Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಸೆಪ್ಟೆಂಬರ್‌ ಕೊನೆಯಾಗುತ್ತ ಬಂದರೂ ಸಾರಿಗೆ ನೌಕರರಿಗೆ ಇನ್ನೂ ಸಿಕ್ಕಿಲ್ಲ ಆಗಸ್ಟ್‌ ತಿಂಗಳ ಅರ್ಧ ವೇತನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಗಸ್ಟ್‌  ತಿಂಗಳ ವೇತನದಲ್ಲಿ ಅರ್ಧ ವೇತನವನ್ನು ನೀಡಿ ಕೈ ಕಟ್ಟಿಕುಳಿತಿರುವ ಸರ್ಕಾರ ಮತ್ತು ಸಾರಿಗೆ ಸಂಸ್ಥೆ ಇದುವರೆಗೂ ಉಳಿದರ್ಧ ವೇತನ ನೀಡುವಲ್ಲಿ ವಿಳಂಬಧೋರಣೆ ಅನುಸರಿಸುತ್ತಿದೆ.

ಹೌದು ಕಳೆದ ಜುಲೈ ತಿಂಗಳಿನಲ್ಲಿ ವೇತನ ನೀಡದಿದ್ದರಿಂದ ನೌಕರರು ವರಮಹಾಲಕ್ಷ್ಮೀ ಹಬ್ಬ ಆಚರಣೆಗೆ ತೊಂದರೆ ಅನುಭವಿಸಬೇಕಾಯಿತು. ನಂತರ ಸಚಿವರು ಗಣೇಶ ಹಬ್ಬಕ್ಕೂ ಮುನ್ನ ಜುಲೈ ಮತ್ತು ಆಗಸ್ಟ್‌ ಈ ಎರಡೂ ತಿಂಗಳುಗಳ ವೇತನವನ್ನು ಒಟ್ಟಿಗೆ ಹಾಕುತ್ತೇವೆ ಎಂದು ಹೇಳಿದರು.

ಆದರೆ ಆಗಸ್ಟ್‌ ಕೊನೆಯಲ್ಲಿ ಜುಲೈ ತಿಂಗಳ ವೇತನ ನೀಡಿದರು. ನಂತರ ಆಗಸ್ಟ್‌ ತಿಂಗಳ ವೇತನದಲ್ಲಿ ಅರ್ಧ ವೇತನವನ್ನು ಗಣೇಶ ಹಬ್ಬಕ್ಕೂ ಮುನ್ನ ನೌಕರರ ಬ್ಯಾಂಕ್‌ ಖಾತೆಗಳಿಗೆ ಹಾಕಿದ್ದರು. ಆ ಬಳಿಕ ಅಂದರೆ ಈವರೆಗೂ ಉಳಿದರ್ಧ ವೇತನ ಬಿಡುಗಡೆ ಮಾಡಿಲ್ಲ.

ಹೀಗಾಗಿ ಮತ್ತೆ ನೌಕರರು ವೇತನ ಬರದಿರುವುದರಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ವೇತನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಈ ಸಂಬಂಧ ಸಾರಿಗೆ ಅಧಿಕಾರಿಯೊಬ್ಬರು ಮಾತನಾಡಿದ್ದು, ಈಗ ಅಧಿವೇಶನ ನಡೆಯುತ್ತಿರುವುದರಿಂದ ಸಚಿವರು ಮತ್ತು ಮುಖ್ಯಮಂತ್ರಿಗಳು ಅತ್ತ ಬಿಸಿಯಾಗಿರುವುದರಿಂದ ನಮ್ಮ ವೇತನದ ಬಗ್ಗೆ ಇನ್ನು ಯಾವುದೇ ಹಣ ಬಿಡುಗಡೆ ಮಾಡಿಲ್ಲ, ಅಧಿವೇಶನ ಮುಗಿದ ಬಳಿಕ ವೇತನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್‌ ಕೊನೆಯವಾರದಲ್ಲಿ ನಾವು ಇದ್ದೇವೆ ಇನ್ನು ಈ ತಿಂಗಳ ವೇತನವನ್ನು ಅಕ್ಟೋಬರ್‌ 10ರೊಳಗೆ ನೌಕರರಿಗೆ ನೀಡಬೇಕು. ಆದರೆ, ಆಗಸ್ಟ್‌ ತಿಂಗಳ ವೇತನದಲ್ಲೇ ಅರ್ಧ ವೇತನವನ್ನು ಇನ್ನೂ ನೀಡಿಲ್ಲ. ಮತ್ತೆ ಸೆಪ್ಟೆಂಬರ್‌ ವೇತನವನ್ನು ಯಾವಾಗ ನೀಡುವರೋ ಎಂಬ ಗೊಂದಲದಲ್ಲಿ ನೌಕರರು ದಿನ ದೂಡುತ್ತಿದ್ದಾರೆ.

Leave a Reply

error: Content is protected !!
LATEST
ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ