ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಆಗಿದೆಯಂತೆ.
ಬೆಳಗಾವಿಯಲ್ಲಿ ಸಚಿವ ಭೈರತಿ ಬಸವರಾಜು ಈ ಹೇಳಿಕೆ ನೀಡಿದ್ದು, ಹಲವರ ಕೋಪಕ್ಕೂ ಈಗ ಸಚಿವರು ಗುರಿಯಾಗಿದ್ದಾರೆ.
ಇದರಿಂದ ಸಿಡಿ ಕೇಸ್‌ಗೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದ್ದು, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಯಾರಾರರಿಂದ ಇನ್ನೇನೇನು ಹೇಳಿಕೆ ಕೊಡಿಸುತ್ತದೋ ಎಂದು ಜನರು ಕಿಡಿಕಾರುತ್ತಿದ್ದಾರೆ.
ಇನ್ನು ಸಚಿವ ಭೈರತಿ ಬಸವರಾಜ ಹೇಳಿಕೆ ಹಲವರು ಪ್ರತಿಕ್ರಿಯೆ ನೀಡುತ್ತಿದ್ದು, ಇದು ಕೊರೊನಾ ವೈರಸ್ ಕಾಟವೋ ಅಥವಾ ಎಸ್‌ಐಟಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಬಂದ ಜ್ವರವೋ ಎಂದು ಪ್ರಶ್ನಿಸುತ್ತಿದ್ದಾರೆ.
ಒಂದು ಕಡೆ ಎಡೆಬಿಡದೆ ಎಸ್‌ಐಟಿ ದೂರುದಾರ ಸಂತ್ರಸ್ತೆಯನ್ನೇ ಆರೋಪಿ ಎಂಬಂತೆ ವಿಚಾರಣೆ ನಡೆಸುತ್ತಿದೆ. ಇತ್ತ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜ ಮಾರ್ಗದಲ್ಲೇ ತಿರುಗಾಡಿಕೊಂಡು ಇದ್ದಾರೆ.
ಇದನ್ನು ಗಮನಿಸಿದರೆ ಉಳ್ಳವರಿಗಾಗಿ ಈ ಸಂವಿಧಾನ ರಚನೆಯಾಗಿದೆಯೇ ಎಂದು ಜನಸಾಮಾನ್ಯ ಸಂವಿಧಾನವದ ದಿಕ್ಕು ತಪ್ಪಿಸಲು ಹೊರಟಿಎಉವ ಅಧಿಕಾರಿಗಳು ಮತ್ತು ರಾಜಕೃಣಿಗಳನ್ನು ಪ್ರಶ್ನಿಸುತ್ತಿದ್ದಾನೆ.
ಆದರೆ, ಈ ಪ್ರಶ್ನೆಗೆ ಇವರಾರು ಉತ್ತರ ನೀಡುತ್ತಿಲ್ಲ. ಇದರ ಅರ್ಥ ಏನು ಎಂಬುವುದು ಈಗಲೂ ಯಕ್ಷ ಪ್ರಶ್ನೆಯಾಗಿಯೇ ಉಳಿದೆ. ಈ ರೀತಿಯಾದರೆ ದೇಶದಲ್ಲಿ ಜನಸಾಮಾನ್ಯ ಬದುಕಲು ಸಾಧ್ಯವೆ ಎಂಬುದನ್ನು ಸರ್ಕಾರ ಮತ್ತು ಅಧಿಕಾರಿಗಳು ತಿಳಿಸಬೇಕು ಎಂದು ಕೇಳುತ್ತಿದ್ದಾನೆ.
ಇದಕ್ಕೆ ಮುಂದೊಂದು ದಿನ ಎಸ್‌ಐಟಿ ಅಧಿಕಾರಿಗಳು ಉತ್ತರ ನೀಡುವರು ಎಂಬ ನಂಬಿಕೆಯಿಂದ ನಾವು ಕಾಯೋಣ ಎಂದು ಜನಸಾಮಾನ್ಯ ಹೇಳುತ್ತಿದ್ದಾನೆ.