NEWSನಮ್ಮರಾಜ್ಯಸಿನಿಪಥ

ಅ.1ರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ: ಷರತ್ತುಗಳು ಅನ್ವಯ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೋವಿಡ್​ ಎರಡನೇ ಅಲೆ ಬಹುತೇಕ ಕಡಿಮೆ ಆಗಿದೆ. ಈ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಚಿತ್ರಮಂದಿರಕ್ಕೆ ಬರುವವರು ಕೋವಿಡ್​ ಒಂದು ಡೋಸ್​ಪಡೆದಿರುವುದು ಕಡ್ಡಾಯವಾಗಿದೆ. ಈ ಬೆಳವಣಿಗೆಯಿಂದ ಸ್ಟಾರ್​ ಸಿನಿಮಾಗಳು ರಿಲೀಸ್​ಗೆ ರೆಡಿ ಆಗುತ್ತಿವೆ.

ಕೊರೊನಾ ಪ್ರಕರಣಗಳು ಇಳಿಮುಖ ಆದ ಬಳಿಕ ಎಲ್ಲ ಉದ್ಯಮಗಳು ಸಹಜಸ್ಥಿತಿಗೆ ಮರಳುತ್ತಿವೆ. ಆದರೆ ಚಿತ್ರೋದ್ಯಮ ಮಾತ್ರ ಸಂಕಷ್ಟದಲ್ಲೇ ಇದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸುವಂತೆ ಕನ್ನಡ ಚಿತ್ರರಂಗದ ನಿರ್ಮಾಪಕರು ಮನವಿ ಮಾಡಿಕೊಂಡಿದ್ದರು.

ಈ ಸಂಬಂಧ ‘ಭಜರಂಗಿ 2’ ಚಿತ್ರದ ನಿರ್ಮಾಪಕ ಜಯಣ್ಣ, ಸಲಗ ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್​, ಕೋಟಿಗೊಬ್ಬ 3 ಚಿತ್ರಕ್ಕೆ ಬಂಡವಾಳ ಹೂಡಿರುವ ಸೂರಪ್ಪ ಬಾಬು ಸೇರಿದಂತೆ ಹಲವರ ಜೊತೆ ಸಚಿವ ಸುಧಾಕರ್​ ಸಭೆ ನಡೆಸಿದ್ದರು. ಇದಾದ ಬೆನ್ನಲ್ಲೇ ಅ.1ರಿಂದ ಹೌಸ್​ಫುಲ್​ಗೆ ಅವಕಾಶ ಸಿಕ್ಕಿದೆ. ಇದಕ್ಕೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.

ಸರ್ಕಾರದ ಷರತ್ತುಗಳೇನು?:  ಥಿಯೇಟರ್ ಪ್ರವೇಶಕ್ಕೆ 1 ಲಸಿಕೆ ಕಡ್ಡಾಯ ಪಡೆದಿರಬೇಕು
ಪಾಸಿಟಿವಿಟಿ ರೇಟ್ ಶೇ.1ಕ್ಕಿಂತ ಕಡಿಮೆ ಇದ್ರೆ ಮಾತ್ರ ಚಿತ್ರಮಂದಿರ ಓಪನ್

ಪಾಸಿಟಿವಿಟಿ ರೇಟ್ಶೇ .1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರ ಓಪನ್
ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಾದರೆ ಶೇ.50ರಷ್ಟು ಸೀಟ್‌ ಭರ್ತಿಗೆ ಸೂಚನೆ

ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಾದರೆ ಚಿತ್ರಮಂದಿರ ಬಂದ್‌
ಪಾಸಿಟಿವಿಟಿ ದರ ಹೆಚ್ಚಾದ ಜಿಲ್ಲೆಗಳಲ್ಲಿ ಚಿತ್ರಮಂದಿರ ಕ್ಲೋಸ್‌

ಚಿತ್ರಮಂದಿರಕ್ಕೆ ಗರ್ಭಿಣಿಯರಿಗೆ, ಮಕ್ಕಳಿಗೆ ಅವಕಾಶವಿಲ್ಲ
ಇತ್ತೀಚೆಗೆ ನಡೆದಿತ್ತು ಸಭೆ

ಸ್ಟಾರ್​ ಸಿನಿಮಾಗಳು ಬರೋಕೆ ಸಜ್ಜು: ಸುದೀಪ್​ ನಟನೆಯ ‘ಕೋಟಿಗೊಬ್ಬ 3’, ದುನಿಯಾ ವಿಜಯ್​ ನಟನೆಯ ‘ಸಲಗ’, ಹಾಗೂ ಶಿವರಾಜ್​ಕುಮಾರ್​ ಅಭಿನಯದ ‘ಭಜರಂಗಿ 2’ ಸಿನಿಮಾಗಳು ಸದ್ಯ ಬಿಡುಗಡೆಗಾಗಿ ಕಾದಿವೆ. ಸರ್ಕಾರದಿಂದ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ಸಿಕ್ಕರೆ ಈ ಸಿನಿಮಾಗಳು ಸರದಿ ಪ್ರಕಾರ ತೆರೆಗೆ ಬರಲಿವೆ.

ಎರಡು ವಾರದ ಅಂತರದಲ್ಲಿ ಒಂದೊಂದು ಸ್ಟಾರ್​ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅ.1ರಂದು ಈ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ. ಬಳಿಕ ಅ.14ರಂದು ‘ಕೋಟಿಗೊಬ್ಬ 3’ ಹಾಗೂ ಅ.29ಕ್ಕೆ ‘ಭಜರಂಗಿ 2’ ಸಿನಿಮಾ ರಿಲೀಸ್​ ಆಗುವ ಸಾಧ್ಯತೆ ಇದೆ.

ಸದ್ಯ ಕೇವಲ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇರುವುದರಿಂದ ಕೆಲವು ಸಣ್ಣ ಬಜೆಟ್​ನ ಸಿನಿಮಾಗಳು ತೆರೆಕಾಣುತ್ತಿವೆ. ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿಲ್ಲ. ಆದರೆ, ಹೌಸ್​ಫುಲ್​ ಪ್ರದರ್ಶನದ ಅವಕಾಶದೊಂದಿಗೆ ಸ್ಟಾರ್​ ಸಿನಿಮಾಗಳು ರಿಲೀಸ್​ ಆದರೆ ಚಿತ್ರೋದ್ಯಮದ ವಹಿವಾಟಿನಲ್ಲಿ ಚೇತರಿಕೆ ಆಗುವ ನಿರೀಕ್ಷೆ ಇದೆ.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ