Please assign a menu to the primary menu location under menu

NEWSದೇಶ-ವಿದೇಶನಮ್ಮರಾಜ್ಯ

ಡಿ.1 ರಿಂದ ಜಿಯೋದ ಅನ್‍ಲಿಮಿಟೆಡ್ ಪ್ರೀಪೇಯ್ಡ್ ಯೋಜನೆಗಳೂ ದುಬಾರಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಡಿಸೆಂಬರ್ 1 ರಿಂದ ಜಿಯೋದ ಅನ್‍ಲಿಮಿಟೆಡ್ ಪ್ರೀಪೇಯ್ಡ್ ಯೋಜನೆಗಳು ದುಬಾರಿಯಾಗಲಿದ್ದು, ಗ್ರಾಹಕರ ಜೇಬಿಗೆ ನೇರವಾಗಿಯೇ ಕತ್ತರಿ ಹಾಕುತ್ತಿವೆ ಟೆಲಿಕಾಂ ಕಂಪನಿಗಳು.

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐ) ಕೂಡಾ ಪ್ರಿಪೇಯ್ಡ್ ಯೋಜನೆಯಲ್ಲಿ 25%ದಷ್ಟು ಹೆಚ್ಚಳವನ್ನು ಘೋಷಿಸಿದ್ದು, ಈಗಾಗಲೇ ಅದು ಜಾರಿಗೆ ಬಂದಿದೆ. ಈಗ ಜಿಯೋ ಪ್ರಿಪೇಯ್ಡ್ ಪ್ಯಾಕ್‍ಗಳ ಬೆಲೆಯನ್ನು 20% ಏರಿಕೆ ಮಾಡುವುದಾಗಿ ತಿಳಿಸಿದೆ.

75 ರೂ. ಇದ್ದ ಪ್ಯಾಕ್ ಬೆಲೆ 91 ರೂ.ಗೆ ಏರಿಕೆಯಾಗಿದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅನ್‍ಲಿಮಿಟೆಡ್ ಕರೆ ಹಾಗೂ 50 ಎಸ್‍ಎಂಎಸ್ ನೊಂದಿಗೆ ತಿಂಗಳಿಗೆ 3ಜಿಬಿ ಡೇಟಾವನ್ನು ನೀಡುತ್ತದೆ.

24 ದಿನಗಳ ವ್ಯಾಲಿಡಿಟಿಯ ಯೋಜನೆ ಈ ಹಿಂದೆ 149 ರೂ. ಇದ್ದು, 179 ರೂ.ಗೆ ಏರಿಕೆಯಾಗಿದೆ. ಇದರಲ್ಲಿ 1ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 ಎಸ್‍ಎಮ್‍ಎಸ್ ಉಚಿತವಾಗಿ ನೀಡುತ್ತದೆ.

28 ದಿನಗಳ ಪ್ಯಾಕ್: 129 ರೂ.ಗಳ ಪ್ಯಾಕ್ ಅನ್ನು 155 ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ 2ಜಿಬಿ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ 300 ಎಸ್‍ಎಂಎಸ್ ಉಚಿತವಾಗಿ ಇದೆ.

199 ರೂ.ಯ ಯೋಜನೆ 239 ರೂ.ಗಳಾಗಿದೆ. ಇದರಲ್ಲಿ 1.5ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ ದಿನಕ್ಕೆ 100 ಎಸ್‍ಎಮ್‍ಎಸ್ ಉಚಿತವಾಗಿ ಇದೆ. 249 ರೂ.ಯ ಯೋಜನೆ 299 ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ 2ಜಿಬಿ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ 100 ಎಸ್‍ಎಮ್‍ಎಸ್ ಉಚಿತವಾಗಿ ಸಿಗುತ್ತದೆ.

56 ದಿನಗಳ ಪ್ಯಾಕ್: 56 ದಿನಗಳ ವ್ಯಾಲಿಡಿಟಿ ಹೊಂದಿರುವ ಎರಡು ಯೋಜನೆಗಳು 1.5ಜಿಬಿ ಹಾಗೂ 2ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆಗಳು ಹಾಗೂ 100 ಎಸ್‍ಎಮ್‍ಎಸ್ ಉಚಿತವಾಗಿ ನೀಡುತ್ತದೆ. ಇವುಗಳು ಈ ಹಿಂದೆ 399 ರೂ. ಹಾಗೂ 444 ರೂ. ಇದ್ದು, ಕ್ರಮವಾಗಿ 479 ರೂ. ಹಾಗೂ 533 ರೂ.ಗೆ ಏರಿಕೆಯಾಗಿದೆ.

84 ದಿನಗಳ ಪ್ಯಾಕ್: 329 ರೂ., 555 ರೂ. ಹಾಗೂ 599 ರೂ. ಇದ್ದ ಪ್ಯಾಕ್‌ಗಳು ಕ್ರಮವಾಗಿ 395 ರೂ., 666 ರೂ. ಹಾಗೂ 719 ರೂ.ಗಳಿಗೆ ಏರಿಕೆಯಾಗಿದೆ. ಈ ಮೂರೂ ಯೋಜನೆಗಳು ಅನ್‍ಲಿಮಿಟೆಡ್ ಕರೆ, 100 ಎಸ್‍ಎಂಎಸ್‍ಗಳನ್ನು ಉಚಿತವಾಗಿ ನೀಡುವುದರೊಂದಿಗೆ ಕ್ರಮವಾಗಿ 6ಜಿಬಿ ಡೇಟಾ, 1.5ಜಿಬಿ ದೈನಂದಿನ ಡೇಟಾ ಹಾಗೂ 2ಜಿಬಿ ದೈನಂದಿನ ಡೇಟಾವನ್ನು ನೀಡುತ್ತದೆ.

336 ದಿನಗಳ ಯೋಜನೆ 1,299 ರೂ.ಯಿಂದ 1,559 ರೂ.ಗೆ ಏರಿಕೆಯಾಗಿದೆ. 24 ಜಿಬಿ ಡೇಟಾ ಹಾಗೂ 3,600 ಎಸ್‍ಎಂಎಸ್‍ಗಳನ್ನು ಉಚಿತವಾಗಿ ಇದು ನೀಡುತ್ತದೆ. ಈ ಹಿಂದೆ ಇದ್ದ ವಾರ್ಷಿಕ ಯೋಜನೆಗೆ 2,399 ರೂ. ಇದ್ದರೆ ಈಗ 2,879 ರೂ.ಗೆ ಏರಿಕೆಯಾಗಿದೆ. ಇದು ದೈನಂದಿನ 2ಜಿಬಿ ಡೇಟಾ ಅನ್‍ಲಿಮಿಟೆಡ್ ಕರೆ, ದಿನಕ್ಕೆ 100 ಎಸ್‍ಎಮ್‍ಎಸ್ ಹಾಗೂ 365 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ.

ಜಿಯೋ ಡೇಟಾ ಆಡ್-ಆನ್ ಪ್ರೀಪೇಯ್ಡ್ ಯೋಜನೆಯನ್ನೂ ಹೆಚ್ಚಿಸಲಿದ್ದು, ಇದು 51 ರೂ. ಪ್ಲ್ಯಾನ್ 61 ರೂ.ಗೆ, 101 ಪ್ಲ್ಯಾನ್ 121 ರೂ.ಗೆ ಹಾಗೂ 251 ರೂ.ಪ್ಲ್ಯಾನ್ 301 ರೂ.ಗೆ ಏರಿಕೆಯಾಗಿದೆ. ಈ ಪ್ಲ್ಯಾನ್‍ಗಳು ಕ್ರಮವಾಗಿ 6ಜಿಬಿ, 12ಜಿಬಿ ಮತ್ತು 50ಜಿಬಿ ಡೇಟಾವನ್ನು ನೀಡುತ್ತದೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...