ಎಲ್ಲಿಗೆ ಹೋಗುತ್ತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಮೂಲಗಳಿಂದ ಬರುತ್ತಿರುವ ಆದಾಯ – ಮೂಲ ಹುಡುಕಿದರೆ…!?
ನವೆಂಬರ್ ಅರ್ಧ ತಿಂಗಳು ಕಳೆದರು ಇನ್ನೂ ಸಿಕ್ಕಿಲ್ಲ ಸಾರಿಗೆ ನೌಕರರಿಗೆ ಸೆ-ಅ ತಿಂಗಳ ಅರ್ಧ + ಅರ್ಧವೇತನ
ಬೆಂಗಳೂರು: ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಈ ಎರಡು ತಿಂಗಳುಗಳ ಅರ್ಥ ವೇತನವನ್ನು ನೌಕರರಿಗೆ ಕೊಟ್ಟು ಸಾರಿಗೆ ಇಲಾಖೆ ಉಳಿದ ಅರ್ಧ + ಅರ್ಧ = ಒಂದು ತಿಂಗಳ ವೇತನನ್ನು ಇನ್ನೂ ಬಿಡುಗಡೆ ಮಾಡದೆ ಮೀನಮೇಷ ಎಣಿಸುತ್ತಿದೆ.
ಈ ಮೊದಲು ಕೋವಿಡ್‌ನಿಂದ ಬಸ್‌ಗಳಲ್ಲಿ ಜನರು ಪ್ರಯಾಣಿಸುತ್ತಿಲ್ಲ ಇದರಿಂದ ಲಾಸ್‌ನಲ್ಲಿ ನಿಗಮಗಳು ಮುಳುಗುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಆದರೆ ಪ್ರಸ್ತುತ ಜನರು ಇಂಧನ ಏರಿಕೆ ಕೊರೊನಾ ಹೊಡೆತಕ್ಕೆ ಸಿಲುಕಿ ಆರ್ಥಿಕವಾಗಿ ಕುಗ್ಗಿರುವುದರಿಂದ ಸ್ವಂತ ವಾಹನಗಳನ್ನು ಮನೆಯಲ್ಲೇ ನಿಲ್ಲಿಸಿ ಸಾರ್ವಜನಿಕ ಸಾರಿಗೆ ಬಸ್‌ನಲ್ಲೇ ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ.
ಇದರಿಂದ ಪ್ರಸ್ತುತ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾಯದಲ್ಲೂ ಹೆಚ್ಚಳವಾಗಿದೆ. ಆದರೆ, ನೌಕರರಿಗೆ ವೇತನ ನೀಡಲು ಮಾತ್ರ ಇನ್ನು ಆಗುತ್ತಿಲ್ಲ. ಹೀಗಾಗಿ ತಿಂಗಳು ಪೂರ್ತಿ ದುಡಿದರೂ ವೇತನ ಕೈಗೆ ಸಿಗದೆ ಸಾಲ ಮಾಡಿಕೊಂಡು ಸಂಸಾರ ನಡೆಸುವಂತಾಗಿದೆ ನೌಕರರ ಸ್ಥಿತಿ.
ಇನ್ನು ಈ ಬಗ್ಗೆ ಸಾರಿಗೆ ಸಚಿವರು ಇಲ್ಲ ಎಲ್ಲ ಅಧಿಕಾರಿಗಳು ಮತ್ತು ನೌಕರರಿಗೆ ಒಂದೇ ದಿನಾಂಕದಂದು ವೇತನ ಬಿಡುಗಡೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ತಾರತಮ್ಯತೆಯನ್ನು ಹೋಗಲಾಡಿಸಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ ನವೆಂಬರ್ 13ನೇ ತಾರೀಖು ಬಂದರೂ ನೌಕರರಿಗೆ ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಈ ಎರಡು ತಿಂಗಳುಗಳ ಸಂಬಳ ಮಾತ್ರ ಬಿಡುಗಡೆ ಮಾಡದೆ ಸಬೂಬು ಹೇಳುತ್ತಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ನಿತ್ಯ ಓಡಾಡುವ ಸಾರ್ವಜನಿಕರು ಮಾಸಿಕ ಪಾಸ್‌ಗಳನ್ನು ತಿಂಗಳ ಮೊದಲ ವಾರದಲ್ಲೇ ತೆಗೆದುಕೊಳ್ಳುತ್ತಾರೆ. ಆ ಪಾಸ್‌ಗಳಿಂದಲೂ ಸಂಸ್ಥೆಗೆಳಿಗೆ ಕೋಟ್ಯಂತರ ರೂ.ಗಳು ಬರುತ್ತದೆ. ಜತೆಗೆ ನಿತ್ಯ ಪಾಸ್, ವಾರದ ಪಾಸ್ ಹೀಗೆ ಈ ಪಾಸ್‌ಗಳಿಂದಲೂ ಆದಾಯ ನಿಗಮಗಳ ಖಜಾನೆಗೆ ಮೊದಲೇ ಬಂದು ಸೇರಿ ಬಿಡುತ್ತದೆ. ಆದರೆ, ಈ ಪಾಸ್‌ಗಳಿಂದ ಬಂದ ಆದಾಯ ಎಷ್ಟು ಎಂಬುದರ ಬಗ್ಗೆ ಈವರೆಗೂ ಅಧಿಕಾರಿಗಳು ನಿಖರವಾದ ಮಾಹಿತಿ ನೀಡುತ್ತಿಲ್ಲ.
ಇನ್ನು ವಿದ್ಯಾರ್ಥಿ ಪಾಸ್‌ಗಳು, ಕಾರ್ಮಿಕ, ಪತ್ರಕರ್ತ, ಪೊಲೀಸ್, ಸೈನಿಕರು ಸೇರಿ ವಿವಿಧ ಪಾಸ್‌ಗಳ ವಿತರಣೆ ಮಾಡುವುದರಿಂದ ನಿಗಮಗಳಿಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಗಳಿಂದ ಹಣ ಬರಿಸುತ್ತವೆ. ಹೀಗಾಗಿ ಈ ರೀತಿ ಯಾವ ಇಲಖೆಯಿಂದ ಎಷ್ಟು ಹಣ ನಿಗಮಕ್ಕೆ ಬಂದಿದೆ ಎಂಬುದರ ಮಾಹಿತಿಯೂ ಸಿಗುತ್ತಿಲ್ಲ.
ಅಲ್ಲದೆ ಸರ್ಕಾರ ಉಚಿತವಾಗಿ ವಿತರಿಸುವ ವಿವಿಧ ಪಾಸ್‌ಗಳ ನಿಗದಿತ ಶುಲ್ಕವನ್ನು ಸಾರಿಗೆ ನಿಗಮಕ್ಕೆ ಪಾವತಿಸಬೇಕು. ಆ ರೀತಿಯ ಪಾಸ್‌ಗಳಿಗೆ ಸರ್ಕಾರ ಎಷ್ಟು ಕೋಟಿ ರೂ. ನಿಗಮಕ್ಕೆ ಕೊಟ್ಟಿದೆ ಎಂಬ ಮಾಹಿತಿಯೂ ಸಂಬಂಧಪಟ್ಟ ಅಧಿಕಾರಿಗಳ ಬಳಿ ಸಿಗುತ್ತಿಲ್ಲ.
ಇನ್ನು ಇಷ್ಟೆಲ್ಲ ಪಾಸ್‌ಗಳಲ್ಲಿ ಜನರು ಪ್ರಯಾಣಿಸಿದರೆ, ಪಾಸ್ ತೆಗೆದುಕೊಳ್ಳದೆ, ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಏನು ಕಡಿಮೆ ಇಲ್ಲ. ಇವರಿಂದಲೂ ನಗದು ರೂಪದಲ್ಲಿ ಪ್ರಸ್ತುತ ನಿತ್ಯ ಕೋಟಿ ರೂ.ಗಳಿಗೂ ಮೀರಿ ಪ್ರತ್ಯಕವಾದ ಆದಾಯ ಬರುತ್ತಿದೆ. ಆದರೂ ವೇತನ ಕೊಡುವುದಕ್ಕೆ ಮಾತ್ರ ಸಂಸ್ಥೆಯಲ್ಲಿ ದುಡ್ಡಿಲ್ಲ.
ಇನ್ನು ನಿಗಮಗಳ ಆಸ್ತಿಯಿಂದ ಅಂದರೆ, ಅಂಗಡಿ, ಮಳಿಗೆಗಳು, ಹೋಟೆಲ್, ಆಫೀಸ್ ಇತ್ಯಾದಿಗಳ ಬಾಡಿಗೆ ರೂಪದಲ್ಲಿ ಬರುತ್ತಿರುವ ಹಣ ಎಲ್ಲಿಗೆ ಹೋಗುತ್ತಿದೆ ಎಂಬುವುದು ಈವರೆಗೂ ತಿಳಿಯುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ನಾವು ಆ ಅಧಿಕಾರಿ ಕೇಳಿ ನಂತರ ನಿಮಗೆ ತಿಳಿಸುತ್ತೇವೆ, ಈ ಅಧಿಕಾರಿ ಕೇಳಿ ಮಾಹಿತಿ ನೀಡುತ್ತೇವೆ ಎಂದು ಜಾರಿಕೊಳ್ಳುತ್ತಿದ್ದಾರೆ.
ಹೀಗಾಗಿ ಸಂಸ್ಥೆಗೆ ಬಸ್ ಓಡಿಸುವುದರ ಹೊರತಾಗಿಯು ಬರುತ್ತಿರುವ ಇತರ ಮೂಲದ ಆದಾಯವನ್ನು ಆಯಕಟ್ಟಿನ ಸ್ಥಳದಲ್ಲಿ ಕುಳಿತಿರುವ ಅಧಿಕಾರಿಗಳು ಮತ್ತು ಸಂಬಂಧಿಸಿದ ಆಡಳಿತ ವರ್ಗದ ಕೆಲವರು ನುಂಗಿ ನೀರುಕುಡಿಯುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.
ಈ ಎಲ್ಲವನ್ನು ನೋಡಿ ಸಚಿವ ಶ್ರೀರಾಮುಲು ಅವರು ಅಧಿಕಾರಿಗಳು ಮತ್ತು ಆಡಳಿತ ವರ್ಗದ ಕೆಲವರ ನಡೆಯನ್ನು ಈಗಾಗಲೇ ನಡೆದಿರುವ ಕೆಲ ಸಭೆಯಗಳಲ್ಲಿ ತೀವ್ರವಾಗಿ ಖಂಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೂ ಇದಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ ಭ್ರಷ್ಟ ಅಧಿಕಾರಿಗಳು ಎಂದು ಹೇಳಲಾಗುತ್ತಿದೆ.
ಇನ್ನಾದರೂ ಸಂಸ್ಥೆ ಗಳಿಸುತ್ತಿರುವ ಆದಾಯಇಂಥ ಭ್ರಷ್ಟ ಅಧಿಕಾರಿಗಳ ಖಜಾನೆಗೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಮತ್ತು ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಸಚಿವರು ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿ ಬೆವರಿಳಿಸಬೇಕಿದೆ.
ಸಾರ್, ಸರ್ಕಾರದಿಂದ ನೌಕರರ ವೇತನಕ್ಕೆ ಅಂತ ಹೇಳಿ ಸುಮಾರು2000 ಕೋಟಿ ಹಣವನ್ನು ಬಿಡುಗಡೆ ಆಗಿದ್ದರೂ ಸುಮಾರು80% ನೌಕರರಿಗೆ ಮೂರು ನಾಲ್ಕು ತಿಂಗಳು ವೇತನವನ್ನು ನೀಡದೆ … ಮತ್ತು ಸಂಸ್ಥೆ ಆದಾಯ ಬಂದರೂ
ಸರ್ಕಾರದ ಹಣ ನೌಕರರ ವೇತನ ಕಟ್ಟು ಮಾಡಿರೋದು ಸಾರಿಗೆ ಆದಾಯ ಇಷ್ಟು ಹಣ ಎಲ್ಲಿ ಹೋಯಿತು