ಅಮಾನತುಗೊಂಡವರು ಮುಷ್ಕರದ ವೇಳೆ ಕರ್ತವ್ಯ ನಿರ್ವಹಿಸಲು ಅನುಮತಿ ನೀಡಿರುವ ಕ್ರಮದ ಬಗ್ಗೆಸ್ಥಿರೀಕರಣ ಪಡೆಯಲು ಕೋರಿಕೆ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ನೌಕರರು 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಕಳೆದ ಏ.7ರಿಂದ 20ರವರೆಗೆ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರದ ವೇಳೆ ವಿವಿಧ ಕಾರಣಗಳಿಂದ ಅಮಾನತುಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದ ಆ ಎಲ್ಲಾ ನೌಕರರ ಅಮಾನತು ಆದೇಶವನ್ನು ತೆರವುಗೊಳಿಸಿ ಕರ್ತವ್ಯ ನಿರ್ವಹಿಸಲು ಅನುಮತಿಸಿದ್ದಕ್ಕೆ ಸ್ಥಿರೀಕರಣ ಪಡೆಯಲು ಕ.ರಾ.ರ.ಸಾ.ನಿ.ದ ಎಲ್ಲಾ ಹಿರಿಯ, ವಿಭಾಗ ನಿಯಂತ್ರಣಾಧಿಕಾಗಳಿಗೆ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ) ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಹೊರಡಿಸಿರುವ ವ್ಯವಸ್ಥಾಪಕರು ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಿಗಮಗಳ ಸಾರಿಗೆಗಳನ್ನು ಕಾರ್ಯಾಚರಣೆ ಮಾಡುವ ಸಲುವಾಗಿ ವಿವಿಧ ಪ್ರಕರಣಗಳಲ್ಲಿ ಏ7.ರಿಂದ 20ರವರೆಗೆ ನಡೆದ ಮುಷ್ಕರದ ಸಮಯದಲ್ಲಿ, ಅಮಾನತುಗೊಂಡಿರುವ ಚಾಲನ ಸಿಬ್ಬಂದಿಗಳಿಗೆ ವಿಭಾಗ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ಅನುಮತಿ ನೀಡಲಾಗಿತ್ತು.
ಆ ಅಮಾನತುಗೊಂಡ ಸಿಬ್ಬಂದಿಗಳ ವಿವರದೊಂದಿಗೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸಿ, ಅಮಾನತು ಆದೇಶವನ್ನು ತೆರವುಗೊಳಿಸಿ ಕರ್ತವ್ಯ ನಿರ್ವಹಿಸಲು ಅನುಮತಿ ನೀಡಿರುವ ಕ್ರಮದ ಬಗ್ಗೆಸ್ಥಿರೀಕರಣ (ರಟಿಫಿಕೇಷನ್) ಪಡೆಯಲು ಕೋರಲಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
Nimge swalpa adru artha agidre paper nalli aki illa idbidi iri sir
Aa latter na correct agi study madi
ಮುಷ್ಕರ ಸಮಯದಲ್ಲಿ ಅಮಾನತುಗೊಂಡಿರುವ ನೌಕರರನ್ನು ಕರೆಸಿಕೊಂಡು ಬಸ್ಸುಗಳನ್ನು ಚಲಿಸಿದ ವರಿಗೆ ಮಾತ್ರ ಅಮಾನತು ರದ್ದುಗೊಳಿಸಿ ಅಂತ ಇರೋದು ಆಫೀಸರ್ಸ್ ಯಾರು ಸಾಚಾಗಳಲ್ಲ