ರಾಯಚೂರು: ಕ್ವಾರಂಟೈನ್ ಕೇಂದ್ರದಲ್ಲಿ ಮೂರು ತಿಂಗಳ ಗರ್ಭಿಣಿಗೆ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಪಾತವಾಗಿ ರಕ್ತಶ್ರಾವವಾದರೂ ವೈದ್ಯರು ಬಾರದ ಕಾರಣ ಕ್ಯಾರಂಟೈನ್ನಲ್ಲಿದ್ದವರೆ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಅಮ್ಮನ ಗರ್ಭದಲ್ಲಿ ಪ್ರಾಣ ಬಿಟ್ಟಿದೆ ಮೂರು ತಿಂಗಳ ಭ್ರೂಣ, ಇದು ವೈದ್ಯರ ನಿರ್ಲಕ್ಷ್ಯಕ್ಕೆ ಆಗಿದ್ದು, ಇವರಲ್ಲಿ ಮಾನವೀಯತೆ ಸತ್ತುಹೋಗಿದೆಯೇ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದು, ರಕ್ತಶ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದು ಗರ್ಭಿಣಿ ಒದ್ದಾಡುತ್ತಿದ್ದರೂ ವೈದ್ಯರು ಬರದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಗರ್ಭಿಣಿ ನರಳಾಡಿದರೂ ಕೂಡ ಚಿಕಿತ್ಸೆ ಸಿಗಲಿಲ್ಲ. ಪ್ರತಿಭಟನೆ ಬಳಿಕ ಬಂದ ವೈದ್ಯರು ರಕ್ತಶ್ರಾವದಿಂದ ನಿತ್ರಾಣಗೊಂಡಿದ್ದ ಮಹಿಳೆಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು, ಸದ್ಯ ಆಕೆಯ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ಮಾತನಾಡಿದ ವೈದ್ಯಾಧಿಕಾರಿ ಕೃಷ್ಣ, ಸಾಮಾನ್ಯವಾಗಿ ಮೂರು ತಿಂಗಳ ಒಳಗೆ ಗರ್ಭಪಾತವಾಗುತ್ತದೆ. ಅದೇ ರೀತಿ ಇದು ಆಗಿದೆ, ಆದರೆ ಅದನ್ನು ಕಂಡು ವೈದ್ಯರು ಕೂಡಲೇ ಚಿಕಿತ್ಸೆ ನೀಡಬೇಕಿತ್ತು. ಹೀಗೆ ಮಾಡಿರುವುದು ಯಾರು ಎಂದು ವಿಚಾರಣೆ ಮಾಡಿ ಅಂಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail