NEWSದೇಶ-ವಿದೇಶ

ಕೊನೆಗೂ ಕೊರೊನಾಗೆ ಸಿಕ್ಕೇಬಿಟ್ಟಿತು ಲಸಿಕೆ !

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಲಂಡನ್‌: ಕೊನೆಗೂ ವಿಶ್ವಮಾರಿ ಕೊರೊನಾಗೆ ಲಸಿಕೆ ಲಭ್ಯವಾಗುವ ಕಾಲ ಬಂದೇ ಬಿಟ್ಟಿದೆ. ಸುಮಾರು 9 ತಿಂಗಳು ವಿಶ್ವದ ಜನರನ್ನು ಕಾಡಿದ ಕೋವಿಡ್‌-19ಗೆ ಲಸಿಕೆ ತಯಾರಾಗಿದ್ದು, ಮುಂದಿನ ಮೂರು  ದಿನದಲ್ಲೇ ಚಿಕಿತ್ಸೆಗೆ ಲಭ್ಯವಾಗಲಿದೆ.

ಹೌದು! ಕೋವಿಡ್-19 ಗೆ ತುರ್ತಾಗಿ ಬಳಕೆ ಮಾಡಲು ಫಿಜರ್-ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ನಿಂದ ಅನುಮೋದನೆ ಸಿಕ್ಕಿದ್ದು, ಮುಂದಿನ ವಾರ ಲಭ್ಯವಾಗಲಿದೆ. ಈ ಬೆಳವಣಿಗೆ ಕೊರೊನಾ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ್ದು ಎಂದು ವಿಶ್ಲೇಷಿಸಲಾಗುತ್ತಿದ್ದು, ವಿಶ್ವದ ಮೊದಲ ಕೊರೊನಾ ವೈರಸ್ ಲಸಿಕೆಯೂ ಇದೇ ಆಗಿದೆ ಎಂದು ಹೇಳಲಾಗುತ್ತಿದೆ.

ಈ ಲಸಿಕೆ ಮುಂದಿನ ವಾರದ ವೇಳೆಗೆ ಚಲಾವಣೆಗೆ ಬರಲಿದ್ದು, ಕೋವಿಡ್-19 ನಿಯಂತ್ರಿಸಲು ತನ್ನ ಪ್ರಜೆಗಳಿಗೆ ಲಸಿಕೆ ಹಾಕಿಸುವುದನ್ನು ಪ್ರಾರಂಭಿಸಿದ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಬ್ರಿಟನ್ ಕೂಡ ಒಂದಾಗಿರಲಿದೆ. ಬ್ರಿಟನ್ ನಂತೆಯೇ ಇತರ ರಾಷ್ಟ್ರಗಳೂ ಸಹ ತಮ್ಮ ಪ್ರಜೆಗಳಿಗೆ ಕೋವಿಡ್-19 ಲಸಿಕೆಯನ್ನು ನೀಡುವುದಕ್ಕೆ ತುದಿಗಾಲಲ್ಲಿ ನಿಂತಿವೆ.

ಬ್ರಿಟನ್ ಸರ್ಕಾರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಲಸಿಕೆ ಮುಂದಿನ ವಾರದಿಂದ ಲಭ್ಯವಾಗಲಿದೆ ಎಂದು ಹೇಳಿದೆ. ಬ್ರಿಟನ್, 20 ಮಿಲಿಯನ್ ಮಂದಿಗೆ ಆಗುವಷ್ಟು ಫಿಜರ್ ಲಸಿಕೆಗೆ ಬೇಡಿಕೆ ಇಟ್ಟಿದೆ. ಆದರೆ ವರ್ಷಾಂತ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.

ಇನ್ನು ಕೊರೊನಾಗೆ ಲಸಿಕೆ ಕಂಡು ಹಿಡಿಯುವ ರೇಸಿನಲ್ಲಿ ಪೈಪೋಟಿ ಒಡ್ಡಿದ ದೇಶಗಳನ್ನು ಹಿಂದಿಕ್ಕಿ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಲಂಡನ್‌ ಮುಂದಿದೆ ಎಂದು ಹೇಳಲಾಗುತ್ತಿದೆ. ಅದೇನೆ ಇರಲಿ ಮಹಾಮಾರಿ ಕೊರೊನಾಗೆ ಲಸಿಕೆ ಲಭ್ಯವಾಗುತ್ತಿರುವುದು ವಿಶ್ವದ ಜನರು ನಿರಾಳರಾಗುವ ಮುನ್ಸೂಚನೆ ಎಂದು ಹೇಳಬಹುದಾಗಿದೆ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ