NEWSನಮ್ಮಜಿಲ್ಲೆರಾಜಕೀಯ

ಬಿಬಿಎಂಪಿಯ ಕಸ ನಿರ್ವಹಣೆ ಶುಲ್ಕ ಹೆಚ್ಚಳದ ವಿರುದ್ಧ ಡಿ.2ರಂದು ಎಎಪಿಯಿಂದ ಕರ ನಿರಾಕರಣೆ ಚಳವಳಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಸ ನಿರ್ವಹಣೆಗಾಗಿ ಆಸ್ತಿ ತೆರಿಗೆ ಜೊತೆ ಉಪಕರ (ಸೆಸ್‌)ವನ್ನು 200 ರೂ.ಗಳಿಂದ ರಿಂದ 600 ರೂ.ಗೆ ಹೆಚ್ಚಳ ಮಾಡಲು ಹೊರಟಿರುವ ಬಿಬಿಎಂಪಿ ಮತ್ತೆ ಸಾರ್ವಜನಿಕರನ್ನು ಸುಲಿಗೆ ಮಾಡಲು ಮುಂದಾಗಿದೆ. ಹೀಗಾಗಿ ಈ ತೀರ್ಮಾನ ವಿರೋಧಿಸಿ ಆಮ್‌ಆದ್ಮಿ ಪಕ್ಷ ಡಿಸೆಂಬರ್ 2 ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ ನಿರಾಕರಣೆ ಚಳವಳಿ ಹಮ್ಮಿಕೊಂಡಿದೆ ಎಂದು ಆಪ್‌ನ ಬೆಂಗಳೂರು ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಎಸ್.ವಿ.ಫಣಿರಾಜ್ ತಿಳಿಸಿದ್ದಾರೆ.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಚಿಕೆಗೆಟ್ಟ ಸರ್ಕಾರ ಬಡವರನ್ನು ಸುಲಿದು ತಿನ್ನಲು ಹೊರಟಿದೆ. ವಿದ್ಯುತ್ ಬಿಲ್ ಹೆಚ್ಚಳ ಮಾಡಿದೆ, ನಂತರ ನೀರಿನ ಬಿಲ್ ಹೆಚ್ಚಳಕ್ಕೆ ಕೈ ಹಾಕಿದೆ. ಈಗ ಕಸ ಸಂಗ್ರಹ ಶುಲ್ಕ ಹೆಚ್ಚಳ ಮಾಡಲು ಹೊರಟಿರುವ ಈ ಜನ ವಿರೋಧಿ ನಡೆಯನ್ನು ಸಹಿಸುವುದಿಲ್ಲ ಎಂದರು.

ಈ ಕೂಡಲೇ ಈ ಆದೇಶವನ್ನು ಬಿಬಿಎಂಪಿ ಹಿಂಪಡೆಯದೇ ಹೋದರೆ ಬಳಕೆದಾರರ ಶುಲ್ಕ ಕಟ್ಟದೆ ಕರ ನಿರಾಕರಣೆ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಜನರಿಂದ 45 ಕೋಟಿ ರೂ.ಗಳಷ್ಟು ಕಸದ ನಿರ್ವಹಣೆಗೆ ಎಂದು ಸೆಸ್ ಸಂಗ್ರಹಿಸಲಾಗುತ್ತಿದೆ. ಬೆಂಗಳೂರಿಗಿಂತಲೂ ದೊಡ್ಡ ವಿಸ್ತೀರ್ಣದ ದೆಹಲಿ ನಗರದ ಕಸ ನಿರ್ವಹಣೆಗೆ ಅಲ್ಲಿನ ಆಮ್ ಆದ್ಮಿ ಪಕ್ಷದ ಸರ್ಕಾರ ವಾರ್ಷಿಕ 250 ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ ಬಿಬಿಎಂಪಿ ಮಾತ್ರ ವರ್ಷಕ್ಕೆ 1200 ಕೋಟಿ ರೂ.ಗೂ ಅಧಿಕ ವೆಚ್ಚ ಅಂದರೆ ವಾರ್ಡ್ ಒಂದಕ್ಕೆ 6 ಕೋಟಿ ರೂ.ಗಳಷ್ಟು ಖರ್ಚು ಏಕೆ? ಇದಕ್ಕೆ ಮೊದಲು ಬಿಬಿಎಂಪಿ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಕಸದಿಂದ ಅನೇಕ ರಾಜ್ಯಗಳು, ಆದಾಯವನ್ನು ಪಡೆಯುತ್ತಿವೆ. ಇಂತಹ ಅವಕಾಶಗಳನ್ನು ಬೆಂಗಳೂರಿನಲ್ಲೂ ಜಾರಿಗೆ ತರುವುದನ್ನು ಬಿಟ್ಟು ಜನರ ಮೇಲೆ ಏಕೆ ಮತ್ತಷ್ಟು ಹೊರೆ ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದರು. ಮತ್ತೊಮ್ಮೆ‌ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ‌ ಅಭಿಪ್ರಾಯ ಪಡೆದು ಮುಂದುವರಿಯಬೇಕಾಗಿ ಆಮ್‌ಆದ್ಮಿ ಪಕ್ಷ ಆಗ್ರಹಿಸುತ್ತದೆ ಎಂದರು.

ಗೋಷ್ಠಿಯಲ್ಲಿ ಅತ್ತೂರು ವಾರ್ಡ್ ಅಧ್ಯಕ್ಷೆ ಸುಹಾಸಿನಿ ಫಣಿರಾಜ್, ವಸಂತ ನಗರ ವಾರ್ಡ್ ಅಧ್ಯಕ್ಷೆ ಜನನಿ ಭರತ್ ಇದ್ದರು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ