ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮುಂದಿನ ರಾಜಕೀಯ ದಿಕ್ಸೂಚಿ ಎಂದು ಪರಿಗಣಿಸಲಾದ ಹಿನ್ನೆಲೆಯಲ್ಲಿ
ವಿವಿಧ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಹೌದು! ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 91,336 ಸ್ಥಾನಗಳಿಗೆ ಡಿಸೆಂಬರ್ 22 ಮತ್ತು 27ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಹೀಗಾಗಿ ಮತದಾರ ಬರೆದಿರುವ 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಹಣೆಬರಹ ಇಂದು ಹೊರಬೀಳಲಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದೆ. ಬ್ಯಾಲಟ್ ಪೇಪರ್ನಿಂದ ಮತದಾನ ಆಗಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ತುಸು ಮಂದಗತಿಯಲ್ಲಿ ಸಾಗಲಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಅಂತಿಮ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ನಿಮ್ಮ ವಿಜಯಪಥ ವೆಬ್ಸೈಟ್ನಲ್ಲಿ ನೀವು ಕ್ಷಣಕ್ಷಣಕ್ಕೂ ಕರಾರುವಾಕ್ಕಾದ ಫಲಿತಾಂಶದ ವಿವರವನ್ನು ಪಡೆಯಬಹುದಾಗಿದೆ.
ಮೈಸೂರಿನಲ್ಲಿ ಕರ್ತವ್ಯನಿರತ ಚುನಾವಣಾಧಿಕಾರಿ ಸಾವು
ಪಿರಿಯಾಪಟ್ಟಣದ ಪುಷ್ಪಾ ಕಾನ್ವೆಂಟ್ನ ಮತ ಎಣಿಕೆ ಕೇಂದ್ರದಲ್ಲಿ ಎನ್. ಶೆಟ್ಟಹಳ್ಳಿ ಗ್ರಾಪಂ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೋರೇಗೌಡ (52) ಮೃತಪಟ್ಟಿದ್ದಾರೆ. ಕರ್ತವ್ಯದಲ್ಲಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಬೋರೇಗೌಡರು ಲೋಕೋಪಯೋಗಿ ಇಲಾಖೆಯಲ್ಲಿ ಎಇಇ ಆಗಿ ಕೆಲಸ ಮಾಡುತ್ತಿದ್ದರು.
ಮೈಸೂರು ಜಿಲ್ಲೆ: ಒಟ್ಟು ಗ್ರಾ.ಪಂ.: 274 ಒಟ್ಟು ಸ್ಥಾನ: 4662, ಅವಿರೋಧ ಆಯ್ಕೆ: 211.
ಅವಿರೋಧ ಆಯ್ಕೆಯಾದ ಸದಸ್ಯರ ವಿವರ: ಬಿಜೆಪಿ ಬೆಂಬಲಿತ: 69, ಕಾಂಗ್ರೆಸ್ ಬೆಂಬಲಿತ: 76, ಜೆಡಿಎಸ್ ಬೆಂಬಲಿತ: 52
ದಕ್ಷಿಣಕನ್ನಡ ಜಿಲ್ಲೆ: ಒಟ್ಟು ಗ್ರಾ.ಪಂ.: 220, ಒಟ್ಟು ಸ್ಥಾನ: 3222, ಅವಿರೋಧ ಆಯ್ಕೆ: 91, ಅವಿರೋಧ ಆಯ್ಕೆಯಾದ ಸದಸ್ಯರ ವಿವರ: ಬಿಜೆಪಿ ಬೆಂಬಲಿತ: 73, ಕಾಂಗ್ರೆಸ್ ಬೆಂಬಲಿತ: 17
ಮಂಡ್ಯ ಜಿಲ್ಲೆ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ವಿವರ:
ಚುನಾವಣೆ ನಡೆದ ಗ್ರಾ.ಪಂ ಸಂಖೆ: 230, ಒಟ್ಟು ಸ್ಥಾನಗಳು: 3797, ಅಭ್ಯರ್ಥಿಗಳು: 8013, ಅವಿರೋಧ ಆಯ್ಕೆ: 548, ಬಿಜೆಪಿ ಬೆಂಬಲಿತ: 82, ಕಾಂಗ್ರೆಸ್ ಬೆಂಬಲಿತ: 145, ಜೆಡಿಎಸ್ ಬೆಂಬಲಿತ: 318, ಇತರೆ: 60
ತಾಲೂಕು- ಮಂಡ್ಯ
ಗ್ರಾ.ಪಂ: 46, ಸ್ಥಾನ: 713, ಅಭ್ಯರ್ಥಿಗಳು: 1481, ಅವಿರೋಧ ಆಯ್ಕೆ: 115, ಕಾಂಗ್ರೆಸ್ ಬೆಂಬಲಿತ: 32, ಬಿಜೆಪಿ ಬೆಂಬಲಿತ: 16, ಜೆಡಿಎಸ್ ಬೆಂಬಲಿತ: 67
ತಾಲೂಕು- ಮದ್ದೂರು
ಗ್ರಾ.ಪಂ: 42, ಸ್ಥಾನ: 686, ಅಭ್ಯರ್ಥಿಗಳು: 1253, ಅವಿರೋಧ ಆಯ್ಕೆ: 147, ಕಾಂಗ್ರೆಸ್ ಬೆಂಬಲಿತ: 32, ಬಿಜೆಪಿ ಬೆಂಬಲಿತ: 30, ಜೆಡಿಎಸ್ ಬೆಂಬಲಿತ: 85
ತಾಲೂಕು- ಮಳವಳ್ಳಿ
ಗ್ರಾ.ಪಂ: 38, ಸ್ಥಾನ: 612, ಅಭ್ಯರ್ಥಿಗಳು: 1275, ಅವಿರೋಧ ಆಯ್ಕೆ: 101, ಕಾಂಗ್ರೆಸ್ ಬೆಂಬಲಿತ: 24, ಬಿಜೆಪಿ ಬೆಂಬಲಿತ: 14, ಜೆಡಿಎಸ್ ಬೆಂಬಲಿತ: 63
ತಾಲೂಕು- ಪಾಂಡವಪುರ
ಗ್ರಾ.ಪಂ: 23, ಸ್ಥಾನ: 412, ಅಭ್ಯರ್ಥಿಗಳು: 852, ಅವಿರೋಧ ಆಯ್ಕೆ: 55, ಕಾಂಗ್ರೆಸ್ ಬೆಂಬಲಿತ: 09, ಬಿಜೆಪಿ ಬೆಂಬಲಿತ: 02, ಜೆಡಿಎಸ್ ಬೆಂಬಲಿತ: 33, ರೈತಸಂಘ- 11.
ತಾಲೂಕು- ನಾಗಮಂಗಲ
ಗ್ರಾ.ಪಂ: 27, ಸ್ಥಾನ: 389, ಅಭ್ಯರ್ಥಿಗಳು: 795, ಅವಿರೋಧ ಆಯ್ಕೆ: 56, ಕಾಂಗ್ರೆಸ್ ಬೆಂಬಲಿತ: 25, ಬಿಜೆಪಿ ಬೆಂಬಲಿತ: 00, ಜೆಡಿಎಸ್ ಬೆಂಬಲಿತ: 31
ತಾಲೂಕು- ಕೆ.ಆರ್.ಪೇಟೆ
ಗ್ರಾ.ಪಂ: 33, ಸ್ಥಾನ: 587, ಅಭ್ಯರ್ಥಿಗಳು: 1404, ಅವಿರೋಧ ಆಯ್ಕೆ: 47, ಕಾಂಗ್ರೆಸ್ ಬೆಂಬಲಿತ: 11, ಬಿಜೆಪಿ ಬೆಂಬಲಿತ: 20,ಜೆಡಿಎಸ್ ಬೆಂಬಲಿತ: 16
ತಾಲೂಕು- ಶ್ರೀರಂಗಪಟ್ಟಣ
ಗ್ರಾ.ಪಂ: 21, ಸ್ಥಾನ: 398, ಅಭ್ಯರ್ಥಿಗಳು: 953, ಅವಿರೋಧ ಆಯ್ಕೆ: 27, ಕಾಂಗ್ರೆಸ್ ಬೆಂಬಲಿತ: 12, ಬಿಜೆಪಿ ಬೆಂಬಲಿತ: 00, ಜೆಡಿಎಸ್ ಬೆಂಬಲಿತ: 13, ಪಕ್ಷೇತರ: 01