NEWSನಮ್ಮರಾಜ್ಯ

ಕಾಂಗ್ರೆಸ್ ಸಹವಾಸದಿಂದ ಕುಮಾರಣ್ಣ ದುಃಖ ಪಡುವಂತಾಯಿತು: ಕೈ ವಿರುದ್ಧ ರೇವಣ್ಣ ಕಿಡಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಹಾಸನ: ದೇವೇಗೌಡ್ರನ್ನು ಹನ್ನೊಂದು ತಿಂಗಳಲ್ಲಿ ತೆಗೆದರಲ್ವಾ, ಆ ಶಾಪ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ. ಆ ಶಾಪದಿಂದಾಗಿಯೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಬೇರೆ ಯಾರೂ ಏನೂ ಮಾಡಬೇಕಾಗಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ತಾಂಬೂಲ ತಂದಿದ್ದೇವೆ, ದೇವೇಗೌಡ್ರೇ ನಿಮ್ಮ ಕಾಲಿಗೆ ಬೀಳುತ್ತೇವೆ, ಕುಮಾರಸ್ವಾಮಿಯವರೇ ನಿಮ್ಮ ಕಾಲಿಗೆ ಬೀಳುತ್ತೇವೆ, ನೀವೇ ಮುಖ್ಯಮಂತ್ರಿಯಾಗ ಬೇಕೆಂದು ಗೋಗರೆದರು, ಅದಕ್ಕೆ ಗೌಡ್ರು ಒಪ್ಪಿಕೊಂಡರು ಎಂದು  ಅಂದು ಕಾಂಗ್ರೆಸ್‌ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದ ಬಗ್ಗೆ ವಿವರಿಸಿದರು.

ಈಗ ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ಸಿಡಿ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಆದರೆ, ನಮ್ಮ ಬಳಿ ಯಾವ ಸಿಡಿಯೂ ಇಲ್ಲ. ಅಂದಿನ ಕಾಂಗ್ರೆಸ್ ಸಹವಾಸದಿಂದ ಕುಮಾರಣ್ಣ ದುಃಖ ಪಡುವಂತಾಯಿತು ಎಂದು ರೇವಣ್ಣ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ಸಿನವರ ಸಹವಾಸದಿಂದ ಕುಮಾರಸ್ವಾಮಿ ಮನೆಯಲ್ಲಿ ಕೂರುವಂತಾಯಿತು. ಕಾಂಗ್ರೆಸ್ಸಿನವರೇ ಮನೆ ಬಾಡಿಗೆ ನೀಡಿ, ಸಹಿ ಹಾಕಿಸಿಕೊಂಡು ಆ ನಂತರ ಮನೆ ಖಾಲಿ ಮಾಡಿಸಿದರು ಎಂದು ರೇವಣ್ಣ ವ್ಯಂಗ್ಯವಾಗಿ ಅಂದಿನ ಘಟನೆಯನ್ನು ವಿವರಿಸಿದರು.

ಇನ್ನು ನಮ್ಮ ಬಳಿ ಯಾವ ಸಿಡಿಯೂ ಇಲ್ಲ. ಆದರೂ ಬಹಳ ವಿಚಾರವಿದೆ, ಸಮಯ ಸಂದರ್ಭ ಬಂದಾಗ ಎಲ್ಲಾ ಹೇಳುತ್ತೇವೆ. ಪಾಪ ಸಿದ್ರಾಮಣ್ಣ, ಪಾಪದ್ದು ಅದಕ್ಕೆ ಏನೂ ಗೊತ್ತಾಗಲ್ಲ ಎಂದು ಹೇಳುವ ಮೂಲಕ ರೇವಣ್ಣ ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲಿನ ಪ್ರೀತಿಯನ್ನು ಮತ್ತೆ ತೋರಿಸಿದ್ದಾರೆ.

ಸಿದ್ರಾಮಣ್ಣ ಮತ್ತೆ ಮುಖ್ಯಮಂತ್ರಿಯಾಗುತ್ತಾರಾ, ಕಾಂಗ್ರೆಸ್ಸಿನವರು ಅವರನ್ನೇ ಮತ್ತೆ ಸಿಎಂ ಮಾಡುತ್ತಾರಾ ಎಂದು ಮೊದಲು ಕೇಳಿ ಎಂದು ರೇವಣ್ಣ ಈ ವೇಳೆ ಮಾಧ್ಯಮದವರನ್ನೇ ಪ್ರಶ್ನಿಸಿದರು.

 

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ