ಬೆಂಗಳೂರು: ಮುಷ್ಕರದಿಂದ ಸರ್ಕಾರಕ್ಕೆ ಮತ್ತು ಆಡಳಿತ ಮಂಡಳಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹೀಗಾಗಿ ನೌಕರರು ಪ್ರತಿಭಟನೆಗೆ ಇಳಿಯಂತೆ ಕಾನೂನು ಬದ್ಧವಾದ ಸೌಲಭ್ಯಗಳನ್ನು ಸಂಸ್ಥೆಯಲ್ಲೇ ಇರುವ ಆಡಳಿತ ವರ್ಗದವರಿಗೆ ನೀಡುತ್ತಿರುವ ರೀತಿ ಮತ್ತು ಇತರ ನಿಗಮಗಳಂತೆ ಕಲ್ಪಿಸಿಕೊಡಬೇಕಿದೆ.
ಸಾರಿಗೆ ನೌಕರರು ಮತ್ತು ಸರ್ಕಾರಿ ನೌಕರರ ನಡುವೆ ಇರುವ ತಾರತಮ್ಯತೆಯನ್ನು ಮೊದಲು ಹೋಗಲಾಡಿಸಬೇಕಿದೆ. ಹೀಗಾದರೆ ಸರ್ಕಾರ ಮತ್ತು ಸಾರಿಗೆ ನಿಗಮಗಳು ಯಾವುದೇ ಮುಜುಗರಕ್ಕೆ ಒಳಗಾದೆ ಇತರ ನಿಗಮಗಳಂತೆ ಇರಲು ಸಾಧ್ಯ.
ಇನ್ನು ಮುಷ್ಕರದ ವೇಳೆ ವರ್ಗಾವಣೆ, ವಜಾ, ಅಮಾನತು ಆಗಿರುವ ಎಲ್ಲ ನೌಕರರು ಯಥಾವತ್ತಾಗಿ ಅದೇ ವಿಭಾಗದ ಅದೇ ಘಟಕದಲ್ಲಿ ಕರ್ತವ್ಯ ಮಾಡಲು ಅನುಕೂಲ ಮಾಡಿಕೊಡಬೇಕು. ಅದರ ಜತೆಗೆ ಈ ಕೆಳಗಿನ ಹಲವು ಸಲಹೆಗಳನ್ನು ನಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ನಿಗಮದ ನೌಕರರು ಮನವಿ ಮಾಡಿದ್ದಾರೆ.
1. ನಾಲ್ಕು ವರ್ಷಕ್ಕೊಮ್ಮೆ ಮುಷ್ಕರ ಮಾಡುವುದು ಸರಿಯಾದ ಪದ್ಧತಿ ಅಲ್ಲ.
2. ಸಾರ್ವಜನಿಕರಿಗೆ ತೊಂದರೆ ಕೊಡುವುದು ನಮಗೆ ಸರಿಯಾದ ಪದ್ಧತಿ ಅಲ್ಲವೇ ಅಲ್ಲ.
3. ನಮ್ಮ ಸಂಸ್ಥೆ ಮತ್ತು ನೌಕರರ ಸಂಪತ್ತು ಹಾಳು ಮಾಡುವುದು ನಮಗೆ ಒಳ್ಳೇದು ಅಲ್ಲವೇ ಅಲ್ಲ.
4. ನಮ್ಮ ಹೊಟ್ಟೆ ತುಂಬಿಸಿ ನಮ್ಮ ಜೀವನ ಮಾಡುವ ಸಂಸ್ಥೆಯ ಅಬಿವೃದ್ಧಿ ಮಾಡುವುದೇ ನಮ್ಮ ಮೊದಲ ಆದ್ಯ ಕರ್ತವ್ಯ.
5. ಮುಷ್ಕರ ಹೂಡಿ ನಮ್ಮ ವಾಹನಗಳಿಗೆ ಕಲ್ಲುಗಳನ್ನು ಹೊಡೆದು ಬೆಂಕಿ ಇಟ್ಟು ನಾಶಪಡಿಸುವುದು ನಮಗೆ ಸರಿಯಾದುದ್ದಲ್ಲ.
6. ಪ್ರಪಂಚದಲ್ಲಿಯೇ ಅತಿ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನುಪಡೆದಿರುವ ನಮ್ಮ ಹೆಮ್ಮೆಯ ಸಂಸ್ಥೆಯ ಘನತೆ ಗೌರವಕ್ಕೆ ಕುಂದುಂಟು ಮಾಡುವುದು ಸರಿಯಲ್ಲ.
7. ನಾಲ್ಕು ವರ್ಷಕೊಮ್ಮೆ ಅಗ್ರಿಮೆಂಟ್ ನೀಡುವ ಪದ್ಧತಿ ಈಗಲಾದರೂ ಕೊನೆಗೊಳ್ಳಲೇ ಬೇಕು. ಇದರಿಂದ ಸಂಸ್ಥೆಯ ಹಲವರಿಗೆ ಸಿಹಿ ಕೆಲವರಿ ಕಹಿ ಎಂಬಂತಾಗುತ್ತದೆ. ಹೀಗಾಗಿ ಅಗ್ರಿಮೆಂಟ್ ಎಂಬ ಭೂತವಿದ್ದರೆ ಸಂಸ್ಥೆಯನ್ನು ಮಾರಿ ನೌಕರರಿಗೆ ಹಣ ನೀಡಬೇಕಾದ ಸ್ಥಿತಿ ಬರಬಹುದು. ಆದ್ದರಿಂದ ಈ ಅಗ್ರಿಮೆಂಟ್ ಅನ್ನೋದು ಬೇಡವೇ ಬೇಡ.
8. ಕೆಲವು ಸಂಘಟನೆಗಳು ಅಗ್ರಿಮೆಂಟ್ ಕೇಳಲಿ ಮತ್ತೆ ಕೆಲವು ಸಂಘಟನೆಗಳು 6ನೇ ವೇತನ, ಶಾಶ್ವತ ಪರಿಹಾರ ಕೇಳಲಿ ಯಾವುದೂ ಬೇಡವೇ ಬೇಡ ಯಾರ ಮಾತಿಗೂ ಕಿವಿ ಗೊಡಬೇಡಿ.
9. ಸಂಘಟನೆಗಳು ಎಲ್ಲವೂ ಮರೆಯಾಗಬೇಕು ನೌಕರರ ಕೂಟವೂ ಸೇರಿದಂತೆ ಯಾವುದೇ ಸಂಘಟನೆ ಆಗಲಿ 4 ನಿಗಮಗಳಿಂದ ಒಂದೇ ಸಂಘಟನೆ ಇರಬೇಕು.
10. ಈ ಎಲ್ಲ ಅಂಶಗಳನ್ನು ಮನಗೊಂಡು ಅಗ್ರಿಮೆಂಟ್ ಎಂಬ ನಾಲ್ಕು ವರ್ಷಗಳಿಗೊಮ್ಮೆಯ ರಗಳೆ ಮತ್ತು ಶಾಶ್ವತ ಪರಿಹಾರ ಪಕ್ಕಕ್ಕಿಟ್ಟು ಸಾರಿಗೆ ನೌಕರರ ಸಂಘಟನೆಗಳ ಚುನಾವಣೆ ಮೊದಲು ನಡೆಯಬೇಕು.
11. ಆ ಚುನಾವಣೆಯಲ್ಲಿ ಯಾವ ಸಂಘಟನೆ ಅಸ್ತಿತ್ವಕ್ಕೆ ಬರುತ್ತದೋ ಅದೇ 4 ನಿಗಮಗಳ ಏಕೈಕ ಸಂಘಟನೆ. ಚುನಾವಣೆಯಲ್ಲಿ ಗೆದ್ದು ಬರುವ ಸಂಘಟನೆಗೆ ಎಲ್ಲ ಪ್ರಾತಿನಿಧ್ಯ ನೀಡಬೇಕು.
ಆಡಳಿತ ಮಂಡಳಿ ಮತ್ತು ಸರ್ಕಾರ ಈ ಎಲ್ಲ ಅಂಶಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳುವ ಮೂಲಕ ನೌಕರರ ಹಿತ ಕಾಪಾಡಬೇಕಿದೆ ಎಂಬುವುದು ನಮ್ಮ ಮನವಿ.
– ದ್ಯಾವಪ್ಪ ಟಿ.ಎ. ಚಾಲಕ ಕಂ ನಿರ್ವಾಹಕರು 5ನೇ ಘಟಕ
ಹೌದು ಸರಿಯಾದ ಮಾತು ಅಗ್ರಿಮೆಂಟ್ ಬೇಡವೆ ಬೇಡ ಚುನಾವಣೆ ಮಾಡಿ