NEWSನಮ್ಮಜಿಲ್ಲೆ

ರಾಜ್ಯ ಒಕ್ಕಲಿಗರ ಸಂಘದ ಪುನರುಜ್ಜೀವನಕ್ಕಾಗಿ ನನ್ನ ಸ್ಪರ್ಧೆ: ಸತೀಶ್ ಗೌಡ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರಾಜ್ಯ ಒಕ್ಕಲಿಗರ ಸಂಘದ ಪುನರುಜ್ಜೀವನಕ್ಕಾಗಿ ನಾನು ಸಂಘದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಅಭ್ಯರ್ಥಿ ಹಾಗೂ ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್‌ ಅಧ್ಯಕ್ಷ ಎಚ್‌. ಸತೀಶ್ ಗೌಡ ಹೇಳಿದ್ದಾರೆ.

ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ 12ರಂದು  ನಡೆಯಲಿರುವ ಒಕ್ಕಲಿಗರ ಸಂಘದ ಚುನಾವಣೆಗೆ ನ. 15 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ.

ನಾನು ಈ ಬಾರಿಯ ಚುನಾವಣೆಯಲ್ಲಿ ಸಮಾನ ಮನಸ್ಕ ಸಮುದಾಯದ ಸಹಯೋಗ ಹಾಗೂ ಆಶೀರ್ವಾದದೊಡನೆ ರಾಜ್ಯ ಒಕ್ಕಲಿಗರ ಸಂಘದ ಪುನರುಜ್ಜಿವನದ ದ್ಯೇಯವನ್ನು ಮೈಗೂಡಿಸಿಕೊಂಡು ಚುನಾವಣಾ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಹೇಳಿದರು.

ಮೈಸೂರು – ಚಾಮರಾಜನಗರ ನೀಲಗಿರಿ ಭಾಗವನ್ನು ಪ್ರತಿನಿಧಿಸುವವನಿದ್ದೇನೆ ಹೀಗಾಗಿ ಸೋಮವಾರ ಬೆಳಗ್ಗೆ 10.30ಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಹಕಾರ ಭವನದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.

1906 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹಯೋಗದಲ್ಲಿ ಜಾತ್ಯತೀತ ಸಂತ ಕೆ.ಎಚ್. ರಾಮಯ್ಯನವರ ನೇತೃತ್ವದಲ್ಲಿ ಉಗಮಿಸಿದ ಸಂಸ್ಥೆ ಹಲವು ವರ್ಷಗಳ ಕಾಲ ರೈತಾಪಿ ವರ್ಗವಾದ ಒಕ್ಕಲಿಗರ ಶಿಕ್ಷಣದ ಜವಾಬ್ದಾರಿ ಹೊತ್ತು ನಿರ್ವಹಿಸಿದ ಸಂಸ್ಥೆಯಾಗಿತ್ತು. ತೀರ ಇತ್ತೀಚೆಗೆ ಸಂಘ ಹಲವು ಬೇಡದ ವಿಷಯಗಳಿಗೆ ಮೈ ಒಡ್ಡಿಕೊಂಡು ಸಮುದಾಯದ ಗೌರವ ಸಂಘದ ಹೆಸರಿನಲ್ಲಿ ಮಸುಕಾಗುವಂತೆ ಮಾಡಿದೆ ಎಂದರು.

ಇನ್ನು 2018 ರಲ್ಲಿ ಸಂಘ ಸೂಪರ್ ಸೀಡ್ ಆಗಿದ್ದು ಮಾತ್ರ ನನಗೆ ನೋವು ತಂದಿತು. ಸಂಘವನ್ನು ಮುಂದಿನ ತಲೆಮಾರಿಗೆ ಗೌರವಯುತವಾಗಿ ಕೊಂಡೊಯ್ಯಬೇಕು ಎಂದರೆ ಸಂಘಕ್ಕೆ ಹೊಸ ತಲೆಮಾರಿನ ಇಚ್ಚಾಶಕ್ತಿ ಹಾಗೂ ದೂರದೃಷ್ಟಿಯುಳ್ಳ ನಿರ್ದೇಶಕರು ಬರಬೇಕು. ಅದಕ್ಕೆ ನಾನೇ ಮುನ್ನುಡಿ ಬರೆಯಬೇಕೆಂದು ಕಳೆದ ಐದಾರು ವರ್ಷಗಳಿಂದ ಜನಜಾಗೃತಿ ಮಾಡುತ್ತಾ ಸಂಘದ ಹುಟ್ಟು ಉದ್ದೇಶ ಇತಿಹಾಸ ತಿಳಿಸುತ್ತಾ ಸಂಘದ ಇಂದಿನ ಸ್ಥಿತಿಗತಿ ಮುಂದೆ ಬರಬೇಕಾದ ಬದಲಾವಣೆಗಳು ಏನು ಎಂದು ಮನವರಿಕೆ ಮಾಡುತ್ತಾ ನನಗೊಂದು ಮತನೀಡಿ ಎಂದು ಹೇಳಿಕೊಂಡರು.

ನಾನು ಕಂಡತೆ ಸಮಾಜದ ಬಗ್ಗೆ ಅತೀವ ಕಾಳಜಿಯುಳ್ಳ ಸತೀಶ್ ಗೌಡ ಅವರ ಗೆಲುವು ಒಕ್ಕಲಿಗರ ಅಶ್ಮಿತೆ ಗೆದ್ದಹಾಗೆ. ನಮ್ಮ ಸಮುದಾಯದ ಪ್ರತಿನಿಧಿಯಾಗಲು ಅರ್ಹರು ಅವರ ದೂರದೃಷ್ಟಿಗೆ ನಾನು ಬೆಂಬಲಿಸುತ್ತಿದ್ದೇನೆ ಅದರಲ್ಲಿ ಸಫಲರಾಗುತ್ತಾರೆ ಸಹ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪ್ರಶಾಂತ್ ಗೌಡ ಮಾತನಾಡಿ, ಸಮುದಾಯದ ಪರವಾದ ಧ್ವನಿ ಸತೀಶ್ ಗೌಡ. ಅವರುಹಲವಾರು ವರ್ಷಗಳ ಕಾಲ ಸಮುದಾಯದ ಕೆಲಸ ಮಾಡಿದ್ದಾರೆ. ಅವರು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಅರ್ಹರು. ಮತ ಖರೀದಿ ಮಾಡಲು ಬರುವ ಸಮಾಜ ಘಾತುಕರನ್ನು ದೂರವಿಡಿ ಎಂದರು.

ದೇವರಾಜ ಮಾರುಕಟ್ಟೆ ಉದ್ದಿಮೆದಾರರ ಸಂಘದ ಅಧ್ಯಕ್ಷ ಎಸ್ ಮಹದೇವ, ಮೈಸೂರು ಯುವ ಜನತಾದಳ ಅಧ್ಯಕ್ಷ ಲೋಕೇಶ್, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ರವಿ, ಗಿರೀಶ್ ಗೌಡ, ಭಾಜಪ ಮುಖಂಡ ಈರೇ ಗೌಡ ಮತ್ತಿತರರು ಇದ್ದರು.

  • ಸತೀಶ್‌ಗೌಡ ಅವರ ಆದ್ಯತೆಯ ಕಾರ್ಯಕ್ರಮಗಳು

    1)ಮೈಸೂರಿನಲ್ಲಿ ಕೆಂಪೇಗೌಡ ಆಸ್ಪತ್ರೆಯ ಅಂಗ ಸಂಸ್ಥೆಯಾಗಬೇಕು ಶೇ.10 ರ ರಿಯಾಯಿತಿ ದರದ ಚಿಕಿತ್ಸೆ ದೊರಕಬೇಕು
    2)ಉಚಿತ ಕೇಂದ್ರ ಹಾಗೂ ರಾಜ್ಯ ಲೋಕ ಸೇವಾ ಆಯೋಗದ ಪರೀಕ್ಷಾ ತರಬೇತಿ
    3) ಸ್ಥಳಿಯವಾಗಿ ಉದ್ಯೋಗ ಸೃಷ್ಟಿ  
    4) ತಾಲೂಕು ಮಟ್ಟದಲ್ಲಿ ಉಚಿತ  ಹಾಸ್ಪೆಟಲ್ ನಿರ್ಮಾಣ 
    5) ಸಮುದಾಯ ಭವನ ನಿರ್ಮಾಣ
    6) ಸ್ಕಿಲ್ ಡೆವಲಪ್‌ಮೆಂಟ್ ತರಬೇತಿ
    ಹೀಗೆ ಹಲವಾರು ಕಾರ್ಯಕ್ರಮಗಳು ಮೈಸೂರಿನಲ್ಲೇ ನಮ್ಮವರಿಗೆ ಸಿಗಬೇಕು ಎಂಬ ದೂರದೃಷ್ಟಿಯ ಯೋಜನೆಗಳೊಂದಿಗೆ ನಾನು ಚುನಾವಣೆಗೆ ಸ್ಪರ್ಧೆ ಬಯಸಿದ್ದೇನೆ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ