ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾನುವಾರ (ನಾಳೆ) ಹೇರಲಾಗಿದ್ದ ಸಂಪೂರ್ಣ ಕರ್ಫ್ಯೂವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಜತೆ ಚರ್ಚಿಸಿದ ಬಳಿಕ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ವೀಕ್‌ಡೆಸ್‌ಗಳಲ್ಲಿ ಎಲ್ಲರೂ ಕೆಲಸದಲ್ಲಿ ಬಿಸಿಯಾಗಿರುತ್ತಾರೆ. ಇನ್ನು ರಜದಿನವಾದ ಭಾನುವಾರ ಸ್ವಲ್ಪ ಬಿಡುವಾಗುವುದರಿಂದ ಅಂದು ಮನೆಗೆ ಬೇಕಾದ ದಿನ ಸೇರಿ ಇತರೆ ವಸ್ತುಗಳನ್ನು ಕೊಂಡುಕೊಳ್ಳಲು ಅಂಥವರಿಗೆ ಅನುವು ಮಾಡಿಕೊಡಬೇಕು ಎಂಬ ದೃಷ್ಟಿಯಿಂದ ನಾಳೆಯ ಕರ್ಫ್ಯೂವನ್ನು ಸಡಿಲಿಸಿ ಎಂದಿನಂತೆ ಅವಕಾಶ ಮಾಡಿಕೊಡಲಾಗಿದೆ ಎನ್ನಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ನಾಳೆ ಕರ್ಫ್ಯೂವನ್ನು ಸಡಿಲಿಸಿರುವುದರಿಂದ ದಿನ ನಿತ್ಯದಂತೆ ಆಟೋ, ಕ್ಯಾಬ್ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಮಾಮೂಲಿನಂತೆ ಇರಲಿದೆ. ಜತೆಗೆ ಸಲೂನ್ ಶಾಪ್‌ಗಳು ತೆರೆದಿರಲಿವೆ ಎಂದು ತಿಳಿದು ಬಂದಿದೆ.
ರಾಜ್ಯಾದ್ಯಂತ ಕರ್ಫ್ಯೂವನ್ನು ಸಡಿಲಿಸಿರುವುದರಿಂದ ಅಂತರ್ ಜಿಲ್ಲೆಗೆ ಹೋಗುವವರಿಗೆ ಮತ್ತು ಜಿಲ್ಲೆ ಒಳಗಡೆ ವ್ಯವಹರಿಸುವವರಿಗೂ ಇದು ತುಂಬ ಅನುಕೂಲವಾಗಲಿದೆ ಎಂದು ಜನರು ಕೂಡ ಖುಷಿಯಲ್ಲಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail