ಬೆಂಗಳೂರು: ಜೆಡಿಎಸ್ (ಜಾತ್ಯತೀತ ಜನತಾದಳ) ಮಾಜಿ ಪ್ರಧಾನ ಕಾರ್ಯದರ್ಶಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ, ಉದ್ಯಮಿ, ಕಾಸಿಯಾ ಸದಸ್ಯ ನಾಗಣ್ಣ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹಲವರು ಸೇರ್ಪಡೆಗೊಂಡಿರುವುದು ಸಂತಸ ತಂದಿದೆ ಎಂದು ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ, ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಸಮ್ಮುಖದಲ್ಲಿ ನಡೆದ ವಿವಿಧ ಕ್ಷೇತ್ರಗಳ ಮುಖಂಡರು, 40 ಮಂದಿ ಜೆಡಿಎಸ್ ಕಾರ್ಯಕರ್ತರು, ಸಾಫ್ಟವೇರ್ ಇಂಜಿನಿಯರ್‌ಗಳ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಬಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಮಾದರಿಯೊಂದೆ ಇಡೀ ದೇಶದ ಅಭಿವೃದ್ಧಿಗೆ ಪೂರಕವಾದ ಮಾದರಿ ಎಂಬುದು ಇತರೇ ಪಕ್ಷಗಳಲ್ಲಿ ಇರುವ ಪ್ರಾಮಾಣಿಕರಿಗೆ ಮನವರಿಕೆಯಾಗಿ ಪಕ್ಷ ಸೇರುತ್ತಿದ್ದಾರೆ ಎಂದ ಅವರು, ಬಿಬಿಎಂಪಿ ಚುನಾವಣೆಗೆ ಎಎಪಿ ಸಜ್ಜಾಗುತ್ತಿದ್ದೂ ಎಲ್ಲಾ 198 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಪುನರುಚ್ಚರಿಸಿದರು.
ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿಯ ಆಮ್ ಆದ್ಮಿ ಪಕ್ಷ ತಂದಿರುವ ಕ್ರಾಂತಿಕಾರಕ ಬದಲಾವಣೆಗಳನ್ನು ಬೆಂಗಳೂರಿಗೂ ತರುವ ಒತ್ತಾಸೆಯನ್ನು ಇಟ್ಟುಕೊಂಡು ಆಮ್ ಆದ್ಮಿ ಪಕ್ಷ ಸೇರುತ್ತಿದ್ದೇನೆ ಎಂದು ಕಾಸಿಯಾ ಸದಸ್ಯ, ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗಣ್ಣ ನುಡಿದರು.
ಇಂದು ಪಕ್ಷ ಸೇರ್ಪಡೆಯಾದ ಯಶಸ್ವಿ ಕೈಗಾರಿಕೋದ್ಯಮಿಗಳು ಹಾಗೂ ಕಾಸಿಯಾ ಸದಸ್ಯರಾದ ಧನಂಜಯ, ಚನ್ನಕೇಶವ, ನರಸಿಂಹ ಮೂರ್ತಿ, ರಮೇಶ್, ಪ್ರಶಾಂತ್, ಅಂಬರೀಶ್, ದಿನೇಶ್,ಸ್ವಾಮಿ, ರಾಜು, ಪ್ರಸನ್ನ, ಮಂಜುನಾಥ್, ಸುರೇಶ್ ಜೈನ್, ವೆಂಕಟಾಚಲಯ್ಯ, ಹರೀಶ್, ದೇವರಾಜ್, ಕಿರಣ್, ಶಿವಣ್ಣ, ವೆಂಕಟೇಶ್ ಸಿ.ಕೆ, ವೆಂಕಟೇಶ್ ಪರಸ್ಪರ, ಮುನಿರಾಜು, ಮಧು, ನಿತೀನ್, ಗಂಗಣ್ಣ, ರಾಮಣ್ಣ, ಚಂದ್ರಶೇಖರ್, ಸನತ್ ಕುಮಾರ್, ಮಂಜುನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ರಾಜೇಂದ್ರ, ವಿಜಯ್ ಕುಮಾರ್, ಪ್ರಜ್ವಲ್, ಸುಹಾಸ್, ಕಾರ್ತಿಕ್, ಸಂತೋಷ್, ಉಮೇಶ್, ಅರುಣ್, ಯೋಗಾ ನರಸಿಂಹ, ಸಂದೀಪ್, ಸಿದ್ದಲಿಂಗಸ್ವಾಮಿ, ರಮೇಶ್, ಸುನೀಲ್ ಮ್ಯಾಕ್ಸಿ ಲೋಪ್ಸ್ ಅವರು ಪಕ್ಷಕ್ಕೆ ಸೇರ್ಪಡೆಯಾದರು.
ಕೆ.ಬಿ.ನಾಗಣ್ಣನವರ ಕಿರು ಪರಿಚಯ
ಉದ್ಯಮಿ ಕೆ.ಬಿ.ನಾಗಣ್ಣ ಅವರು ಭ್ರಷ್ಟಾಚಾರದ ಪಿಡುಗಿನ ಬಗ್ಗೆ ಕೆಲಸ ಮಾಡುತ್ತಿದ್ದ ಇವರು ನಂತರ ರಾಜಕೀಯಕ್ಕೆ ಧುಮುಕಿದರು. 2006 ರಲ್ಲಿ 5 ಮಂದಿ ಐಐಟಿ ವಿದ್ಯಾರ್ಥಿಗಳು ಸೇರಿಕೊಂಡು ಕಟ್ಟಿದ ಲೋಕ್ ಪರಿತ್ರಾಣ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಪದಾರ್ಪಣೆ ಮಾಡಿದರು. 2013ರಲ್ಲಿ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಚುನಾವಣಾ ಪ್ರಣಾಳಿಕೆ ತಂಡದ ಸದಸ್ಯರಾಗಿ, ರಾಜ್ಯ ಅನುಷ್ಠಾನ ಸಮಿತಿಯ ಸದಸ್ಯರಾಗಿ ಅಪಾರ ರಾಜಕೀಯ ಅನುಭವ ಉಳ್ಳವರು. ಜೆಡಿಎಸ್ ನಡೆಸಿದ ನೂರಾರು ಯಶಸ್ವಿ ಸಮಾವೇಶಗಳ ರುವಾರಿಯಾಗಿದ್ದವರು, 6 ಜಿಲ್ಲೆಗಳ ಚುನಾವಣಾ ಉಸ್ತುವಾರಿಯಾಗಿ ಪಕ್ಷ ಮುನ್ನಡೆಸಿದವರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಇವರು ತಮ್ಮದೇ ಸ್ವಂತ ಉದ್ಯಮ ಕಟ್ಟಿದ್ದಾರೆ. ಎಫ್‌ಕೆಸಿಸಿಐ ಸದಸ್ಯ, ಪೀಣ್ಯ ಸಣ್ಣ ಕೈಗಾರಿಕೋದ್ಯಮಿಗಳ ಸಂಘದ ಸದಸ್ಯರಾಗಿ ಸಣ್ಣ ಕೈಗಾರಿಕೋದ್ಯಮಿಗಳ ಸಾಕಷ್ಟು ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ.
ಪ್ರಸಿದ್ದ ಲೆಕ್ಕ ಪರಿಶೋಧಕರು, ಕಾರ್ಪೋರೇಟ್ ವಲಯದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ಮುರೂರು ರಾಜೇಂದ್ರ ಕುಮಾರ್ ಅವರು ಸಹ ಇಂದು ಪಕ್ಷ ಸೇರ್ಪಡೆಯಾದರು.
ಹೂಡಿಕೆ, ನವ ಉದ್ಯಮಶೀಲತೆ, ಯುವ ಮನಸ್ಸುಗಳನ್ನು ಉದ್ಯಮಿಗಳನ್ನಾಗಿ ಮಾಡುವ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿರುವ ಇವರು ನಂಬಿಯಾರ್ ಬಿಲ್ಡರ್ ಸಂಸ್ಥಾಪನಾ ಸದಸ್ಯ,
ಐಎಲ್‌ಮತ್ತು ಎಫ್ಎಸ್ ಇಂಡಿಯಾ ಬುಲ್ಸ್, ರಿಲಯನ್ಸ್ ಇನ್‌ಫೋಕಾಮ್ ವ್ಯವಸ್ಥಾಪನಾ ಹುದ್ದೆ ಸೇರಿ ಸಾಕಷ್ಟು ಕೆಲಸ ಮಾಡಿದ್ದಾರೆ.