CrimeNEWSದೇಶ-ವಿದೇಶ

22ನೇ ದಿನಕ್ಕೆ ಕಾಲಿಟ್ಟ ಎಂಎಸ್‌ಆರ್‌ಟಿಸಿ ನೌಕರರ ಮುಷ್ಕರ: ರಾಜ್ಯಪಾಲರ ಪ್ರವೇಶಕ್ಕೆ ಬಿಜೆಪಿ ನಿಯೋಗ ಮನವಿ

ವಿಜಯಪಥ ಸಮಗ್ರ ಸುದ್ದಿ
  • ಇಲ್ಲಿಯವರೆಗೆ 36 ನೌಕರರು ಆತ್ಮಹತ್ಯೆ

  • ಆತ್ಮಹತ್ಯೆಗೆ ಕಾರಣರಾಗಿರುವ ಸಾರಿಗೆ ಸಚಿವರ ವಿರುದ್ಧ ಕೊಲೆ ಪ್ರಕರಣ ದಾಖಲಿಸ ಆಗ್ರಹ

  • 2,296 ದಿನಗೂಲಿ ನೌಕರರ ವಜಾ ಮಾಡುವ ಎಚ್ಚರಿಕೆ

ಮುಂಬೈ: ಸರ್ಕಾರದೊಂದಿಗೆ ಎಂಎಸ್‌ಆರ್‌ಟಿಸಿಯನ್ನು ವಿಲೀನಗೊಳಿಸಬೇಕು ಎಂದು ಒತ್ತಾಯಿಸಿ ಕಳೆದ ಅಕ್ಟೋಬರ್‌ 28ರಿಂದ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಈ ಸಂಬಂಧ ಶಾಸಕ ಗೋಪಿಚಂದ್ ಪಡಲ್ಕರ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲ ಬಿ.ಎಸ್. ಕೋಶ್ಯಾರಿ ಅವರನ್ನು ಭೇಟಿ ಮಾಡಿ, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ.

ಬಳಿಕ ಮಾತನಾಡಿದ ಗೋಪಿಚಂದ್ ಪಡಲ್ಕರ್, ಮುಷ್ಕರ ನಿರತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಮುಷ್ಕರ ಕೊನೆಗೊಳಿಸಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಹೊರಡಿಸುವಂತೆ ರಾಜ್ಯದ ಪ್ರಥಮ ಪ್ರಜೆಯಾದ ರಾಜ್ಯಪಾಲರಿಗೆ ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಆದರೆ ರಾಜ್ಯ ಸರ್ಕಾರಕ್ಕೆ ಈ ಬಿಕ್ಕಟ್ಟು ಬಗೆಹರಿಸಲು ಆಸಕ್ತಿ ಇಲ್ಲ. ಮುಷ್ಕರ ನಿರತ ನೌಕರರೊಂದಿಗೆ ಮಾತನಾಡುವಾಗ, ಸರ್ಕಾರ ದರ್ಪದಿಂದ ನಡೆದುಕೊಳ್ಳುತ್ತಿದೆ. ಅಮಾನತು ಮಾಡುವ ಕ್ರಮ, ನೌಕರರಿಗೆ ಬೆದರಿಕೆ ಹಾಕುವುದನ್ನು ಸರ್ಕಾರ ಕೈ ಬಿಡದಿದ್ದರೆ ಮುಷ್ಕರ ಇನ್ನು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಇಲ್ಲಿಯವರೆಗೆ 36 ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣರಾಗಿರುವ ಸಾರಿಗೆ ಸಚಿವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಎಸ್ಟಿ ನೌಕರರ ಸಾವಿಗೆ ಸಾರಿಗೆ ಸಚಿವ ಅನಿಲ್ ಪರಬ್ ಅವರೇ ಕಾರಣ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಈ ನಡುವೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಪ್ರವೀಣ್ ದಾರೆಕರ್ ಅವರು ಆಜಾದ್ ಮೈದಾನದಲ್ಲಿ ಮುಷ್ಕರ ನಿರತರನ್ನು ಭೇಟಿಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

2,296 ದಿನಗೂಲಿ ನೌಕರರ ವಜಾ ಮಾಡುವ ಎಚ್ಚರಿಕೆ:  ಸರ್ಕಾರದೊಂದಿಗೆ ಎಂಎಸ್‌ಆರ್‌ಟಿಸಿಯನ್ನು ವಿಲೀನಗೊಳಿಸಬೇಕು ಎಂದು ಒತ್ತಾಯಿಸಿ ಕಳೆದ ಅಕ್ಟೋಬರ್‌ 28ರಿಂದ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಇದಕ್ಕೆ ಕೆರಳಿರುವ ಅಧಿಕಾರಿಗಳು ಕಳೆದ ಒಂದು ವಾರದೊಳಗೇ ಸುಮಾರಿಗೆ 2,053 ಕಾರ್ಮಿಕರನ್ನು ಅಮಾನತುಗೊಳಿಸಿದ್ದಾರೆ.

ಅಷ್ಟೇ ಅಲ್ಲದೆ ನಿನ್ನೆ ಬುಧವಾರ ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ಮರಳಬೇಕು ಎಂದು ಆಗ್ರಹಿಸಿ 2,126 ನೌಕರರು ಸೇರಿದಂತೆ 2,296 ದಿನಗೂಲಿ ನೌಕರರಿಗೆ ನೋಟಿಸ್‌ಗಳನ್ನು ಎಂಎಸ್‌ಆರ್‌ಟಿಸಿ ಜಾರಿ ಮಾಡಿದ್ದು, ಒಂದು ವೇಳೆ ಕರ್ತವ್ಯಕ್ಕೆ ಮರಳದಿದ್ದರೆ 2,296 ದಿನಗೂಲಿ ನೌಕರರನ್ನು ವಜಾ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಎಂಎಸ್‌ಆರ್‌ಟಿಸಿ ನೋಟಿಸ್‌ಗಳು ಮುಷ್ಕರ ನಿರತ ನೌಕರರಲ್ಲಿ ಆಘಾತ ತಂದಿದೆ. ಆದಾಗ್ಯೂ, ಅವರು ತಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರವನ್ನು ಕೈಬಿಡುವುದಿಲ್ಲ ಎಂದು ಪಟ್ಟಹಿಡಿದು ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.

ಇನ್ನು ನೋಟಿಸ್‌ಗೆ ಹೆದರಿದ ನೌಕರರಿಗೆ ಸಲಹೆ ನೀಡಿರುವ ಮುಷ್ಕರ ನಿರತ ಒಕ್ಕೂಟಗಳ ಪದಾಧಿಕಾರಿಗಳು ನಮ್ಮ ಹೋರಾಟವನ್ನು ಕನಿಷ್ಠ ನವೆಂಬರ್ 22 ರವರೆಗೂ ಮುಂದುವರಿಸೋಣ, ಅಂದು ಹೈ ಕೋರ್ಟ್‌ನಲ್ಲಿ ವಿಚಾರಣೆ ಬರಲಿದೆ. ಕೋರ್ಟ್‌ನಿಂದ ಏನು ಮಾಹಿತಿ ಹೊರಬೀಳುತ್ತದೆ ಎಂದು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಅಲ್ಲಿಯವರೆಗೆ ತಾಳ್ಮೆಯಿಂದ ಇರಿ ಎಂದು ಸಲಹೆ ನೀಡಿದ್ದಾರೆ.

ಈ ಕೆಲ ನೌಕರರ ಬಸ್‌ ಓಡಿಸುತ್ತಿದ್ದರಿಂದ ಕೆರಳಿದ ನೌಕರರು ಪುಣೆ ಬಳಿ ಕಂಡಕ್ಟರ್‌ಗೆ ಬೆವರಿಳಿಸಿದ್ದರು. ಹೀಗಾಗಿ ಎಂಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಿಗಮದ ಸಂಚಾರಿ ನಿಯಂತ್ರಕರೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಕಂಡಕ್ಟರ್‌ಗೆ ಮೇಲೆ ಹಲ್ಲೆ ಮಾಡಿದ್ದರಿಂದ ಅವರ ಕಣ್ಣಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ