Please assign a menu to the primary menu location under menu

NEWSನಮ್ಮರಾಜ್ಯ

ಸಾರಿಗೆ ನೌಕರರಿಗೆ ಮಾರಕವಾಗುವ ಆದೇಶ ಹೊರಡಿಸಿದ ಅಧಿಕಾರಿ: ಸಂಘಟನೆಯೊಂದರ ಅಡಿಯಾಳಂತೆ ವರ್ತಿಸುತ್ತಿದ್ದಾರೆಯೇ ಐಎಎಸ್‌ ಅಧಿಕಾರಿಗಳು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:   ಕಳೆದ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ಮುಷ್ಕರದ ವೇಳೆ ಏಕಾಏಕಿ ವರ್ಗಾವಣೆ ಮಾಡಿದ್ದ ಸಾರಿಗೆಯ ನಾಲ್ಕೂ ನಿಗಮಗಳ ಪೈಕಿ ಸೆ.14ರಂದು ಕೆಎಸ್‌ಆರ್‌ಟಿಸಿಯು ತಾನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದವರನ್ನು ಮತ್ತೆ ಆಡಳಿತಾತ್ಮಕವಾಗಿಯೇ ಮರು ವರ್ಗಾವಣೆ ಮಾಡಿತ್ತು. ಆದರೆ, ಆ ವರ್ಗಾವಣೆ ಮಾಡಿದ ಒಂದು ಗಂಟೆಯಲ್ಲಿ ಮತ್ತೆ ಆ ಆದೇಶವನ್ನು ತಿರುಚಿದೆ.

ಹೌದು!  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂದು ಮಾಡಿದ್ದ ಪ್ರತಿಭಟನೆ ವೇಳೆ ಮನಸೋಯಿಚ್ಛೆ ಅಧಿಕಾರಿಗಳು ನೌಕರರನ್ನು ದೂರದೂರುಗಳಿಗೆ ವರ್ಗಾವಣೆ, ಅಮಾನತು, ವಜಾದ ಜತೆಗೆ ಪೊಲೀಸ್‌ ಪ್ರಕರಣಗಳನ್ನು ದಾಖಲಿಸಿ ದರ್ಪ ಮೆರೆದಿದ್ದರು. ಅಂದು ಏಕಾಏಕಿ ನೌಕರರ ವಿರುದ್ಧ ಪಿತೂರಿನಡೆಸಿದ ಅಧಿಕಾರಿಗಳು ಮತ್ತೆ ಅದೇ ಚಾಳಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ನೋಡಿ.. ಏಪ್ರಿಲ್‌ನಲ್ಲಿ ಕೆಎಸ್‌ಆರ್‌ಟಿಸಿಯು ತಾನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದ ನೌಕರರ ಪೈಕಿ 137 ನೌಕರರನ್ನು ಮತ್ತೆ ಸೆ.14ರಂದು ಅದೇ ವಿಭಾಗಕ್ಕೆ ವರ್ಗಾವಣೆ ಮಾಡಿದ್ದೇವೆ ಎಂದು ಆದೇಶ ಹೊರಡಿಸಿತ್ತು. ಆ ಆದೇಶ ಹೊರಬಿದ್ದ ಒಂದು ತಾಸಿನಲ್ಲೇ ಮತ್ತೆ ಆ ಆಡಳಿತಾತ್ಮಕ ಎಂದು ಇರುವುದನ್ನು ಕೋರಿಕೆ ಮೇರೆಗೆ ವರ್ಗಾವಣೆ ಎಂದು ಓದಿಕೊಳ್ಳುವುದು ಎಂದು ಮತ್ತೊಂದು ಆದೇಶ ಹೊರಡಿಸಿದೆ.

ಇದನ್ನು ಗಮನಿಸಿದರೆ ತಿಳಿಯುತ್ತಿದೆ. ಒಬ್ಬ ಐಎಎಸ್‌ ಅಧಿಕಾರಿ ಗಂಟೆಗೊಂದು ಘಳಿಗೆಗೊಂದು ಎಂಬಂತೆ ತಮಗೆ ಇಷ್ಟ ಬಂದ ರೀತಿಯಲ್ಲಿ ಆದೇಶ ಹೊರಡಿಸುತ್ತಿದ್ದಾರೆ ಎಂದು. ಅಂದರೆ ಸಾರಿಗೆ ಈ ಅಧಿಕಾರಿಗಳು ಎಷ್ಟು ಬೇಜವಾಬ್ದಾರಿಯಿಂದ ನಡೆದುಕೊಂಡು ನೌಕರರಿಗೆ ಹಿಂಸೆ ನೀಡುವುದಕ್ಕೆ ಆದೇಶ ಹೊರಡಿಸುತ್ತಿದ್ದಾರೆ ಎಂಬುವುದು ಇಲ್ಲಿ ಸ್ಪಷ್ಟ. ಇಂಥ ಐಎಎಸ್‌ ಅಧಿಕಾರಿಗಳೇ ಕೆಳಹಂತದ ಅಧಿಕಾರಿಗಳನ್ನು ಬೆಂಬಲಿಸಿ ನೌಕರರಿಗೆ ಕಾನೂನಾತ್ಮಕವಾಗಿ ಸಿಗಬೇಕಾಗಿರುವುದನ್ನು ಕಿತ್ತುಕೊಳ್ಳುವ ಕೆಟ್ಟ ಉದ್ದೇಶದಿಂದ ಅಡ್ಡಗಾಲು ಹಾಕುವುದು ಎಷ್ಟು ಸರಿ.

ಇದರಂತೆ ಕಳೆದ ಜೂನ್‌ನಲ್ಲಿ 214 ತರಬೇತಿ ನೌಕರರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಂಡಿದ್ದೇವೇ ಎಂದು ಆದೇಶ ಹೊರಡಿಸಿದ್ದ ಅಧಿಕಾರಿಗಳು ಅರ್ಧ ತಾಸಿನಲ್ಲೇ ಮತ್ತೆ ಆ ಆದೇಶವನ್ನು ಹಿಂಪಡೆದಿರುವುದಾಗಿ ಹೇಳಿ ಮತ್ತೊಂದು ಆದೇಶ ಹೊರಡಿಸುತ್ತಾರೆ. ಅಂದರೆ ಈ ಸಾರಿಗೆ ನಿಗಮಗಳ ಉನ್ನತ ಅಧಿಕಾರಿಗಳು ಅಪ್ಪ ಅಮ್ಮ ಇಲ್ಲದ ಅನಾಥ ಮಕ್ಕಳ ರೀತಿಯಲ್ಲಿ ನೌಕರರನ್ನು ನಡೆಸಿಕೊಳ್ಳುತ್ತಿದ್ದು, ದರ್ಪ ಮೆರೆಯುತ್ತಿದ್ದಾರೆ ಎಂಬುವುದು ಇನ್ನಷ್ಟು ಸ್ಪಷ್ಟವಾಗಿದೆ.

ಇನ್ನು ಅಧಿಕಾರಿಗಳು ಗಂಟೆಗೊಂದು, ಘಳಿಗೆಗೊಂದು ಆದೇಶ ಮಾಡುತ್ತಿದ್ದರೂ ಸಂಬಂಧಪಟ್ಟ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನಿಗಮಗಳ ಅಧ್ಯಕ್ಷರು ಏನು ಮಾಡುತ್ತಿದ್ದಾರೆ? ಅಧಿಕಾರಿಗಳು ಇವರ ಹಿಡಿತದಲ್ಲಿಲ್ಲವೇ? ಇಂಥ ಅಧಿಕಾರಿಗಳಿಗೆ ಕಡಿವಾಣ ಹಾಕಿ ಸಂಸ್ಥೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

ಈ ಸಾರಿಗೆ ನಿಗಮದ ಅಧಿಕಾರಿಗಳನ್ನು ಯಾವುದೋ ಒಂದು ನೌಕರರ ಪರ ಸಂಘಟನೆ ಎಂದು ಹೇಳಿಕೊಂಡು ಕಳೆದ 40 ವರ್ಷಗಳಿಂದ ನೌಕರರು ಕೊಟ್ಟ ಹಣದಿಂದಲೇ ಬೆಳೆದು ಈಗ ಕೋಟಿ ಕೋಟಿ ರೂ.ಗಳನ್ನು ಸಂಗ್ರಹಿಸಿರುವ, ಆ ಸಂಘಟನೆ ನೌಕರರ ವಿರುದ್ಧವೇ ತಿರುಗಿ ಬಿದ್ದಿದ್ದು, ನೌಕರರ ಹಿತ ಕಾಯುವ ಬದಲಿಗೆ ಅಧಿಕಾರಿಗಳು ನೌಕರರನ್ನು ಹೇಗೆ ಹಿಂಸಿಸ ಬಹುದು ಎಂಬ ಸಲಹೆ ನೀಡುತ್ತಾ ನೌಕರರನ್ನು ಹುರಿದು ಮುಕ್ಕುವ ಕೆಲಸವನ್ನು ಮಾಡಿಸುತ್ತಿದೆ.

ಅಂದರೆ ಸರ್ಕಾರ ಇಲ್ಲಿ ನೌಕರರ ಪರ ಎಂದು ಹೇಳಿಕೊಂಡು ನೌಕರರ ವಿರುದ್ಧವೇ ಇರುವ ಈ ಸಂಘಟನೆಗೆ ಗುತ್ತಿಗೆ ಕೊಟ್ಟಂತೆ ನಡೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕಾರಣ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಐಎಎಸ್‌ ಅಧಿಕಾರಿಗಳು ಒಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವಾರು ಬಾರಿ ಅದರ ಬಗ್ಗೆ ಚರ್ಚಿಸಿರುತ್ತಾರೆ. ನಂತರ ಆ ಆದೇಶವನ್ನು ಪ್ರಕಟಿಸುತ್ತಾರೆ. ಆದರೆ ಅಂಥ ಆದೇಶವನ್ನು ಪ್ರಕಟಿಸಿದ ಒಂದು ಗಂಟೆಯಲ್ಲೇ ತಿರುಚಿ ನೌಕರರಿಗೆ ಮಾರಕವಾಗುವ ರೀತಿಯಲ್ಲಿ ಮತ್ತೊಂದು ಆದೇಶ ಹೊರಡಿಸುತ್ತಾರೆ ಎಂದರೆ ಅದರ ಅರ್ಥ ಏನು?

ಇನ್ನು ಸಾರಿಗೆ ಸಚಿವರು ಈ ರೀತಿಯ ಅಧಿಕಾರಿಗಳ ನಡೆಗೆ ಬ್ರೇಕ್‌ಹಾಕಿ, ಸಂಸ್ಥೆಯಲ್ಲಿ ಎಲ್ಲರೂ ಸಂವಿಧಾನಾತ್ಮಕವಾಗಿ ಒಂದೇ ಎಂದು ನೋಡುವ ದೃಷ್ಟಿಕೋನದಡಿ ತರಬೇಕಾದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಹೀಗೆಯೇ ಅಧಿಕಾರಿಗಳನ್ನು ಬಿಟ್ಟರೆ ಮುಂದಿನ ದಿನಗಳಲ್ಲಿ ದೇಶದಲ್ಲೇ ನಂ.1 ಸಾರಿಗೆ ಎನಿಸಿಕೊಂಡಿರುವ ಸಂಸ್ಥೆ ಇತಿಹಾಸ ಸೇರಲಿದೆ.

ಹೀಗಾಗಿ ಯಾವುದೋ ಒಂದು ಸಂಘಟನೆಯ ಮುಖಂಡ ಹೇಳಿದಂತೆ ಕೇಳುವ ಬದಲಿಗೆ ಸಂಸ್ಥೆಗೆ ಮತ್ತು ಸಂಸ್ಥೆಯ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ನಡೆದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಸಚಿವರು ತಾಕೀತು ಮಾಡಬೇಕಿದೆ.

ಇನ್ನು ನೌಕರರ ಹಂಗಿನಿಂದಲೇ 40 ವರ್ಷದಿಂದ ಬೆಳೆದು ಈಗ ಹೆಮ್ಮರವಾಗಿ ನಿಂತಿರುವ ಸಂಘಟನೆಯ ಮುಖಂಡ ನೌಕರರಿಗೆ ನ್ಯಾಯ ಕೊಡಿಸುವ ಬದಲು ಅವರನ್ನು ಹಿಂಸಿರುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿರುವ ಆತನಿಗೆ ಶೋಭೆಯಲ್ಲ. ನಮ್ಮ ಕೈಯಲ್ಲಿ ಮಾಡಲು ಸಾಧ್ಯವಿಲ್ಲ ಎಂದರೆ ಸುಮ್ಮನಿರೋಣ ಅದನ್ನು ಬಿಟ್ಟು ಒಳ್ಳೆ ಕೆಲಸಕ್ಕೆ ಮೂಗುತೂರಿಸಿ ಹಾಳುಮಾಡುವುದು ಒಬ್ಬ ನಾಯಕನ ಲಕ್ಷಣವಲ್ಲ.

ಇನ್ನು ಸೆ.14ರಂದು ಮೊದಲು ಹೊರಡಿಸಿದ್ದ ಆದೇಶದಂತೆ ನೌಕರರನ್ನು ಆಡಳಿತಾತ್ಮಕ ವರ್ಗಾವಣೆ ಮಾಡಬೇಕು ಎಂದು ಹಲವು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...