ಬೆಂಗಳೂರು: ನಟ ಜಿರಂಜೀವಿ ಸರ್ಜಾ ಅವರ ಅಂತಿಮ ವಿಧಿವಿಧಾನವನ್ನು ಇಂದು ಮಧ್ಯಾಹ್ನ ಕನಕಪುರದ ನೆಲಗೂಳಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ನೆರವೇರಲಿದೆ.
ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ಮಾಡಲು ಕುಟುಂಬ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನಾ ಬೆಳಗ್ಗೆಯಿಂದಲೇ ಬಸವನಗುಡಿಯ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ವಿಶ್ವಮಾರಿಯ ಭಯವಿರುವುದರಿಂದ ಸಾಮಾಜಿ ಅಂತರ ಕಾಯ್ದುಕೊಂಡು ಅಭಿಮಾನಿಗಳು ಮತ್ತು ಸಿನಿಮಾದ ಹಿರಿಯ ಕಿರಿಯ ನಟ ನಟಿಯರು ಮತ್ತು ಗಣ್ಯರು ಅಂತಿ ದರ್ಶನ ಪಡೆಯುತ್ತಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವ ಚಿರು ಅವರ ಅಗಲಿಕೆಯಿಂದ ಇಡೀ ಕುಟುಂಬ ಅಷ್ಟೇ ಅಲ್ಲ ಚಿತ್ರರಂಗ ಸೇರಿ ಅಭಿಮಾನಗಳಲ್ಲೂ ದುಃಖ ಮಡುಗಟ್ಟಿದೆ. ಇಷ್ಟು ಬೇಗೆ ಬಾರದ ಲೋಕಕ್ಕೆ ಏಕೆ ಪಯಣ ಬೆಳೆಸಿದರು ಚಿರು ಎಂದು ಎಲ್ಲರ ಕಣ್ಣಾಲೆಗಳು ತೇವವಾಗುತ್ತಿವೆ.
ಇನ್ನು ಪತ್ನಿ ಮೇಘನಾ ರಾಜ್ ಅವರು ಕರುಳ ಬಳ್ಳಿಯನ್ನು ಹೊತ್ತಿಕೊಂಡಿದ್ದು, ಮನೆಯಲ್ಲಿ ಸಂತಸ ವಾತಾವರಣ ನಿರ್ಮಾಣವಾಗುತ್ತಿರುವ ಈ ಹೊತ್ತಿನಲ್ಲಿ ಚಿರು ಪಯಣದಿಂದ ಕುಸಿದು ಬಿದ್ದಿದ್ದು, ದಿಕ್ಕು ತೋಚದಂತೆ ಕುಳಿತ್ತಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳು ಬಂಧು ಬಳಗದವರಲ್ಲೂ ಅಗಲಿಕೆಯ ನೋವು ಇನ್ನಿಲ್ಲದಂತೆ ಬಾಧಿಸುತ್ತಿದೆ.