ನ್ಯೂಡೆಲ್ಲಿ: ಆಧಾರ್ ಯೋಜನೆ ಸಂವಿಧಾನಬದ್ಧ ಎಂಬ ತೀರ್ಮಾನ ಮರುಪರಿಶೀಲಿಸುವಂತೆ ಕೋರಿದ ಅರ್ಜಿ ಸೇರಿ ವಿವಿಧ ಒಂಬತ್ತು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜೂನ್ 9 ರಂದು ಕೈಗೆತ್ತಿಕೊಳ್ಳಲಿದೆ.
ಸೆಪ್ಟೆಂಬರ್ 26-2018ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಈ ಅರ್ಜಿಗಳನ್ನು ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬಡೆ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್, ಎಲ್. ನಾಗೇಶ್ವರ ರಾವ್ ಒಳಗೊಂಡ ಪಂಚಸದಸ್ಯ ಪೀಠ ವಿಚಾರಣೆ ನಡೆಸಲಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ವಿಚಾರಣೆಗೆ ಬ್ಯಾಂಕ್ ಖಾತೆ ಮೊಬೈಲ್ ಹಾಗೂ ಆಧಾರ್ ದಾಖಲಾತಿ ಸಂದರ್ಭದಲ್ಲಿಯೂ ಆಧಾರ ಸಂಖ್ಯೆಯನ್ನು ಲಿಂಕ್ ಮಾಡುವ ಅಂಶಗಳು ಬರಲಿವೆ. ಕಳೆದ ವರ್ಷ ನವೆಂಬರ್ 13 ರಂದು ನೀಡಿದ್ದ ತೀರ್ಪು ಸೇರಿ ಸುಪ್ರೀಂಕೋರ್ಟ್‌ನ ಎರಡು ತೀರ್ಪುಗಳನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ವಿವಿಧ ಮಂಡಳಿಗಳ ಸದಸ್ಯರ ಸೇವಾ ನಿಯಮಗಳು, ನೇಮಕ ಕುರಿತು ಕೇಂದ್ರ ರೂಪಿಸಿದ್ದ ನಿಯಮಗಳನ್ನು ತಳ್ಳಿ ಹಾಕಿ ಸುಪ್ರೀಂ ಕೋರ್ಟ್ ಆದೇಶಿಸಿದ್ದು ಉನ್ನತ ಪೀಠದ ಪರಿಶೀಲನೆಗೆ ಒಪ್ಪಿಸಿತ್ತು.
ವಿಧಿ 110 (1)ರಲ್ಲಿ ನಿಗದಿಪಡಿಸಲಾದ ಮಾನದಂಡಗಳನ್ನು ಪಾಲಿಸುವಲ್ಲಿ ಆಧಾರ್ ವಿಫಲವಾಗಿದೆ. ನಾಗರಿಕರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ಇಂಥ ಕಾಯಿದೆಯನ್ನು ರಾಜ್ಯಸಭೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ರೂಪಿಸಲಾಗಿದೆ. ಇದು ಸಂವಿಧಾನಕ್ಕೆ ಎಸಗಿದ ಮೋಸ ಎಂದು ವಕೀಲ ವಿಪಿನ್ ನಾಯರ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಉಲ್ಲೇಖಿಸಿದ ಮತ್ತೊಂದು ತೀರ್ಪು ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶ ನೀಡುವ ಕುರಿತ 2018ರ ತೀರ್ಪು. ಅಂದರೆ ಮುಸ್ಲಿಂ ಮತ್ತು ಪಾರ್ಸಿ ಮಹಿಳೆಯರ ವಿಷಯದಲ್ಲಿ ತಾರತಮ್ಯ ಕುರಿತ ಪ್ರಶ್ನೆ ಇಲ್ಲಿ ಕೇಳಿಬಂದಿತ್ತು. ಈ ತೀರ್ಪನ್ನು ಉನ್ನತ ಪೀಠದ ವಿಚಾರಣೆಗೆ ಒಪ್ಪಿಸಲಾಗಿತ್ತು. ಈ ಎರಡೂ ಪ್ರಕರಣಗಳ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯಂತರ ಅರ್ಜಿ ಐಎ ಸಂಖ್ಯೆ 6225/2019 ಕ್ಕೆ ಸಂಬಂಧಿಸಿದಂತೆ ಕೋರ್ಟ್ ತನ್ನ ತೀರ್ಪು ಮರು ಪರಿಶೀಲಿಸುವಂತೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ಅವಕಾಶ ಕಲ್ಪಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇನ್ನು ಆಧಾರ್ ಯೋಜನೆಯು ಕಣ್ಗಾವಲು ಇಡುವುದಿಲ್ಲ ಹಾಗೂ ಖಾಸಗಿತನದ ಹಕ್ಕನ್ನು ಕಸಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 26-2018 ರಂದು ನೀಡಿದ್ದ ಆದೇಶದಲ್ಲಿ ಆಧಾರ್ ಯೋಜನೆಯು ಸಂವಿಧಾನಿಕವಾಗಿ ಬದ್ಧವಾಗಿದೆ ಎಂದು ಹೇಳಿತ್ತು. ಜತೆಗೆ ಬ್ಯಾಂಕ್ ಖಾತೆ ಮೊಬೈಲ್ ಸಂಪರ್ಕ ಮತ್ತು ಶಾಲಾ ದಾಖಲಾತಿ ಇದರ ಜೋಡಣೆ ಕಡ್ಡಾಯವಲ್ಲ ಎಂದು ಹೇಳಿತ್ತು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಆಗ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ ಆದಾಯ ತೆರಿಗೆ ವಿವರ ದಾಖಲಿಸಲು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಕಡ್ಡಾಯ ಎಂದು ಹೇಳಿತ್ತು.
ಅತ್ಯುತ್ತಮ ಆಗಿರುವುದಕ್ಕಿಂತ ಭಿನ್ನವಾಗಿರುವುದು ಉತ್ತಮ. ಅತ್ಯುತ್ತಮ ಆಗಿದ್ದರೆ ನಂಬರ್ ಒನ್ ಎನಿಸಬಹುದು ಆದರೆ ಭಿನ್ನವಾಗಿದ್ದರೆ ಪ್ರತ್ಯೇಕವಾಗಿ ಅಸ್ತಿತ್ವ ಕಂಡುಕೊಳ್ಳಬಹುದು ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು.
ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರು ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆಯಂತೆ ಅಂಗೀಕರಿಸಲಾಗದು ಇದು ಸಂವಿಧಾನದ ದೃಷ್ಟಿಯಿಂದ ವಂಚನೆಯಾಗಿದೆ ಎಂದರು. ಆದರೆ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರೆ ನಾಲ್ವರು ಸದಸ್ಯರು ಆಧಾರ್ ಕಾಯ್ದೆಯನ್ನು ಎತ್ತಿ ಹಿಡಿದಿದ್ದರು.
ಆಧಾರ್ ಮುಖ್ಯ ಉದ್ದೇಶ ಸರಕಾರದ ಯೋಜನೆಗಳ ಲಾಭ ಕೆಳಹಂತದ ಜನರಿಗೆ ತಲುಪಬೇಕು ಎಂಬುದೇ ಆಗಿದೆ ಸಮುದಾಯದ ದೃಷ್ಟಿಯಿಂದಲೂ ಜನರ ವ್ಯಕ್ತಿತ್ವವನ್ನು ಇದು ಪರಿಗಣಿಸಲಿದೆ. ಸಾರ್ವಜನಿಕರ ಹಿತದೃಷ್ಟಿ ಹೊಂದಿದೆ ಎಂದು ಹೇಳಿದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail