NEWSನಮ್ಮಜಿಲ್ಲೆಸಂಸ್ಕೃತಿ

ಸರಳವಾಗಿ ನಡೆದ ಬೆಕ್ಕರೆ ಬಾಲಚಂದ್ರ ಬಸವೇಶ್ವರಸ್ವಾಮಿಯ ಓಕಳಿ ಹಬ್ಬ

ವಿಜಯಪಥ ಸಮಗ್ರ ಸುದ್ದಿ

 ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲೂಕಿನ ಬೆಕ್ಕರೆ ಗ್ರಾಮದ ಶ್ರೀ ಬಾಲಚಂದ್ರ ಬಸವೇಶ್ವರಸ್ವಾಮಿಯ ಓಕಳಿ ಹಬ್ಬ ಈ ಬಾರಿ ಸರಳವಾಗಿ ನಡೆಯಿತು.

ಪ್ರತಿವರ್ಷ ಯುಗಾದಿ ಹಬ್ಬ ಕಳೆದ ವಾರಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ವಿವಿಧೆಡೆಯ ಸಾವಿರಾರು ಭಕ್ತಾದಿಗಳ ಸಮ್ಮುಖ ಓಕಳಿ ಹಬ್ಬವನ್ನು ವಿಜ್ರಂಭಣೆಯಿಂದ ಎರಡು ದಿನಗಳ ಕಾಲ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕು ದಿನೇದಿನೆ ಹೆಚ್ಚುತ್ತಿರುವ ಕಾರಣ ಗ್ರಾಮದ ವಿವಿಧ ಕೋಮುಗಳ ಯಜಮಾನರು, ಮುಖಂಡರು ಹಾಗೂ ಗ್ರಾಮಸ್ಥರೆಲ್ಲರೂ ಚರ್ಚಿಸಿ ವಿಜೃಂಭಣೆಯ ಆಚರಣೆ, ಹರಕೆ ಸೇವೆಗಳು, ಜಾತ್ರೆ ಮಳಿಗೆಗಳು ಮತ್ತು ಹೊರಗಿನ ಭಕ್ತಾದಿಗಳಿಗೆ ನಿರ್ಬಂಧ ಹೇರಿ ಕೇವಲ ಗ್ರಾಮಸ್ಥರ ಸಮ್ಮುಖ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿತ್ತು.

ಸೋಮವಾರ ರಾತ್ರಿ ಕುಶಾಲನಗರದ ಕಾವೇರಿ ನದಿಯಿಂದ ಒಳಾಗ್ನಿ (ಗಂಗಾಜಲ) ತರುವ ಮೂಲಕ ಓಕಳಿ ಹಬ್ಬದ ಆಚರಣೆಗೆ ಚಾಲನೆ ದೊರೆತು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು, ನಂತರ ಗ್ರಾಮದ ಹೊರವಲಯದಿಂದ ಶ್ರೀ ಮೂರೂರಮ್ಮ ತಾಯಿ ದೇವರ ಕಳಸ ತಂದು ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಮಂಗಳವಾರದಂದು ಬೆಳಗ್ಗೆ ಪುಟಾಣಿ ಹೆಣ್ಣುಮಕ್ಕಳು ಗ್ರಾಮದ ಹೊರವಲಯದ ಗಂಗಾಸ್ಥಳದಿಂದ ಗಂಗೆಯನ್ನು ಹೊತ್ತು ವಿಶೇಷ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ಓಕಳಿ ಕೊಳ ತುಂಬಿಸಲಾಯಿತು, ಮಧ್ಯಾಹ್ನ ಶ್ರೀ ಬಾಲಚಂದ್ರ ಬಸವೇಶ್ವರ ಸ್ವಾಮಿಯ ಉತ್ಸವ ಮೆರವಣಿಗೆಗೆ ಚಾಲನೆ ದೊರೆತ ನಂತರ ಗ್ರಾಮದ ಚಿಣ್ಣರು ಓಕಳಿ ಆಡಿ ಸಂಭ್ರಮಿಸಿದರು. ಈ ವೇಳೆ ಭಕ್ತಾದಿಗಳಿಗೆ ಪಾನಕ ಹಾಗೂ ಮಜ್ಜಿಗೆ ವಿತರಿಸಲಾಯಿತು.

ಸಂಜೆ ಶ್ರೀ ಬಾಲಚಂದ್ರ ಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಹಾಗೂ ಮೂರೂರಮ್ಮ ತಾಯಿಯ ಉತ್ಸವದ ಮೆರವಣಿಗೆ  ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಶೇಷ ವಾದ್ಯಗಳೊಂದಿಗೆ ನಡೆಸಿ ಪ್ರತಿ ಮನೆಗಳ ಬಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ತರುವ ಮೂಲಕ ಎರಡು ದಿನಗಳ ಕಾಲ ನಡೆದ ಓಕಳಿ ಹಬ್ಬ ಮುಕ್ತಾಯಗೊಂಡಿತು.

ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ಬಿ.ವಿ ಬಸವರಾಜ್, ನಟರಾಜ್, ರಕ್ಷಿತ್ ರಾಜ್ ಹಾಗೂ ಬಿ.ಸಿ ವಿಶ್ವನಾಥ್ ನೆರವೇರಿಸಿದರು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ