ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಆರನೇ ವೇತನ ಆಯೋಗದಡಿ ನಮಗೂ ವೇತನ ಕೊಡುವ ಮೂಲಕ ವೇತನ ತಾರತಮ್ಯ ನೀತಿ ಕೈ ಬಿಡಬೇಕು ಎಂದು ಕಳೆದ ಏ.7ರಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು 9ನೇ ದಿನಕ್ಕೆ ಕಾಲಿಟ್ಟಿದ್ದು, ಈ ಮುಷ್ಕರಕ್ಕೆ ರಾಕಿಂಗ್‌ಸ್ಟಾರ್ ಯಶ್ ಸಾಥ್ ನೀಡಿದ್ದಾರೆ.
ಚಾಲಕ, ನಿರ್ವಾಹಕರ ಸಂಕಷ್ಟದ ಅರಿವು ನಿಮಗಿದೆ. ಹೀಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ನಮಗೆ ತಮ್ಮ ಬೆಂಬಲ ಸೂಚಿಸಬೇಕು ಎಂದು ಯಶ್ ಅವರಿಗೆ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಮನವಿ ನೌಕರರು ಮಾಡಿದ್ದರು.
ನೌಕರರ ಮನವಿಗೆ ಸ್ಪಂದಿಸಿರುವ ಯಶ್ ಅವರು ನಾನು ಸ್ವತಃ ಬಸ್ ಚಾಲಕನ ಪುತ್ರನಾಗಿ ನನಗೆ ನಿಮ್ಮ ಕಷ್ಟ ಗೊತ್ತಿದೆ. ನೀವು ಕೆಲಸದ ಮೇಲೆ ಇಟ್ಟಿರುವ ನಂಬಿಕೆ ಕಾಳಜಿಯನ್ನು ನಾನು ಹತ್ತಿರದಿಂದಲೇ ಕಂಡಿದ್ದೇನೆ. ಹೀಗಾಗಿ ನಿಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಯ ನಿಟ್ಟಿನಲ್ಲಿ ನಾನು ನಿಮ್ಮ ಜತೆ ಇದ್ದೇನೆ ಎಂದು ನೌಕರರ ಕೂಟಕ್ಕೆ ಧೈರ್ಯ ತುಂಬಿದ್ದಾರೆ.
ಜತೆಗೆ ನಿಮ್ಮ ಬೇಡಿಕೆ ಕುರಿತು ನಾನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೂ ಸುರ್ದೀಘ ಚರ್ಚೆ ಮಾಡಿದ್ದು ಅವರು ನಿಮ್ಮ ವೇತನ ಬೇಡಿಕೆ ಈಡೇರುಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.