Vijayapatha – ವಿಜಯಪಥ
Friday, November 1, 2024
NEWSರಾಜಕೀಯಸಂಸ್ಕೃತಿ

ನಾನು ನಾಯಕತ್ವ ತ್ಯಾಗ ಮಾಡಿದ್ದಕ್ಕೇ ಸಿದ್ದರಾಮಯ್ಯ ಸಿಎಂ ಆಗಿದ್ದು: ವಿಶ್ವನಾಥ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಹೋರಾಟಕ್ಕೆ ಸಿದ್ದರಾಮಯ್ಯನವರೇ ಈಗಲಾದರೂ ಮುಂದೆ ಬನ್ನಿ, ನಿಮ್ಮ ಹಿಂದೆ ನಾವೆಲ್ಲರೂ ಬರುತ್ತೇವೆ ನಿಮ್ಮ ನೇತೃತ್ವದಲ್ಲಿ ಹೋರಾಟ ಮಾಡೋಕೆ ನಮಗೇನೂ ಅಭ್ಯಂತರ ಇಲ್ಲ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬರ ಹೋರಾಟಕ್ಕೆ ಅವರು ಬಂದರೆ ನಾನು ನಾಯಕತ್ವ ತ್ಯಾಗ ಮಾಡುತ್ತೇನೆ‌. ಇದಕ್ಕೂ ಮೊದಲು ಕೂಡ ನಾನು ನಾಯಕತ್ವ ತ್ಯಾಗ ಮಾಡಿದ್ದಕ್ಕೇ ಸಿದ್ದರಾಮಯ್ಯ ಸಿಎಂ ಆಗಿದ್ದು ಎಂದರು.

ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡೋದು ಬಿಡಿ ಎಂದು ಸಲಹೆಯನ್ನೂ ನೀಡಿರುವ ವಿಶ್ವನಾಥ್, ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸಬೇಡಿ. ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆಗಳನ್ನು ಸ್ವೀಕರಿಸಿ. ಮುಂದಾದರೂ ಎಲ್ಲರನ್ನೂ ಬಹುವಚನದಲ್ಲಿ ಮಾತನಾಡಿಸಿ. ಎಲ್ಲರನ್ನೂ ಗೌರವದಿಂದ ಕಾಣುವುದನ್ನು ಕಲಿಯಿರಿ ಎಂದು ಸಲಹೆ ನೀಡಿದರು.

ಇನ್ನು ನಮ್ಮ ಸಮಯದಾಯದ ಅಭಿವೃದ್ಧಿಗೆ ಕರೆಯುತ್ತಿದ್ದೇವೆ. ಇದು ರಾಜಕೀಯ ಹೋರಾಟ ಅಲ್ಲ. ನಾವೇನೂ ನಿಮ್ಮನ್ನು ಮತ್ತೆ ಸಿಎಂ ಮಾಡೋಕೆ ಜೈ ಅನ್ನೋದಿಲ್ಲ. ಆದರೆ ಈ ಹಿಂದೆ ನೀವು ಸಿಎಂ ಆಗಲು ನಮ್ಮ ಸಮುದಾಯದವರು ಕುರಿಗಳನ್ನು ಮಾರಿದ್ದಾರೆ. ಕುರುಬ ಸಮುದಾಯ ಎಂದೂ ಅಗೌರವದಿಂದ ನಿಮ್ಮನ್ನು ಕಂಡಿಲ್ಲ. ನಿಮ್ಮ ನಾಯಕತ್ವಕ್ಕೆ ಬೆಲೆ ಬಂದಿದೆ. ನಮ್ಮ ಸಮುದಾಯವನ್ನು ನಿಮ್ಮ ಸರ್ವಾಂಗೀಣ ಬೆಳವಣಿಗೆಗೆ ಬಳಸಿಕೊಂಡಿದ್ದೀರಾ. ಈಗ ಸಮುದಾಯದ ಪರ ಹೋರಾಟಕ್ಕೆ ಏಕೆ ಹಿಂದೇಟು ಹಾಕುತ್ತಿದ್ದೀರ ಎಂದು ಪ್ರಶ್ನಿಸಿದ್ದಾರೆ.

ಕುರುಬ ಸಮುದಾಯವನ್ನು ಎಸ್‌.ಟಿ.ಗೆ ಸೇರಿಸುವ ಹೋರಾಟ ಇನ್ನೂ ಗಂಭೀರವಾಗಿ ಆಗಬೇಕಿದೆ. ಅದಕ್ಕಾಗಿ ನಿಮ್ಮ ಸಹಕಾರ ಹಾಗೂ ಬೆಂಬಲ ಬೇಕು. ನಮ್ಮ ಜೊತೆ ನೀವೂ ಹೋರಾಟಕ್ಕೆ ಬನ್ನಿ. ನಿಮ್ಮ ಸಹಕಾರ, ಬೆಂಬಲ ಕುರುಬ ಸಮುದಾಯಕ್ಕೆ ಬೇಕಾಗಿದೆ. ಈಗಲಾದರೂ ಹೋರಾಟಕ್ಕೆ ಬನ್ನಿ ಎಂದು ಬಹಿರಂಗವಾಗಿ ಆಹ್ವಾನ ನೀಡಿರುವ ವಿಶ್ವನಾಥ್, ನೀವು ಮಾರ್ಗದರ್ಶನ ಮಾಡಿದ್ದರೆ ಈ ಹೋರಾಟ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು. ಆದರೆ, ನೀವು ಹೋರಾಟವೇ ಬೇಡ ಅಂತ ಹೇಳೋದು ಎಷ್ಟು ಸರಿ? ಕನಕ ಗೋಪುರ ಬಿದ್ದಾಗ, ಮಠ ಕಟ್ಟಿದಾಗ ನೀವು ಇರಲಿಲ್ಲ. ಮಠ ಕಟ್ಟೋದು ಅಷ್ಟು ಸುಲಭ ಅಲ್ಲ ಎಂದೂ ಟೀಕಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ