NEWSನಮ್ಮರಾಜ್ಯ

ಸಾರಿಗೆ ನೌಕರರ ನೂತನ ಕ್ಷೇಮಾಭಿವೃದ್ಧಿ ಸಂಘ ಸೇರ್ಪಡೆ ದಿನಾಂಕ ವಿಸ್ತರಣೆ – ಸೆ.20 ಕೊನೆ ದಿನ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ಸಮಸ್ಯೆ ಪರಿಹರಿಸಬೇಕೆಂಬ ಧ್ಯೇಯದೊಂದಿಗೆ ನೂತನ ಕ್ಷೇಮಾಭಿವೃದ್ಧಿ ಸಂಘವೊಂದು ಅತೀ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.

ಸಂಘಕ್ಕೆ ಈಗಾಗಲೇ ನೋಂದಣಿ ಆರಂಭವಾಗಿದ್ದು ಸಾವಿರಾರು ಸಾರಿಗೆ ನೌಕರರು ಉಚಿವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದರಿಂದ ನೌಕರರ ಹಲವಾರು ಸಮಸ್ಯೆಗಳು ನಿವಾರಣೆ ಆಗುವ ಜತೆಗೆ ಹಲವಾರು ಸೌಲಭ್ಯಗಳು ಸಿಗಲಿವೆ ಎಂದು ಸುಪ್ರೀಂ ಕೋರ್ಟ್‌ ಹಾಗೂ ಹೈ ಕೋರ್ಟ್‌ ವಕೀಲ ಎಚ್‌.ಬಿ. ಶಿವರಾಜು ತಿಳಿಸಿದ್ದಾರೆ.

ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ನೌಕರರಲ್ಲೂ ಸೌಹಾರ್ದತೆ ವಾತಾವರಣ ನಿರ್ಮಾಣ ಮಾಡಲು ಈ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲು ಉದ್ದೇಶಿಸಲಾಗಿದ್ದು, ಆಗಸ್ಟ್‌ 30 ರಿಂದ ನೋಂದಣಿ ಪ್ರಾರಂಭ ಮಾಡಲಾಗಿದೆ. ಇದೇ ಸೆ.20 ನೋಂದಣಿಗೆ ಕಡೆಯ ದಿನವಾಗಿದೆ. ಹೀಗಾಗಿ ಪ್ರತಿಯೊಬ್ಬ ನೌಕರನೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಸಂಘಕ್ಕೆ ಸದಸ್ಯರಾದ ಎಲ್ಲ ನೌಕರರು ಸಂಸ್ಥೆಗೆ ಸಂಬಂಧಪಟ್ಟ ಕಾನೂನು ತೊಡಕುಗಳನ್ನು ಎದುರಿಸುತ್ತಿದ್ದರೆ ಅಥವಾ ಕೋರ್ಟ್‌ನಲ್ಲಿ ಪ್ರಕರಣಗಳಿದ್ದರೆ ಉಚಿತವಾಗಿ ವಕಾಲತ್ತು ವಹಿಸುವ ಮೂಲಕ ನೌಕರರ ಸಮಸ್ಯೆಗೆ ಸ್ಪಂದಿಸಲಾಗುವುದು. ಅಲ್ಲದೆ ಸಂಸ್ಥೆಯ ನೌಕರರ ಕಟುಂಬದವರಿಗೆ ಕೌಶಲ ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿಕೊಡುವುದು ಸಂಘದ ಧ್ಯೇಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

ಗಣಕಯಂತ್ರ ತರಬೇತಿ, ಹೊಲಿಗೆ ತರಬೇತಿ, ನೌಕರರ ಮಕ್ಕಳು SSLC ಮತ್ತು PUCಯಲ್ಲಿ ಹೆಚ್ಚು ಅಂಕ ಪಡೆವರಿಗೆ ಪ್ರೋತ್ಸಾಹಧನ, ಅಪಘಾತವಾಗಿ ಮರಣ ಹೊಂದಿದ ನೌಕರರ ಸೇವಾ ಹಿರಿತನದ ಮೇಲೆ ನೆರವು, ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ ಶೇ.50 ರಷ್ಟು ಆಸ್ಪತ್ರೆ ವೆಚ್ಚ ಭರಿಸಲಾಗುವುದು, ಸಂಘದ ಕಚೇರಿಯಲ್ಲಿ ಗ್ರಂಥಾಯಲ ಸೌಲಭ್ಯವಿದೆ. ಇದರ ಜತೆಗೆ ಇನ್ನು ಹಲವಾರು ಸೌಲಭ್ಯಗಳಿವೆ ಎಂದು ತಿಳಿಸಿದ್ದಾರೆ.

ಇನ್ನು ಸದಸ್ಯತ್ವ ಪಡೆದ ನೌಕರರಿಗೆ ಕಾನೂನು ಸಲಹೆ ನೀಡಲು ಮತ್ತು ಪ್ರಕರಣಗಳ ವಕಲತ್ತು ವಹಿಸಲು ಅನುಕೂಲ ವಾಗುವಂತೆ ಆಯಾಯ ಜಿಲ್ಲೆಗಳಲ್ಲೇ ವಕೀಲರನ್ನು ನೇಮಿಸಲಾಗುವುದು. ನಾವು ಮುಖ್ಯ ಕನೂನು ಸಲಹೆಗಾರರಾಗಿ ಸಂಘದಲ್ಲಿ ಇರಲಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಇದು ಯೂನಿಯನ್‌ ಅಲ್ಲ ಬದಲಾಗಿ ಕ್ಷೇಮಾಭಿವೃದ್ಧಿ ಸಂಘ. ಇದರಲ್ಲಿ ಹಲವಾರು ಸೌಲಭ್ಯಗಳನ್ನು ನೊಂದ ನೌಕರರಿಗೆ ನೀಡಲಾಗುವುದು. ಹೀಗಾಗಿ ಯಾರು ಗೊಂದಲಕ್ಕೆ ಒಳಗಾಗದೇ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ನೋಂದಣಿಗೆ ಖುದ್ದು ಸದಸ್ಯತ್ವ ಪಡೆದುಕೊಳ್ಳುವ ನೌಕರರೇ ಹಾಜರಾಬೇಕು. ನೋಂದಣಿ ಸಮಯ ಬೆಳಗ್ಗೆ 11 ಗಂಟೆಯಿಂದ ರಾತ್ರಿ 8ರವರೆಗೆ.  ಮೆಜೆಸ್ಟಿಕ್‌ ಪ್ಲಾಟ್‌ಫಾರಂ ನಂ. 8, 9 ಬಸ್‌ ನಂ.43 ಬಿ, 43ಸಿ, 43ಡಿ, 43ಇ. 43ಎಫ್‌, 45 ಎ, 45ಬಿ, 45ಸಿ, 45ಡಿ, 45ಇ, 45ಜಿ, 45ಎಚ್‌.  ಬಸ್‌ ಇಳಿಯುವ ಸ್ಥಳ- ಎಸ್‌ಬಿಎಂ ಕಾಲೋನಿ ಬಸ್‌ ನಿಲ್ದಾಣ.

ನೋಂದಣಿ ಸ್ಥಳ:
ಎಚ್‌.ಬಿ.ಶಿವರಾಜು ವಕೀಲರು, ಮೊ.ನಂ: 9481211019

ಎಚ್‌ಬಿಎಸ್‌ ಲಾ ಅಸೋಸಿಯೇಟ್ಸ್‌ ,
ಹಳೇ ನಂ.36ಎ/ ಹೊಸ ನಂ.42,
ಟಿಎನ್‌ಆರ್‌. ಕಾಂಪ್ಲೆಕ್ಸ್‌, (ಮೆಡ್‌ಪ್ಲಸ್‌ ಎದುರು)
1ನೇ ಮುಖ್ಯರಸ್ತೆ, ನಾಗೇಂದ್ರ ಬ್ಲಾಕ್‌,
ಎಸ್‌ಬಿಎಂ ಕಾಲೋನಿ ಬಸ್‌ ನಿಲ್ದಾಣದ ಎದುರು
ಬೆಂಗಳೂರು -560050.

Leave a Reply

error: Content is protected !!
LATEST
2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ