CrimeNEWSನಮ್ಮಜಿಲ್ಲೆ

ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿದ ಪ್ರಕರಣ: ಆರು ಮಂದಿ ಬಂಧಿಸಿದ ಇಂದಿರಾ ನಗರ ಪೊಲೀಸರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 41 ವರ್ಷದ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾ ನಗರ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಉಪೇಂದ್ರ ಕುಮಾರ್, ಕುಮಾರ್ ಅವರ ಪೋಷಕರಾದ ಚಂದ್ರರಾವ್ ಮತ್ತು ಲಕ್ಷ್ಮಿ ಬಾಯಿ, ಸಮೀರ್ ಖಾನ್, ಅವರ ಪತ್ನಿ ಸಾನಿಯಾ ಕೌಸರ್ ಮತ್ತು ನೀಲಂ ಬಂಧಿತ ಆರೋಪಿಗಳು.

ಅಪಹರಣಕ್ಕೊಳಗಾದ ನಾಗರಾಜ್‌ ಅವರು ಬಂಧಿತ ಆರೋಪಿ ಉಪೇಂದ್ರನಿಗೆ ಪರಿಚಯವಾಗಿದ್ದರು. ನಾಗರಾಜ್‌ ಲೋನ್‌ಗಾಗಿ ಪ್ರಯತ್ನಿಸುತ್ತಿದ್ದ ವಿಷಯ ಉಪೇಂದ್ರನಿಗೆ ತಿಳಿದಿತ್ತು. ಈ ವೇಳೆ ನಿಮಗೆ ಲೋನ್‌ ಕೊಡಿಸುತ್ತೇನೆ ಎಂದು ನಾಗರಾಜ್ ಬಳಿ ಡಾಕ್ಯುಮೆಂಟ್‌ ಪಡೆದ ಉಪೇಂದ್ರ, ಲೋನ್‌ಗೆ ಅಪ್ಲೈ ಮಾಡಿದ್ದ. ಇತ್ತ ಡಾಕ್ಯುಮೆಂಟ್ ನೀಡಿ ನಾಗರಾಜ್ ಕೆಲಸದ ನಿಮಿತ್ತ ಕಾಂಗೋಗೆ ತೆರಳಿದ್ದರು.

ನಾಗರಾಜ್‌ಗೆ ಸುಮಾರು ಒಂದು ಕೋಟಿಯವರೆಗೆ ಲೋನ್‌ ಸಿಗಲಿದೆ ಎಂದು ಬ್ಯಾಂಕ್‌ನವರು ಹೇಳಿದ್ದರು. ಅದಕ್ಕಾಗಿ ನಾಗರಾಜ್ ಈಗಾಗಲೇ ಹೊಂದಿರುವ ಐದು ಲಕ್ಷ ಲೋನ್‌ ಅನ್ನು ಕ್ಲಿಯರ್ ಮಾಡಬೇಕು ಎಂದಿದ್ದರು. ಹೀಗಾಗಿ ಒಂದು ಕೋಟಿಯ ಆಸೆಗೆ ಬಿದ್ದ ಆರೋಪಿ ಉಪೇಂದ್ರ ನಾಗರಾಜ್ ಹೊಂದಿದ್ದ ಐದು ಲಕ್ಷ ಲೋನ್ ಅನ್ನು ತಾನೇ ತೀರಿಸಿದ್ದ.

ಈ ಮಧ್ಯೆ ಕೆಲವೇ ದಿನಗಳಲ್ಲಿ ನಾಗರಾಜ್ ಅವರು ಕೋವಿಡ್ ಕಾರಣದಿಂದ ಕೆಲಸ ಕಳೆದುಕೊಂಡು ಕಾಂಗೋದಿಂದ ಭಾರತಕ್ಕೆ ವಾಪಸ್ ಆಗಿದ್ದರು. ಇತ್ತ ಲೋನ್ ಹಣ ಬಿಡುಗಡೆ ವಿಚಾರವಾಗಿ ಸಹಿ ಹಾಕಲು ನಾಗರಾಜ್‌ ಅವರನ್ನು ಬ್ಯಾಂಕ್‌ಗೆ ಬರಲು ಅಧಿಕಾರಿಗಳು ಹೇಳಿದ್ದರು. ಈ ವೇಳೆ ಕೆಲಸ ಇಲ್ಲದ ಕಾರಣ ಲೋನ್ ಪಡೆಯಲು ನಾಗರಾಜ್ ನಿರಾಕರಿಸಿದ್ದರು.

ನಾಗರಾಜ್ ನಿರ್ಧಾರದಿಂದ ಕಂಗಾಲಾದ ಉಪೇಂದ್ರ, ತಾನು ಖರ್ಚು ಮಾಡಿರುವ 5 ಲಕ್ಷಕ್ಕೆ ಬಡ್ಡಿ ಸಮೇತ ಹಣ ವಾಪಸ್ ನೀಡುವಂತೆ ಧಮ್ಕಿ ಹಾಕಲು ಶುರು ಮಾಡಿದ್ದ. ಹಣ ನೀಡಲು ನಾಗರಾಜ್ ನಿರಾಕರಿಸಿದಾಗ ಸಮೀರ್ ಎಂಬಾತನಿಗೆ ಉಪೇಂದ್ರ ಸುಪಾರಿ ನೀಡಿದ್ದಾನೆ.

ಸಮೀರ್ ಮೂಲಕ ನಾಗರಾಜ್‌ನನ್ನು ಕಿಡ್ನ್ಯಾಪ್ ಮಾಡಿಸಿದ್ದ ಉಪೇಂದ್ರ, ಮುದ್ದಿನಪಾಳ್ಯದ ನೀಲಮ್ಮ ಎಂಬಾಕೆಯ ಮನೆಯಲ್ಲಿರಿಸಿ ಹಲ್ಲೆ ನಡೆಸಿದ್ದ. ಅಲ್ಲದೇ, ನಾಗರಾಜ್‌ ಅಕೌಂಟ್‌ನಲ್ಲಿದ್ದ ಹಣ ಕಿತ್ತುಕೊಂಡು ಬಿಟ್ಟು ಕಳಿಸಿದ್ದ.

ತಾನು ಹಲ್ಲೆಗೊಳಗಾದ ಬಗ್ಗೆ ನಾಗರಾಜ್ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಆರೋಪಿಗಳನ್ನ‌ುಇಂದಿರಾ ನಗರ ಪೊಲೀಸರು ಬಂಧಿಸಿದ್ದಾರೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ