NEWSನಮ್ಮರಾಜ್ಯಸಂಸ್ಕೃತಿ

ಕೋವಿಡ್ ಭಯಬೇಡ ಎಚ್ಚರಿಕೆ ಇರಲಿ: ರಾಜ್ಯಮಟ್ಟದ ಆನ್ಲೈನ್ ವಿಶೇಷ ಕಾರ್ಯಕ್ರಮ ಯಶಸ್ವಿ

ಸಿದ್ದೇಶ್ವರ ಸಾಹಿತ್ಯ ವೇದಿಕೆ ಮೈಸೂರು ಘಟಕದ ವತಿಯಿಂದ ಆಯೋಜನೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಇಂದು ತಂತ್ರಜ್ಞಾನ ಎನ್ನುವುದು ಮನುಷ್ಯನನ್ನು ಎಷ್ಟು ಹತ್ತಿರಕ್ಕೆ ತಂದಿದೆ ಎನ್ನುವುದಕ್ಕೆ ಭಾನುವಾರ ಗೂಗಲ್ ಮೀಟ್ ನಲ್ಲಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ, ಮೈಸೂರು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆನ್ಲೈನ್ ಉಪನ್ಯಾಸ ಕಾರ್ಯಕ್ರಮ ಸಾಕ್ಷಿಯಾಗಿದೆ.

ಅಂದಹಾಗೆ ಕಾರ್ಯಕ್ರಮದ ಮುಖ್ಯ ಕೇಂದ್ರ ಕೇಂದ್ರಬಿಂದುವಾಗಿದ್ದ ಆಯುರ್ವೇದ ವೈದ್ಯರು, ಕೌಟುಂಬಿಕ ಹಾಗೂ ಮಕ್ಕಳ ಸಲಹೆಗಾರರು ಮನೋಶಾಸ್ತ್ರಜ್ಞರು ಆದಂತಹ ಡಾ. ನಯನಾ ಕಿರಣ್ ಅವರು.

ಕೋವಿಡ್ – 19 ಭಯ ಬೇಡ ಎಚ್ಚರಿಕೆ ಇರಲಿ ಎನ್ನುವ ವಿಷಯವಾಗಿ ಮಾತನಾಡಿದ ಅವರು, ” ನನ್ನ ರಕ್ಷಣೆ ನನ್ನ ಹೊಣೆ ನಿನ್ನ ರಕ್ಷಣೆ ನಿನ್ನ ಹೊಣೆ, ಎಂಬ ಧ್ಯೇಯ ವಾಕ್ಯ ಪ್ರಸ್ತುತ ಅವಶ್ಯಕ. ನಕಾರಾತ್ಮಕ ಚಿಂತನೆಗಳು ನಮ್ಮನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ. ಆದ್ದರಿಂದ ಸಕಾರಾತ್ಮಕ ಚಿಂತನೆ ನಮ್ಮಲ್ಲಿ ಈ ಸಂದರ್ಭದಲ್ಲಿ ಅತ್ಯಗತ್ಯ. ಕೊರೊನಾ ಬಗ್ಗೆ ಎಚ್ಚರಿಕೆ ಇರಲಿ. ಸರಿಯಾದ ರೀತಿಯಲ್ಲಿ ವೈದ್ಯರಿಂದ ಮಾರ್ಗದರ್ಶನ ತೆಗೆದುಕೊಂಡರೆ ಯಾವುದೇ ರೀತಿಯ ಅವಘಡ ಸಂಭವಿಸುವುದಿಲ್ಲ. ಆದ್ದರಿಂದ ಸೂಕ್ತ ಸಂದರ್ಶನ ಔಷಧ ಉಪಚಾರಗಳಿಂದ ಮಹಾಮಾರಿಯನ್ನು ತೊಲಗಿಸಬಹುದು.

ಇನ್ನು ಆಧ್ಯಾತ್ಮಿಕ ಚಿಂತನೆ, ಯೋಗಾಭ್ಯಾಸ ಉತ್ತಮ ಆಹಾರ ಸೇವನೆಯೊಂದಿಗೆ ಕೊರೊನಾ ರೋಗಿಯು ದೇಹದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸಿಕೊಂಡು ಈ ವೈರಾಣುವಿನ ವಿರುದ್ಧ ಹೋರಾಟ ಮಾಡಬಹುದು. ಆತಂಕದಾಯಕ ಭಯ ಸೃಷ್ಟಿಸುವ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೆ ಸಾಮಾಜಿಕ ಅಂತರ, ಶುಚಿತ್ವ, ಮುಂತಾದ ಪೂರ್ವಸಿದ್ಧತೆಗಳಿಂದ ಜಾಗತಿಕ ಯುದ್ಧವನ್ನು ಗೆಲ್ಲಬಹುದು. ಇತ್ತೀಚಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಋಣಾತ್ಮಕ ಚಿಂತನೆಯಿಂದ. ಹೊರಗಿನ ಅಪಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಿ ಸಾವಿನ ಅಂಚಿಗೆ ರೋಗಿಗಳು ತಲುಪುತ್ತಿದ್ದಾರೆ” ಎಂದು ಸವಿಸ್ತಾರವಾಗಿ ವಿವರಿಸಿದರು.

ಕೊರೊನಾ ಗೆದ್ದವರ ಮನದಾಳದ ಮಾತು ಕಾರ್ಯಕ್ರಮದಲ್ಲಿ ಶೋಭಿತಾ ಆರಾಧ್ಯ ಮಾತನಾಡಿ, ಇಡೀ ಕುಟುಂಬ ಕೊರೊನಾಕ್ಕೆ ತುತ್ತಾದರೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದು, ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಎಲ್ಲರೂ ಸಾಮಾಜಿಕ ಅಂತರದೊಂದಿಗೆ, ಔಷಧ ಸೇವನೆ ಮಾಡಿದರೆ ರೋಗದಿಂದ ಮುಕ್ತರಾಗಬಹುದು ಎಂದು ತಿಳಿಸಿದರು.

ಪ್ರಸ್ತುತ ಪರಿಸ್ಥಿತಿಗೆ ನಾವು ಹೊಂದಿಕೊಳ್ಳಬೇಕು ಹೊಸ ಹೊಸ ಚಿಂತನೆ ಹವ್ಯಾಸಗಳೊಂದಿಗೆ ಮನೆಯವರೊಂದಿಗೆ ಸಮಯ ಕಳೆಯುತ್ತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಇದರಿಂದ ಮುಕ್ತಿ ಹೊಂದಬಹುದು ಎಂದು ಸಾಹಿತ್ಯ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರದೂರು ಲೋಕೇಶ್ ತಿಳಿಸಿದರು.

ಚರಣ್ ಶೇಖರ್, ವಿಜಯಲಕ್ಷ್ಮಿ ಎಸ್ ಕೆ ಆಡಿನ್, ಗುರುಸಿದ್ದಪ್ಪ, ಅನಿತಾ ಬಾಳಿಗೆ, ನಾಗೇಂದ್ರ ಇನ್ನು ಮುಂತಾದವರು ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೋವಿಡ್ ಬಗೆಗೆ ಹಲವಾರು ಪ್ರಶ್ನೆಗಳನ್ನು ಕೇಳುವುದರ ಮೂಲ ಕತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.

ಕಾರ್ಯಕ್ರಮದಲ್ಲಿ ಸಾಹಿತ್ಯ ವೇದಿಕೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಗಿರಿಜಾ ಮಾಲಿಪಾಟೀಲ ಮಾತನಾಡಿ, ಕೇವಲ ವೇದಿಕೆಗಳನ್ನು ನಿರ್ಮಿಸಿ ವೈಯಕ್ತಿಕ ಪ್ರಚಾರ ಗಳಿಸಲಿ ಎಂದು ತೋರಿಕೆಗೆ ಮಾಡುವಂತಹ ಕೆಲಸವಲ್ಲ, ನಿಜವಾದ ಸಮಾಜ ಕಟ್ಟುವ ಕೆಲಸ. ಪ್ರಸ್ತುತ ಸಂಕಷ್ಟವನ್ನು ಎದುರಿಸುವ ಛಲವನ್ನು ಎಲ್ಲರಲ್ಲಿಯೂ ಮೂಡಿಸುವಂತಹದ್ದು ನಮ್ಮ ಸಾಹಿತ್ಯ ವೇದಿಕೆಯ ಧ್ಯೇಯವಾಗಿದೆ ಎಂದು ಹೇಳಿದ ಅವರು, ಮೈಸೂರು ಜಿಲ್ಲಾ ಘಟಕ ಈ ನಿಟ್ಟಿನಲ್ಲಿ ಬಹಳ ಮೆಚ್ಚುವಂತಹ ಕೆಲಸ ಮಾಡಿದೆ ಎಂದು ಅಭಿನಂದಿಸಿದರು.

ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾನಾ ಗೌಡ ಮಾಲಿ ಪಾಟೀಲ್ ಮಾತನಾಡಿ “ವ್ಯಾಕ್ಸಿನ್ ಪ್ರಾರಂಭದಲ್ಲಿ ಬಹಳ ಹೆಚ್ಚಿನ ಮಟ್ಟದಲ್ಲಿ ಇದ್ದು ಅದನ್ನು ತೆಗೆದುಕೊಳ್ಳುವಲ್ಲಿ ಜನರು ವಿಳಂಬ ನೀತಿಯನ್ನು ಅನುಸರಿಸಿದರು, ಆದರೆ ಪ್ರಸ್ತುತ ಸಮಯದಲ್ಲಿ ಕೆಲವು ಭಾಗಗಳಲ್ಲಿ ಜನರು ಅದನ್ನು ತೆಗೆದುಕೊಳ್ಳದೆ ನಷ್ಟವಾಗುತ್ತಿದೆ ಎಂಬ ಮಾಹಿತಿಯನ್ನು ತಿಳಿಸಿ, ಮೈಸೂರು ಘಟಕ ಇಂದು ಬಹಳ ಉತ್ತಮವಾದ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.

ಈಗ ನಾವು ಅನುಭವಿಸುತ್ತಿರುವ ಈ ಪಿಡುಗಿನ ಬಿಕ್ಕಟ್ಟಿನ ಸಮಯ ಕಳೆದು ಹೋಗುತ್ತದೆ ಯಾರಿಗೂ ಆತಂಕ ಬೇಡ. ವೈದ್ಯರ ಮಾರ್ಗದರ್ಶನವನ್ನು ಪಡೆದು ಮುನ್ನೆಚ್ಚರಿಕೆಯನ್ನು ವಹಿಸೋಣ ಎನ್ನುವ ಕಿವಿಮಾತನ್ನು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷೆ ಶೋಭಾ ನಾಗಭೂಷಣ್ ತಿಳಿಸಿದರು.

ಜಿಲ್ಲಾ ಗೌರವಾಧ್ಯಕ್ಷೆ, ಆಧ್ಯಾತ್ಮಿಕ ಚಿಂತಕರು ಆದ ಡಾ. ಎಚ್ ಎಸ್. ಉಷಾರಾಣಿ ಮಾತನಾಡಿ, ನಮ್ಮ ಜಿಲ್ಲಾ ಘಟಕವು ಕೊರೊನಾ ಬಗ್ಗೆ ಎಚ್ಚರಿಕೆ ಇರಲಿ ಎಂಬ ವಿಶೇಷ ಉಪನ್ಯಾಸದಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾದ ಎಚ್ಚರಿಕೆಯ ಕಾರ್ಯಕ್ರಮವನ್ನು ಮಾಡುತ್ತಿದೆ. ಇದು ಜನರಲ್ಲಿ ಆತ್ಮ ಬಲವನ್ನು ಹೆಚ್ಚಿಸುವ ಕಾರ್ಯಕ್ರಮವಾಗಿದೆ. ನಾಡು-ನುಡಿಗೆ, ನಾಡಿನ ವಿಶೇಷತೆಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮ ಮಾಡುತ್ತಿರುವುದು ಸಮಾಜಸೇವೆ ಹಾಗೂ ಸಾಹಿತ್ಯಕ್ಕೆ ನೀಡುತ್ತಿರುವ ಅಮೋಘ ಕೊಡುಗೆ ಎಂದು ತಿಳಿಸಿದರು.

ವೇದಿಕೆ ಕರ್ನಾಟಕ ಮೈಸೂರಿನ ನೂತನ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ರಸಪ್ರಶ್ನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಸರಿಗಮಪ ಖ್ಯಾತಿಯ ಕುಮಾರಿ ತನುಶ್ರೀ ಆರ್. ವಿನಾಯಕನ ಗೀತೆಯೊಂದಿಗೆ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಿದರು.
ನೂತನ ವೇದಿಕೆಯ ಜಿಲ್ಲಾ ಗೌರವ ಸಲಹೆಗಾರ ಮೊಹಮ್ಮದ್ ಹುಮಾಯೂನ್ ಅತಿಥಿಗಳ ಪರಿಚಯದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಈ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆ ತಾಲೂಕು ಹಾಗೂ ಗ್ರಾಮಗಳಿಂದ ಸುಮಾರು 70 ಸ್ಪರ್ಧಾಳುಗಳು ಭಾಗವಹಿಸಿ ಸ್ಪರ್ಧೆಗೆ ಮೆರುಗು ನೀಡಿದರು.

ಇಡೀ ಕಾರ್ಯಕ್ರಮವನ್ನು ಕನ್ನಡ ನುಡಿಯೊಂದಿಗೆ, ಅರ್ಥಪೂರ್ಣವಾದ ನಿರೂಪಣೆಯನ್ನು ನೂತನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಾಗಳಿ ಮಹೇಶ್ ನಡೆಸಿಕೊಟ್ಟರು.

ತಾಂತ್ರಿಕವಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಗೂಗಲ್ ಮೀಟ್ ನಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ನೂತನ ಘಟಕದ ಕೋಶಾಧಿಕಾರಿಯಾದ ಮಧುಶ್ರೀ ಸಹಾಯ ಮಾಡಿದರು.

ಹೆಚ್ಚಿನ ಪ್ರಚಾರ ಹಾಗೂ ಉತ್ತಮ ಆಹ್ವಾನ ಪತ್ರಿಕೆ ಮತ್ತು ಸ್ಪರ್ಧಾಳುಗಳ ನೊಂದಣಿ ಮತ್ತು ನಿಯಮಗಳ ರೂಪುರೇಷೆಯನ್ನು ಜಿಲ್ಲಾ ಸಂಚಾಲಕ ಪ್ರೇಮ್ ಕುಮಾರ್ ಕೆ. ಉಪಾಧ್ಯಕ್ಷರಾದ ಅಶ್ವಿನಿ ಹಾಗೂ ಜಿಲ್ಲಾ ಮಹಿಳಾ ಕಾರ್ಯದರ್ಶಿ ಸುಮಾ ರಘು ನಿರ್ವಹಿಸಿದರು.

ಅಂತಿಮವಾಗಿ ಕಾರ್ಯಕ್ರಮಕ್ಕೆ ತಮ್ಮ ವಾಕ್ಚಾತುರ್ಯದ ಮೂಲಕ ನೂತನ ಘಟಕದ ಜಿಲ್ಲಾ ಸಹ ಕಾರ್ಯದರ್ಶಿ ಮಹದೇವಪ್ರಸಾದ್ ವಂದನಾರ್ಪಣೆ ಸಲ್ಲಿಸಿದರು.

ಈ ಸಮಾಜಮುಖಿ ಕಾರ್ಯಕ್ರಮವು ಆನ್ಲೈನ್‌ ಗೂಗಲ್ ಮೀಟ್ ನಲ್ಲಿ ಸುಮಾರು ಎರಡೂವರೆ ತಾಸು ನಡೆದಿದ್ದು ಬಹಳ ವಿಶೇಷವಾದದ್ದು ಹಾಗೂ ಭಾಗವಹಿಸಿದವರ ಮೆಚ್ಚುಗೆ ಪಡೆಯಿತು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ