ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಐದು ವರ್ಷಗಳಿಂದ ಇಎಸ್ಐ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ನೌಕರರು ವಿವಿಧ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟ ಅವಧಿವರೆಗೆ ಮುಷ್ಕರ ಮಾಡುತ್ತಿದ್ದಾರೆ.
ಆಸ್ಪತ್ರೆಯ ಮುಖ್ಯ ದ್ವಾರ ಮುಚ್ಚಿ ಧರಣಿ ನಡೆಸುತ್ತಿರುವ ನೌಕರರು ಪ್ರತಿ ತಿಂಗಳಿನ ಸಂಬಳಕ್ಕೆ ಅಧಿಕಾರಿಗಳ ಹಿಂದೆ ಮುಂದೆ ಸುತ್ತುವ ಪರಿಸ್ಥಿತಿ ಇದೆ. ನಾವು ದುಡಿದರು ನಮಗೆ ವೇತನ ನೀಡುವ ಸಂಬಂಧ ಅಸಡ್ಡೆಯಿಂದ ಅಧಿಕಾರಿಗಳು ನಡೆದುಕೊಳ್ಳುತ್ತಾರೆ ಎಂದು ಬೇಸ ವ್ಯಕ್ತಪಡಿಸಿದರು.
ಈ ಕೊರೊನಾ ಸಂದರ್ಭಲ್ಲಿಯು ನವೆಂಬರ್ ತಿಂಗಳಿಂದ ಸಂಬಳ ಕೊಟ್ಟಿಲ್ಲ. ಉದ್ಯೋಗಿಗೆ ನೀಡುವ ಯಾವುದೇ ಭತ್ಯೆಯು ನೀಡಿಲ್ಲ. ಕಾರ್ಮಿಕ ಇಲಾಖೆಯಂತೆ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಮಗೆ ಬಾಕಿ ಇರುವ ಸಂಬಳ ನೀಡಿಲ್ಲ ಎಂದು ಅಲವತ್ತುಕೊಂಡಿದ್ದು, ನಮಗೆ ಶೀಘ್ರದಲ್ಲೇ ವೇತನ ಮತ್ತು ಭತ್ಯೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಇಡೀ ವರ್ಷ ದುಡಿಯುವ ನಮಗೆ ಒಂದು ದಿನ ರಜೆ ಪಡೆದರು ಸಂಬಳದಲ್ಲಿ ಕಡಿತ ಮಾಡುವ ಅಧಿಕಾರಿಗಳು. ಜತೆಗೆ ಮೇಲಿನ ಅಧಿಕಾರಿಗಳಿಂದ ನಿತ್ಯ ದೌರ್ಜನ್ಯ, ಬೈಗುಳ ತಪ್ಪಿಸುವಂತೆ ಅನಿರ್ದಿಷ್ಟ ಅವಧಿವರೆಗೆ ಮುಷ್ಕರ ಮಾಡುತ್ತಿದ್ದಾರೆ.