NEWSನಮ್ಮಜಿಲ್ಲೆರಾಜಕೀಯ

ಸ್ಮಶಾನ, ಚಿತಾಗಾರಗಳ ಕಾರ್ಮಿಕರಿಗೆ 10ತಿಂಗಳಿಂದ ವೇತನ ನೀಡದ ಬಿಬಿಎಂಪಿ: ಎಎಪಿಯ ಕುಶಲ ಸ್ವಾಮಿ ಕಿಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೋವಿಡ್‌ ಕಾಲದಲ್ಲೂ ಮೃತಪಟ್ಟವರ ಅಂತ್ಯಕ್ರಿಯೆಗೆ ನೆರವಾಗುತ್ತಿರುವ ಸ್ಮಶಾನ ಹಾಗೂ ಚಿತಾಗಾರಗಳ ಕಾರ್ಮಿಕರಿಗೆ ತಿಂಗಳುಗಟ್ಟಲೆ ಸಂಬಳ ನೀಡದೆ ಬಿಬಿಎಂಪಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದು, ಶೀಘ್ರದಲ್ಲೇ ಅವರ ವೇತನ ಪಾವತಿ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ ಬೆಂಗಳೂರು ಮಹಿಳಾ ಘಟಕದ ನಗರಾಧ್ಯಕ್ಷೆ ಕುಶಲಾ ಸ್ವಾಮಿ ಬಿಬಿಎಂಪಿ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಇಂದು ಬ್ರಿಗೇಡ್ ರಸ್ತೆ ಬಳಿಯ ಕ್ಯಾಸ್ಟಲ್ ಸ್ಟ್ರೀಟ್‌ನ ಆಮ್ ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯ ಕೆಲ ವಲಯಗಳಲ್ಲಿ ಸ್ಮಶಾನ ನಿರ್ವಾಹಣ ಸಿಬ್ಬಂದಿ ಸಂಬಳದ ಮುಖ ನೋಡಿ 10 ತಿಂಗಳಿಗೂ ಹೆಚ್ಚು ಕಾಲ ಕಳೆದಿದೆ. ಬಿಬಿಎಂಪಿ ಅಧಿಕಾರಿಗಳ ಈ ನಡೆಯಿಂದ ಕಾರ್ಮಿಕರ ಕುಟುಂಬ ಹಸಿವಿನಿಂದ ನರಳುವಂತಾಗಿದೆ. ಅಧಿಕಾರಿಗಳಿಗೆ ಮಾನವೀಯತೆ ಜತೆಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ತಡೆ ಹಿಡಿದಿರುವ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಅವರಿಗೆ ಇಂತಿಷ್ಟು ಸಂಬಳ ಎಂಬುದು ಇರಲಿಲ್ಲ ತಿಂಗಳೊಳಗೆ 2000 ರೂ. ವರೆಗೆ ನೀಡುತ್ತಿದ್ದರು. ನಂತರ ಕಾಂಗ್ರೆಸ್‌ನ ಜಿ. ಪದ್ಮಾವತಿ ಅವರು ಮೇಯರ್ ಆಗಿದ್ದಾಗ ಮಾಸಿಕ ವೇತನ 10500 ರೂ. ನಿಗದಿಯಾಯಿತು. ಬಳಿಕ ವೇತನ ಹೆಚ್ಚಿಸದ ಕಾರಣ ಈ ಸಂಬಳದಿಂದ ಕುಟುಂಬ ನಿರ್ವಾಹಣೆ ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ಪ್ರತಿಭಟನೆ ನಡೆಸಿದ ನಂತರ ತಿಂಗಳಿಗೆ 17000 ಕನಿಷ್ಠ ವೇತನ ನಿಗದಿ ಪಡಿಸುವಂತೆ ಹಿಂದಿನ ಬಿಬಿಎಂಪಿ ಆಯುಕ್ತರು ಆದೇಶ ಮಾಡಿದ್ದರು.

ಆದರೆ ಅಂದಿನಿಂದ ಕಾರ್ಮಿಕರಿಗೆ ಕೆಲ ವಲಯಗಳಲ್ಲಿ ಸಂಬಳವನ್ನು ನೀಡುತ್ತಿಲ್ಲ. ಇನ್ನು ದಕ್ಷಿಣ ವಲಯಗಳಲ್ಲಿ ಸಂಬಳ ಆಗಿಯೇ ತಿಂಗಳುಗಳು ಕಳೆದಿವೆ. ಪಶ್ಚಿಮ ವಲಯದಲ್ಲಿ ಒಂಬತ್ತು ತಿಂಗಳಿನಿಂದ ಸಂಬಳದ ಮುಖವನ್ನೇ ಕಾರ್ಮಿಕರು ನೋಡಿಲ್ಲ. ರಾಜರಾಜೇಶ್ವರಿ ವಲಯದಲ್ಲಿ ಮೂರು ತಿಂಗಳಿನಿಂದ ವೇತನ ನೀಡಿಲ್ಲ.

ಸಂಬಳ ಬಿಡುಗಡೆಗೆ ಕೆಲವು ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಏನು ಮಾಡಬೇಕು ಎಂಬ ದಿಕ್ಕೇ ತೋಚದಂತಾಗಿದೆ. ನಮ್ಮನ್ನು ಕೇಳುವವರಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ ಆದರೂ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ ಎಂದು ಕಿಡಿಕಾರಿದರು.

ಈ ಹಿಂದೆ ಅಂತ್ಯಕ್ರಿಯೆಗೆ ಬಳಸುವ ಅಕ್ಕಿಗಳನ್ನು ಬಳಸುತ್ತಿದ್ದ ಕಾರ್ಮಿಕರು ಕೋವಿಡ್‌ ಕಾಣಿಸಿಕೊಂಡ ಬಳಿಕ ಭಯಗೊಂಡು ಅದನ್ನು ಬಳಸುವುದನ್ನು ನಿಲ್ಲಿಸಿದ್ದಾರೆ. ಜನರು ಅವರ ಕೆಲಸ ಮೆಚ್ಚಿ ಒಂದಿಷ್ಟು ಭಕ್ಷೀಸು ನೀಡುತ್ತಿದ್ದರು ಈಗ ಅದು ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಜನರು ಕೊಡುವ ಭಕ್ಷೀಸು ಕಾರ್ಮಿಕರಿಗೆ ಬೇಡ ಬಿಬಿಎಂಪಿ ನಿಗದಿ ಪಡಿಸಿರುವ ವೇತನವನ್ನು ಸಮಯಕ್ಕೆ ಸರಿಯಗಿ ಬಿಡುಗಡೆ ಮಾಡಿದರೆ ಕಾರ್ಮಿಕರು ನೆಮ್ಮದಿಯ ಜೀವನ ಮಾಡುತ್ತಾರೆ ಎಂದು ಹೇಳಿದರು.

ಕೋವಿಡ್‌ನಿಂದ ಮೃತಪಟ್ಟವರ ಕಳೆಬರಹ ಅಂತ್ಯಕ್ರಿಯೆ ವೇಳೆ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್‌) ಧರಿಸಬೇಕು. ಚಿತಾಗಾರದಲ್ಲಿ ಮೊದಲೇ ಬೆಂಕಿಯ ಬೇಗೆ. ಅರ್ಧ ತಾಸು ಕೆಲಸ ಮಾಡಲು ಸಾಧ್ಯವಿಲ್ಲ. ಇನ್ನು ಪಿಪಿಇ ಕಿಟ್‌ ಧರಿಸಿ ಕೆಲಸ ಮಾಡುವ ಅವರ ಸ್ಥಿತಿ ಹಗಿರುತ್ತದೆ ಎಂಬುದರ ಅರಿವು ಅಧಿಕಾರಿಗಳಿಗೆ ಇಲ್ಲದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‌ ಕಾಣಿಸಿಕೊಂಡಾಗ ಒಂದು ತಿಂಗಳ ಸಂಬಳವನ್ನು ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡಿದ ಉದಾರಿಗಳು ಇವರು. ಇವರಿಗೆ ಸಂಬಳ ಪಾವತಿಸದಿರುವುದು ದುರಂತ. ಇದು ಹೀಗೆ ಮುಂದುವರಿದರೆ ಕಾರ್ಮಿಕರ ಪರವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ