ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ದೇಶದಲ್ಲಿ ಒಂದು ಕಡೆ ಕೊರೊನಾ ತನ್ನ ಛಾಯೆಯನ್ನು ಮುಂದುವರಿಸುತ್ತಿದೆ. ಈ ನಡುವೆಯೇ ಕೇಂದ್ರ ಸರ್ಕಾರ ಮನೋಸೋ ಇಚ್ಛೆ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಒಂದೇ ಸಮನೆ ಏರಿಕೆ ಮಾಡುತ್ತಲೇ ಇದೆ. ಇದರಿಂದ ಜನ ಸಾಮಾನ್ಯರು ಇನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಹೌದು! ಕಳೆದ ಎರಡು ದಿನ ತಟಸ್ಥವಾಗಿದ್ದ ತೈಲ ಬೆಲೆ ಇಂದು ಏರಿಕೆಯತ್ತ ಮುಖಮಾಡಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 19 ಪೈಸೆ ಏರಿಕೆ ಕಂಡು, ಲೀಟರ್ ಗೆ 93.04 ರೂಪಾಯಿ ಆದರೆ ಡೀಸೆಲ್ 29 ಪೈಸೆ ಏರಿಕೆ ಕಂಡು ಒಂದು ಲೀಟರ್ ಗೆ 83.80 ರೂಪಾಯಿ ಆಗಿದೆ.
ಇನ್ನು ರಾಜಸ್ಥಾನದಲ್ಲಿ ಅತೀ ಹೆಚ್ಚು ಲೀಟರ್ ಪೆಟ್ರೋಲ್ ಗೆ 104 ರೂಪಾಯಿ ಆದರೆ, ಡೀಸೆಲ್ ಲೀಟರ್‌ಗೆ 96.62 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 96.14 ರೂಪಾಯಿ ಆದರೆ, ಡೀಸೆಲ್ ಬೆಲೆ 88.84 ರೂಪಾಯಿ ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್-99.32 ರೂಪಾಯಿ, ಡೀಸೆಲ್ 91.01 ರೂಪಾಯಿ. ಕೋಲ್ಕತ್ತಾದಲ್ಲಿ ಪೆಟ್ರೋಲ್- 93.11 ರೂಪಾಯಿ, ಡೀಸೆಲ್ 86.64 ರೂಪಾಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್- 94.71 ರೂಪಾಯಿ, ಡೀಸೆಲ್ 88.62 ರೂಪಾಯಿ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಕ್ಕೂ ಇಲ್ಲಿ ಮಾರಾಟವಾಗುತ್ತಿರುವ ದರಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಜನರನ್ನು ಸುಲಿಗೆ ಮಾಡುವ ನಿಟ್ಟಿನಲ್ಲಿ ಈ ಸರ್ಕಾರ ಸಾಗುತ್ತಿದೆ. ಇದರಿಂದ ಯಾರಿಗೆ ಲಾಭ ಆಗಲಿದೆ ಎಂಬುವುದೇ ಒಂದು ಯಕ್ಷ ಪ್ರಶ್ನೆಯಾಗಿದೆ.