ವಿಜಯಪಥ ಸಮಗ್ರ ಸುದ್ದಿ
ಮುಂಬೈ: ಕೊರೊನಾದಿಂದ ಗುಣಮುಖರಾದ ಕೆಲವೇ ದಿನಗಳಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಸತಾವ್ (46) ನಿಧನರಾಗಿದ್ದಾರೆ.
ಕೊರೊನಾದಿಂದ ಗುಣಮುಖರಾದರೂ ರಾಜೀವ್ ಸತಾವ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ. ಹೀಗಾಗಿ ವೆಂಟಿಲೇಟರ್ ಸಹಾಯದಿಂದಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರಾಜೀವ್ ಸತಾವ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅತ್ಯಾಪ್ತರಾಗಿದ್ದರು. ಏಪ್ರಿಲ್ 22ರಂದು ಇವರಿಗೆ ಕೊರೊನಾ ಸೋಂಕು ತಗುಲಿತ್ತು. ಕೊರೊನಾ ಬಳಿಕ ಸತಾವ್ಅವರಿಗೆ ಹೊಸ ವೈರಲ್ ಇನ್ಫೆಕ್ಷನ್ ಆಗಿ, ಗಂಭೀರ ಪರಿಸ್ಥಿತಿಯಲ್ಲಿದ್ದರು. ಹೀಗಾಗಿ ಇಂದು ಇಹಲೋಕ ತ್ಯಜಿಸಿದ್ದಾರೆ.
ರಾಜೀವ್ ಸತಾವ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಣ್‌ದೀಪ್ ಸಿಂಗ್ ಸುರ್ಜೇವಾಲಾ ಸಂತಾಪ ಸೂಚಿಸಿದ್ದು, ಯೂತ್ ಕಾಂಗ್ರೆಸ್ ಮೂಲಕ ನನ್ನೊಂದಿಗೆ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಸಹ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಫ್ರಂಟ್‍ಲೈನ್ ವಾರಿಯರ್ ನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯ, ರಾಜ್ಯಸಭಾ ಸದಸ್ಯ ಯಂಗ್ ಲೀಡರ್ ಆತ್ಮೀಯ ಸ್ನೇಹಿತ ರಾಜೀವ್ ಸತಾವ್ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ. ಪಕ್ಷವು ಅವರ ಸಮರ್ಪಣಾ ಮನೋಭಾವ, ಬಾಂಧವ್ಯ ಹಾಗೂ ಅಪಾರ ಜನಪ್ರಿಯತೆಯನ್ನು ಶ್ವಾಶ್ವತವಾಗಿ ಕಳೆದುಕೊಂಡಿದೆ. ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರು, CWC ಸದಸ್ಯರು ಆಗಿದ್ದ ರಾಜ್ಯಸಭೆಯ ಸಂಸತ್ ಸದಸ್ಯ ಯುವ ನೇತಾರ ರಾಜೀವ್ ಸತಾವ್ ಅವರು ಕೋವಿಡ್‌ನಿಂದ ನಿಧನ ಹೊಂದಿರುವ ಸುದ್ದಿ ಆಘಾತಕಾರಿ, ಅವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ.
ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ಸಂತಾಪ ಸೂಚಿಸಿದೆ.