಟ್ಟೆಗೆ ತರುವ ವಾಹನ ಬಾಡಿಗೆಯೂ ಸಿಗುತ್ತಿಲ್ಲ.

ಜತೆಗೆ ಫಸಲು ಕಟಾವು ಮಾಡುವವರಿಗೆ ಕೂಲಿಕೊಡಲು ಆಗುತ್ತಿಲ್ಲ. ಸಾವಿರಾರು ರೂ. ಖರ್ಚುಮಾಡಿ ಬೆಳೆದ ಫಲಸಲು ಬೆಲೆ ಕುಸಿತದಿಂದ ಕೈಯಿಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದಕ್ಕೆ ರಾಜ್ಯದಲ್ಲಿ ಕೊರೊನಾ ಮಹಾಮಾರಿಯಿಂದ ಲಾಕ್‌ಡೌನ್‌ ಇರುವುದು. ಜತೆಗೆ ವಿದೇಶಕ್ಕೆ ರಫ್ತಾಗುತ್ತಿದ್ದ ಟೊಮೆಟೊ ಇಲ್ಲಿ ಉಳಿಯುತ್ತಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ.

ಕೋಲಾರದಲ್ಲಿ ಕೆಂಪು ಹಣ್ಣು ಟೊಮೆಟೊ ಬೆಲೆ ಇತ್ತೀಚಿನ ದಿನಗಳಲ್ಲಿ ಕುಸಿತ ಕಾಣುತ್ತಿದ್ದು, ಬೆಳೆದ ಬೆಳೆಗಾರರಂತು ದಿಕ್ಕೇ ತೋಚದಂತೆ ಅಯೋಮಯ ಸ್ಥಿತಿಯಲ್ಲಿದ್ದಾರೆ.

ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದ ರೈತ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ . ಕೋಲಾರದ ಟೊಮೆಟೊ ಮಾರುಕಟ್ಟೆ ಏಷ್ಯಾದಲ್ಲಿಯೇ 2 ನೇ ಅತಿ ದೊಡ್ಡ ಮಾರುಕಟ್ಟೆ. ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗೆ ನಿತ್ಯ ಸಾವಿರಾರು ಕ್ವಿಂಟಾಲ್ ಟೊಮೆಟೊ ಬರುತ್ತೆ.

ನಮ್ಮ ರಾಜ್ಯದಿಂಲೇ ಅಲ್ಲದೆ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಟೊಮೆಟೊ ಆವಕವಿದೆ, ಆದರೆ ಕೆಲವು ದಿನದಿಂದ ಬೆಲೆ ಕುಸಿತ ಕಾಣುತ್ತಿದ್ದು ಈ ತ್ರೈಮಾಸಿಕದಲ್ಲಿ ಕೋಲಾರ ಎಪಿಎಮ್ ಸಿ ಯಿಂದ ಅತಿ ಹೆಚ್ಚು ಟೊಮೇಟೊ ವಿದೇಶಗಳೂ ಸೇರಿದಂತೆ ದೇಶದ ವಿವಿಧ ಕಡೆ ರಫ್ತಾಗುತ್ತಿತ್ತು, ಈಗ ರಫ್ತು ಪ್ರಮಾಣವು ಕಡಿಮೆಯಾಗಿರುವುದರಿಂದ ಬೆಲೆ ಕುಸಿದಿದೆ.

ರೈತರೂ ಸಹ ಈ ತ್ರೈಮಾಸಿಕದಲ್ಲಿ ಅತೀ ಹೆಚ್ಚು ಬಂಡವಾಳ ಹೂಡಿ ಬೆಳೆ ಬೆಳೆದ ಕಾರಣ ಮಾರುಕಟ್ಟೆಗೆ ಆವಕ ಸಹ ಹೆಚ್ಚಾಗಿದೆ. ಆದರೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಇದರಿಂದ ಬೇಸತ್ತು ಟ್ರ್ಯಾಕ್ಟರ್‌ನಲ್ಲಿ ತಂದು ರಸ್ತೆ ಬದಿ ಸುರಿದು ಹೋಗುತ್ತಿದ್ದಾರೆ.

ಹೀಗೆ ನೂರಾರು ಟನ್‌ ಟೊಮೆಟೊ ರಸ್ತೆಬದಿಯಲ್ಲಿ ಬಿದ್ದಿರುವ ದೃಶ್ಯ ಈಗ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರೈತರ ಆರ್ಥಿಕ ಸ್ಥಿತಿ ಅಯೋಮಯವಾಗಿದೆ. ಆದ್ದರಿಂದ ಸರ್ಕಾರ ಟೊಮೆಟೊ ಬೆಳೆಗಾರ  ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...