NEWSಉದ್ಯೋಗದೇಶ-ವಿದೇಶ

ವಿಜಯ್‌ ಮಲ್ಯ ದಿವಾಳಿತನ ಆದೇಶಕ್ಕೆ ಬ್ಯಾಂಕ್‌ಗಳ ಒಕ್ಕೂಟ ಮನವಿ

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಮಗ್ರ ಸುದ್ದಿ
    ಲಂಡನ್‌: ಬಹುಕೋಟಿ ರೂ. ಸಾಲಗಾರ ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ದಿವಾಳಿತನದ ಆದೇಶ ಹೊರಡಿಸುವಂತೆ ಕೋರಿ ಎಸ್‌ಬಿಐ ನೇತೃತ್ವದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟ ಲಂಡನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಚೀಫ್‌ ಇನ್ಸಾಲ್ವೆನ್ಸಿಯಸ್‌ ಆ್ಯಂಡ್‌ ಕಂಪನೀಸ್‌ ನ್ಯಾಯಾಲಯವು (ಐಸಿಸಿ) ವಿಚಾರಣೆ ನಡೆಸಿತು.

ವಿವಿಧ ಭಾರತೀಯ ಬ್ಯಾಂಕ್‌ಗಳಲ್ಲಿ ಸಾವಿರ ಸಾವಿರ ರೂ. ಸಾಲ ಪಡೆದು ಈಗ ಲಂಡನ್‌ನಲ್ಲಿ ಜಾಂಡ್‌ ಹೂಡಿರುವ ವಿಜಯ್‌ ಮಲ್ಯ ಅವರ ವಿರುದ್ಧ ಬ್ಯಾಂಕ್‌ಗಳ ಒಕ್ಕೂಟ ಸಮರ ಸಾರಿದ್ದು, ಸಾಲ ವಸೂತಿಗಾಗಿ ಬಹುಶಃ ಕೊನೆ ಅಸ್ತ್ರವನ್ನು ಪ್ರಯೋಗಿಸಿದೆ.

ಈ ಹಿನ್ನೆಲೆಯಲ್ಲಿ ಕೋರ್ಟ್‌ ಮೆಟ್ಟಿಲೇರಿರುವ ಒಕ್ಕೂಟ ಮಲ್ಯ ದಿವಾಳಿತನ ಆದೇಶಕ್ಕೆ ಮನವಿ ಮಾಡಿದೆ. ಈ ಸಂಬಂಧ ವಿಡಿಯೊ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಮೈಕಲ್‌ ಬ್ರಿಗ್ಸ್‌ ಅವರು ಅರ್ಜಿದಾರರು ಹಾಗೂ ಪ್ರತಿವಾದಿಗಳ ವಾದ ಆಲಿಸಿದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯ ಮೂರ್ತಿಗಳಾದ ದೀಪಕ್‌ ವರ್ಮಾ ಹಾಗೂ ಗೋಪಾಲ ಗೌಡ ಅವರು ಕ್ರಮವಾಗಿ ಮಲ್ಯ ಹಾಗೂ ಬ್ಯಾಂಕ್‌ಗಳ ಒಕ್ಕೂಟದ ಪರ ಭಾರತೀಯ ಕಾನೂನಿನ ಪರಿಣಿತರಾಗಿ ವಿಚಾರಣೆಯಲ್ಲಿ ಭಾಗವಹಿಸಿದ್ದರು.

ವಾಣಿಜ್ಯ ಉದ್ದಿ ಮೆಯಾಗಿರುವ ಬ್ಯಾಂಕೊಂದು ನೀಡಿರುವ ಸಾಲವನ್ನು ಹಿಂಪಡೆಯುವ ಸಲುವಾಗಿ ಸಾಲಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ಆ ಹಕ್ಕು ಬ್ಯಾಂಕಿಗಿದೆ’ ಎಂದು ಬ್ಯಾಂಕ್‌ಗಳ ಒಕ್ಕೂಟದ ಪರ ಬ್ಯಾರಿಸ್ಟರ್‌ ಮಾರ್ಸಿಯಾ ಶೆಕರ್ಡೆಮಿಯಾನ್‌ ವಾದಿಸಿದರು.

ಮಲ್ಯ ಪರ ಬ್ಯಾರಿಸ್ಟರ್‌ ಫಿಲಿಪ್‌ ಮಾರ್ಷಲ್‌ ಇದನ್ನು ವಿರೋಧಿಸಿದರು. ಒಂದು ಹಂತದಲ್ಲಿ ವಾದ–ಪ್ರತಿವಾದ ಜೋರಾಗಿ ಕಾವೇರಿದ ವಾತಾ ವರಣ ನಿರ್ಮಾಣವಾಯಿತು. ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಅಸಮಂಜಸ ಪ್ರಶ್ನೆಗಳನ್ನು ಕೇಳುವ ಮೂಲಕ ವಿಚಾರಣೆಯ ದಿಕ್ಕು ತಪ್ಪಿಸಬಾರದು ಎಂದು ಸೂಚಿಸಿದರು. ಬಳಿಕ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.  ಮಲ್ಯ ಕೂಡ ವಿಡಿಯೊ ಲಿಂಕ್‌ ಮೂಲಕ ವಿಚಾರಣೆ ಎದುರಿಸಿದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...