ಬೆಂಗಳೂರು: ಮಾಲಿನ್ಯರಹಿತ ಪರಿಸರ ನಿರ್ಮಾಣ ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಭಾರತದ ಮೊಟ್ಟ ಮೊದಲ ಸ್ವಚ್ಛ ವಾಯು ರಸ್ತೆ ಉಪಕ್ರಮವಾಗಿ ಚರ್ಚ್ ಸ್ಟ್ರೀಟ್ ಫಸ್ಟ್ – ‘ಟೆಸ್ಟ್ ಬೆಡ್’ ಅನ್ನು ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ ಮಾಡುವುದಕ್ಕೆ ಪ್ರತಿ ನಾಗರಿಕರೂ ಕೈ ಜೋಡಿಸಬೇಕು. ಆಗ ಮಾತ್ರ ಸ್ವಚ್ಛ ಸುಂದರ ಪರಿಸರ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವರು, ಶಾಸಕರು, ಬಿ.ಬಿ.ಎಂ.ಪಿ. ಆಡಳಿತಾಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.