ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಯಾರೂ ಕೂಡ ಸತ್ಯಹರಿಶ್ಚಂದ್ರರಲ್ಲ. ಇನ್ನು ಎಲ್ಲರ ಮನೆ ದೋಸೆನೂ ತೂತೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಭೂಮಿ ಮೇಲೆ ಜನ್ಮ ತಳೆದಿರುವ ಪ್ರತಿಯೊಂದು ಜೀವಿಗೂ ಸಹಜ ಪ್ರಕ್ರಿಯೆ ಇದೆ, ಈ ಹಿಂದೆ ನಾನು ಎಡವಿದ್ದ ಬಗ್ಗೆ ಅಧಿವೇಶನದಲ್ಲಿ ಹೇಳಿ ತಪ್ಪಿಕೊಂಡಿದ್ದೆ.
ಇಲ್ಲಿ ಯಾರು ಹರಿಶ್ಚಂದ್ರರಲ್ಲ, ಸುಖಸುಮ್ಮನೆ ಏಕೆ ರಾಡಿ ಎರಚಿಕೊಳ್ಳುತ್ತೀರಿ. ನೀವು ಸತ್ಯವಂತರಾದರೇ ಕೋರ್ಟ್ ಗೆ ಹೋಗಿ ಏಕೆ ತಡೆಯಾಜ್ಞೆ ತಂದಿರಿ ಎಂದು ಮಾತಿನಲ್ಲೇ ಚಾಟಿ ಬೀಸಿದ ಅವರು, ಈ ಮಾತು ಇರಲಿ ಮಾಡಿರುವ ತಪ್ಪು ಒಪ್ಪಿಕೊಂಡಿರುವಾಗ ನನ್ನ ಹೆಸರನ್ನು ಏಕೆ ಈಗ ಎಳೆದು ತರುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ನೀವೇ ಸಮಸ್ಯೆ ತಂದು ಬೇರೆಯವರ ಮೇಲೆ ಏಕೆ ಕೆಸರು ಎರಚುತ್ತಿದೀರಿ. ಇದು ನಿಮಗೆ ಶೋಭೆ ತರುತ್ತದ. ಹೇಡಿಗಳ ರೀತಿ ನಡೆದುಕೊಳ್ಳುವುದನ್ನು ಬಿಟ್ಟು ಮೊದಲು ಮಾಡಿದ ತಪ್ಪಿಗೆ ಕ್ಷೆಮೆ ಕೇಳಿ ಎಲ್ಲರ ಮುಂದೆ ನೈತಿಕತೆ ಉಳಿಸಿಕೊಳ್ಳಿ ಎಂದು ಹೇಳಿದರು.
ಗಂಟೆಗೊಂದು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಬೀದಿಯಲ್ಲಿ ನಿಂತು ನಗೆಪಾಟಲಿಗೀಡಾಗುತ್ತಿದ್ದೀರಿ. ಅದಲು ಅದರಿಂದ ಹೊರ ಬನ್ನಿ ಎಂದ ಕುಮಾರ ಸ್ವಾಮಿ, ಜನರ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಸಮಯ ವ್ಯರ್ಥ ಮಾಡುವುದು ಎಷ್ಟು ಸರಿ ಎಂದು ಕಿಡಿಕಾರಿದರು.