ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ಜಿಲ್ಲೆಯ ಹಾನಗಲ್, ಬ್ಯಾಡಗಿ, ಶಿಗ್ಗಾಂವ ಹಾಗೂ ರಾಣೇಬೆನ್ನೂರ ತಾಲೂಕಿನ ಆಯ್ದ ಗ್ರಾಮಗಳ ಪಂಚಾಯಿತಿಗಳ ಚುನಾಯಿತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ರಾಣೇಬೆನ್ನೂರ ತಾಲೂಕಿನ 10-ಹುಲ್ಲತ್ತಿ, 38-ಹಾವಣಗಿ ಹಾಗೂ 40 -ಕೂಡಲ ಗ್ರಾಮ ಪಂಚಾಯಿತಿಗೆ ಹಾನಗಲ್ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ(9480695247), ಬ್ಯಾಡಗಿ ತಾಲೂಕಿನ 5-ತಡಸ ಹಾಗೂ 8-ಕಾಗಿನೆಲೆ ಗ್ರಾಮ ಪಂಚಾಯಿತಿಗೆ ಬ್ಯಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಮುನಿ ಬಿ.ಕೆ.(9480695246) ಅವರನ್ನು ನೇಮಕ ಮಾಡಲಾಗಿದೆ.
ಶಿಗ್ಗಾಂವ ತಾಲೂಕು ಹನುಮರಹಳ್ಳಿ ಗ್ರಾಮ ಪಂಚಾಯಿತಿಗೆ ಶಿಗ್ಗಾಂವ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಸರಸ್ವತಿ ಗಜಕೋಶ(9483556756).
ರಾಣೇಬೆನ್ನೂರು ತಾಲೂಕಿನ 27-ಅಂತರವಳ್ಳಿ, 28-ಕುಪ್ಪೇಲೂರು,30-ಮಾಳನಾಯಕನಹಳ್ಳಿ ಗ್ರಾಪಂಗಳಿಗೆ ರಾಣೇಬೆನ್ನೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವಲಾನಾಯ್ಕ ಲಮಾಣಿ ಹಾಗೂ 31-ಸುಣಕಲ್ಲಬಿದರಿ, 32-ತುಮ್ಮಿನಕಟ್ಟಿ ಹಾಗೂ 33-ಜೋಯಿಸರಹರಹಳ್ಳಿ ಗ್ರಾಮ ಪಂಚಾಯಿತಿಳಿಗೆ ರಾಣೇಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್ ಎನ್.ಜೆ. ಅವರನ್ನು ನೇಮಕ ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ.