CrimeNEWSನಮ್ಮರಾಜ್ಯ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬಿಎಂಟಿಸಿ ನೌಕರ ಮುನೇಗೌಡ ಇನ್ನಿಲ್ಲ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ (ಪ್ರಸ್ತುತ ವಜಾ ಗೊಂಡಿದ್ದ) ಮುನೇಗೌಡ ಎಂಬುವರು ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾರೆ.

ಬಿಎಂಟಿಸಿ 43ನೇ ಘಟಕದ ಚಾಲಕ ಮುನೇಗೌಡ ಅವರು ನಾಲ್ಕು ದಿನದ ಹಿಂದೆ ಅಪಾಘಾತಕ್ಕಿಡಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು ಕೊನೆಗೂ ಇಂದು ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಗುರುವಾರ ಬೆಳಗ್ಗೆ ಸುಮಾರು 11.15 ರಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ಇವರ ಅಗಲಿಕೆಯ ಅಘಾತವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ನೌಕರರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ಮುಷ್ಕರದಲ್ಲಿ ನೌಕರರಿಗೆ ಅನ್ಯಾಯವಾಗಿದೆ, ನ್ಯಾಯ ದೊರಕಿಸಿ ಕೊಡಿ ಎಂಬ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆಂಬ ಕಾರಣಕ್ಕೆ ಮುನೇಗೌಡ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ಅದರೆ ಸುಮಾರು 15 ವರ್ಷಗಳಿಂದ ಯಾವುದೇ ಗೈರು ಹಾಜರಿಯಿಲ್ಲದೆನಿತ್ಯ ಒಳ್ಳೆಯ ಅದಾಯ ತರುತ್ತಿದ್ದ ಮುನೆಗೌಡನಂತಹ ಅದೆಷ್ಟೋ ನಮ್ಮ ಸಹೋದ್ಯೊಗಿಗಳಿಗೆ ಅನ್ಯಾಯವನ್ನು ಪ್ರಶ್ನಿಸಬಾರದು, ನ್ಯಾಯ ಕೇಳಬಾರದು. ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಂತೆ ಗುಲಾಮಗಿರಿಯಲ್ಲಿ ಬದುಕಬೇಕು ಎಂಬ ಅಲೋಚೆನೆಯುಳ್ಳ ನಮ್ಮ ಕೇಲವು ಅಧಿಕಾರಿಗಳು ಕಾನೂನು ಬಾಹಿರವಾಗಿ ಶಿಕ್ಷೆ ನೀಡಿದ್ದಾರೆ.

ಹಲವಾರು ವರ್ಷ ಸೇವೆ ಸಲ್ಲಿಸಿರುವ ಅನೇಕ ನೌಕರರನ್ನು ಸಂಸ್ಥೆಯಿಂದ ಪ್ರಸ್ತುತ ವಜಾಗೊಳಿಸಿದ್ದು, ಯಾವುದೇ ನೆರವು ಸಿಗದಂತೆ ಮಾಡಿ ಅವರ ಪತ್ನಿ ಮಕ್ಕಳನ್ನು ಬಿದಿಪಾಲು ಮಾಡಿದ ಇದರ ಹಿಂದೆ ಪಾತ್ರವಿರುವ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕು ಎಂದು ನೊಂದ ನೌಕರರು ಕಣ್ಣೀರಿಡುತ್ತಿದ್ದಾರೆ.

ನ್ಯಾಯಸಮ್ಮತ ಹೋರಾಟದಲ್ಲಿ ಜತೆಗೆ ಇರುತ್ತೇವೆಂದು ಭರವಸೆ ನಿಡುತ್ತಿದ್ದ ನಮ್ಮನ್ನೆಲ್ಲಾ ವಜಾ ಮಾಡಿದ ತಕ್ಷಣ ಸ್ವಾರ್ಥ ಮನೋಭಾವದಿಂದ ಕರ್ತವ್ಯಕ್ಕೆ ಹೋದ ನಮ್ಮ ಸಹೋದ್ಯೋಗಿಗಳಿಗೂ ಮರೆಯದೆಯೇ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ. ದೇವರು ನಿಮ್ಮ ನಡೆಗೆ ತಕ್ಕ ರೀತಿಯ ಪ್ರತಿಫಲಕೊಡಲಿದೆ ಎಂದು ಬೇಡಿಕೊಳ್ಳುತ್ತೇವೆ ಎಂದು ನೊಂದು ಹೇಳಿದ್ದಾರೆ.

ಭಗವಂತನಲ್ಲಿ ಪ್ರಾರ್ಥಿಸುವುದೆನೆಂದರೆ ಇದಕ್ಕೆಲ್ಲಾ ಕಾರಣರಾದ ಅಧಿಕಾರಿಗಳು ಮತ್ತು ನಮ್ಮ ಸಹೋದ್ಯೋಗಿಗಳಿಗೆ ಅವರ ಕೊನೆಯುಸಿರು ಹೋಗುವ ಮುನ್ನ ಕನಿಷ್ಠ ನಾಲ್ಕು ದಿನವಾದರು ಪಶ್ಛತಾಪ ಪಡುವ ಅವಕಾಶ ಕಲ್ಪಿಸಿಕೊಡು ಎಂದು ಶೇ. 90ರಷ್ಟು ಸಾರಿಗೆ ನೌಕರರ ಪರವಾಗಿ ಬೇಡಿಕ್ಕೊಳ್ಳುತ್ತೇನೆ. ನೌಕರರು ಸಮಸ್ಯೆಯಲ್ಲಿ ಇರುವಂತಹ ಸಂದರ್ಭದಲ್ಲಿ ಸದಾ ಅವರ ಸಮಸ್ಯೆಗೆ ಸ್ಪಂದಿಸುತ್ತಿದ್ದ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಡೆವು.

l ಎಚ್.ಡಿ.ನಾಗೇಂದ್ರ ಸಾರಿಗೆ ನೌಕರ ಮತ್ತು ನೌಕರರ ಮುಖಂಡ

Leave a Reply

error: Content is protected !!
LATEST
BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ