NEWSನಮ್ಮರಾಜ್ಯ

ಸಾರಿಗೆ ನೌಕರರೇನು ವೇತನ ಕೊಟ್ಟರೆ ಕಮಿಷನ್‌ ಕೊಡುತ್ತಾರ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ನೌಕರರಿಗೆ ಸಂಬಳ ಕೊಡಲು ಕಾಸಿಲ್ಲ ಎನ್ನುವ ಬಿಎಂಟಿಸಿ
  • 565 ಬಸ್‌ಗಳ ಖರೀದಿಗೆ ಮೀಸಲಿಟ್ಟಿರುವ ಸುಮಾರು 217 ಕೋಟಿ ರೂ.ಗಳನ್ನೇ ಬಳಸಲು ಅವಕಾಶವಿತ್ತಲ್ಲೇ?
  • ಆದರೆ, ಅದಕ್ಕೆ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಲು ಹೋಗುತ್ತಿಲ್ಲವೇಕೆ?
  • ನೌಕರರ ಎರಡು ತಿಂಗಳ ವೇತನದಲ್ಲಿ ಅರ್ಧ + ಅರ್ಧ ಬಾಕಿ ಉಳಿಸಿಕೊಂಡಿದೆ
  • ಆದರೂ ಮೀಸಲಿನ ನೆಪ್ಪ ಹೇಳಿಕೊಂಡು ಹೊಸ ಬಸ್‌ ಖರೀದಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ

ಬೆಂಗಳೂರು: ಸಾರಿಗೆ ನೌಕರರಿಗೆ ವೇತನ ಕೊಡೊಲಿಕ್ಕೂ ಪರದಾಡುತ್ತಿದ್ದೇವೆ ಎಂದು, ಇನ್ನೂ ಎರಡು ತಿಂಗಳ ಅಂದರೆ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಅರ್ಧಕರ್ಧ ವೇತನ ಉಳಿಸಿಕೊಂಡಿರುವ ಬಿಎಂಟಿಸಿ ಈಗ ಸುಮಾರು 217 ಕೋಟಿ ರೂ.ಗಳನ್ನು ವ್ಯಯಿಸಿ 565 ಹೊಸ ಬಸ್‌ ಖರೀರಿಗೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊತ್ತಿದೆ.

ಇನ್ನು ಇದನ್ನು ಗಮನಿಸಿದರೆ ಅಧಿಕಾರಿಗಳು ದ್ವಿಬಗೆ ನೀತಿ ಅನುಸರಿಸುವ ಮೂಲಕ ಭ್ರಷ್ಟಾಚಾರಕ್ಕೆಆಸ್ಪದ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇಲ್ಲಿ ನೌಕರರಿಗೆ ವೇತನ ಕೊಡಲಿಕ್ಕೆ ಹಣವೇ ಇಲ್ಲ ಎನ್ನುವ ಈ ಅಧಿಕಾರಿಗಳು ಇನ್ನೊಂದುಕಡೆ ಒಂದು ಬಸ್‌ಗೆ ಸುಮಾರು 34 ಲಕ್ಷ ರೂ.ಗಳನ್ನು ಕೊಟ್ಟು ಖರೀದಿಸಲು ಮುಂದಾಗಿದ್ದಾರೆ. ಹಾಗಾದರೆ ಈ ಬಸ್‌ಗಳನ್ನು ಖರೀದಿಸಲು ಹಣ ಎಲ್ಲಿಂದ ಬರುತ್ತಿದೆ.

ಈ ಬಸ್‌ಗಳ ಖರೀದಿಗೆ 2017-18ನೇ ಸಾಲಿನಲ್ಲೇ ಹಣವನ್ನು ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇದೆ ಹಣವನ್ನು ಇನ್ನೂ ನೌಕರರಿಗೆ ಬಾಕಿ ಉಳಿಸಿಕೊಂಡಿರುವ 2ತಿಂಗಳ ವೇತನ ಪಾವತಿಸಿ ನಂತರ ಹಂತಹಂತವಾಗಿ ಬಸ್‌ಗಳನ್ನು ಖರೀದಿಸಬಹುದಿತ್ತಿಲ್ಲವೇ ಎಂದು ಸಾರ್ವಜನಿಕರೇ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದೆಡೆ ನೌಕರರ ವೇತನಕ್ಕೆ ಆ ಹಣವನ್ನು ಕೊಟ್ಟರೆ ಕಮಿಷನ್‌ ಸಿಗುತ್ತದಾ ಈ ಭ್ರಷ್ಟರಿಗೆ ಎಂದು ಜನರು ಕಿಡಿಕಾರುತ್ತಿದ್ದಾರೆ. ಈ ಮೂಲಕ ಬಿಎಂಟಿಸಿ ಇದೀಗ ಹೊಸ ಬಸ್‌ಗಳ ಖರೀದಿಗೆ ಮುಂದಾಗಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ನಿಗಮ ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಎಸ್‌-6 ವಾಹನವನ್ನು ಖರೀದಿಸಲು ಮುಂದಾಗಿದ್ದು ಈ ವಾಹನಗಳು ಅತೀ ಶೀಘ್ರದಲ್ಲಿಯೇ ಬೆಂಮಸಾ ಸಂಸ್ಥೆಗೆ ಸೇರ್ಪಡೆಗೊಳ್ಳಲಿವೆ ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಅಶೋಕ್ ಲೈಲ್ಯಾಂಡ್ ಕಂಪನಿ ಸಿದ್ಧಪಡಿಸಿರುವ ಬಿಎಸ್‌-6 ಮಾದರಿಯ ಒಟ್ಟು 565 ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ಈಗಾಗಲೇ ಕಾರ್ಯಾದೇಶ ನೀಡಿದೆ. ಅದರಂತೆ ಮುಂದಿನ ವರ್ಷದ ಫೆಬ್ರವರಿ ಅಂತ್ಯದೊಳಗೆ ಎಲ್ಲ ಬಸ್‌ಗಳು ನಿಗಮ ಸೇರಿ ರಸ್ತೆಗಿಳಿಯಲಿವೆ ಎಂದು ಹೇಳಲಾಗುತ್ತಿದೆ.

ಹೊಸ ಬಸ್ ಗಳ ಖರೀದಿಗೆ 2017-18 ರಲ್ಲಿಯೇ ಹಣ ಮೀಸಲಿಡಲಾಗಿತ್ತು ಎಂದು ಹೇಳಲಾಗುತ್ತಿದೆಯಾದರೂ ಅಷ್ಟು ಹಣವನ್ನು ನೌಕರರ ವೇತನ, ಪಿಎಫ್, ಬಾಕಿ ಉಳಿಸಿಕೊಂಡಿರುವ ಎಲ್‌ಐಸಿಗೆ  ಕೊಡಬಹುದಿತ್ತು ಅನ್ನೋ ಅಭಿಪ್ರಾಯ ಸ್ವತಃ ನಿಗಮದ ಕೆಲ ಅಧಿಕಾರಿಗಳ ವರ್ಗದಲ್ಲೇ ಕೇಳಿ ಬರುತ್ತಿದೆ.

ತನ್ನ ಇಲಾಖೆಯಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಾರಿಗೆ ಸಚಿವ ಶ್ರೀರಾಮುಲು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಮೂಲಕ ನಷ್ಟದಲ್ಲಿರುವ ನಿಗಮವನ್ನು ಇನ್ನಷ್ಟು ನಷ್ಟಕ್ಕೆ ದೂಡುವ ಕೆಲಸ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.

ಸಾಲ ಸೋಲ ಮಾಡಿ ಖರೀದಿ ಮಾಡುತ್ತಿರುವ ಹೊಸ ಬಸ್‌ಗಳ ವಿಶೇಷತೆಗಳನ್ನು ನೋಡುವುದಾದರೆ. ಇವು ಪರಿಸರ ಸ್ನೇಹಿಯಾಗಿದ್ದು ಗಾಳಿಯ ಗುಣಮಟ್ಟವನ್ನು ಸುಧಾರಿಸಿ, ವಾತಾವರಣದ ಮಾಲಿನ್ಯವನ್ನು ಕಡಿಮೆಗೊಳಿಸುತ್ತವೆ.ಈ ವಾಹನವು ಬಿಎಸ್‌-6 ವಾಹನಗಳಿಗಿಂತ ಹೆಚ್ಚಿನ ಇಂಜಿನ್‌ ಸಾಮರ್ಥ್ಯವನ್ನು ಹೊಂದಿವೆ (197ಎಚ್‌ಪಿ). ಈ ವಾಹನಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಕೂಡ ಇದೆ.

ಸಾರಿಗೆ ನೌಕಕರು ಸರಿಯಾದ ಸಮಯಕ್ಕೆ ವೇತನ ಇಲ್ಲದೇ ಪರದಾಡುತ್ತಿದ್ದಾರೆ. ಪ್ರತಿ ತಿಂಗಳೂ ನಿಗಮದ ಆರ್ಥಿಕ ಹೊರೆ ಹೆಚ್ಚಾಗುತ್ತಲೇ ಇದೆ. ಹೀಗಿರುವ ಸಮಯದಲ್ಲಿ ಹೊಸ ಬಸ್‌ಗಳ ಖರೀದಿ ಅಗತ್ಯವಿತ್ತಾ. ನಾವು ಬಸ್‌ಗಳನ್ನು ಖರೀದಿಸಬೇಡಿ ಎಂದು ಹೇಳುತ್ತಿಲ್ಲ. ಆದರೆ, ಮೊದಲು ನೌಕರರಿಗೆ ಬಾಕಿ ಉಳಿಸಿಕೊಂಡಿರುವ ವೇತನ ಕೊಡುವತ್ತ ಆದ್ಯತೆ ನೀಡಬೇಕು.

l ಆನಂದ, ಬಿಎಂಟಿಸಿ ನೌಕರರ ಮುಖಂಡ

ಏನು 2017-18 ನೇ ಸಾಲಿನಲ್ಲಿ ಬಸ್‌ಗಳ ಖರೀದಿಗೆ ಹಣವನ್ನು ಮೀಸಲಿಟ್ಟಿದ್ದಾರೋ ಆ ಹಣವನ್ನು ಬೇರೆ ಅಂದರೆ ವೇತನ ಕೊಡಲಿಕ್ಕೆ ಅಥವಾ ಇನ್ಯಾವುದೋ ವೆಚ್ಚಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಬಸ್‌ಗಳ ಖರೀದಿಗೆ ಮೀಸಲಿಟ್ಟಿರುವ ಹಣದಲ್ಲಿ ಬಸ್‌ಗಳನ್ನು ಖರೀದಿಸದಿದ್ದರೆ ಆ ಹಣ ವಾಪಸ್‌ ಹೋಗುತ್ತದೆ. ಹೀಗಾಗಿ ಸಂಸ್ಥೆ ಬಸ್‌ಗಳ ಖರೀದಿಗೆ ಮುಂದಾಗರಿವುದರಲ್ಲಿ ತಪ್ಪೇನಿಲ್ಲ.

l ಯೋಗೇಶ್‌, ಸಾರಿಗೆ ನೌಕರರ ಕೂಡದ ಪದಾಧಿಕಾರಿ

2017-18 ನೇ ಸಾಲಿನಲ್ಲಿ ಬಸ್‌ಗಳ ಖರೀದಿಗೆ ಸರ್ಕಾರ ಅಧಿವೇಶದಲ್ಲೇ ಹಣವನ್ನು ಮೀಸಲಿಟ್ಟಿದೆ. ಆ ಹಣದಿಂದ ಈಗಾಗಲೇ 2019ರಲ್ಲಿ 850 ಬಸ್‌ಗಳನ್ನು ಖದೀರಿಸಿದ್ದೇವೆ. ಇನ್ನು 565 ಬಸ್‌ಗಳ ಖರೀದಿಸಲು ಬಾಕಿ ಇದೆ. ಅದನ್ನು 2020ರಲ್ಲೇ ಖರೀದಿಸಲು ಸಂಸ್ಥೆ ಸಿದ್ಧವಾಗಿತ್ತು. ಆದರೆ, ಕೊರೊನಾ ಸೋಂಕು ಹರಡಿದ್ದರಿಂದ ಸಾಧ್ಯವಾಗಲಿಲ್ಲ. ಈಗ ಬಸ್‌ಗಳ ಖರೀದಿಗೇ ಮೀಸಲಿರುವ ಹಣವನ್ನು ವೇತನಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಬಳಸಿಕೊಳ್ಳಲೇ ಬೇಕು ಎಂದಾದರೆ ಸಂಬಂಧಿಸಿದ ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ. ಹೀಗಾಗಿ ಆ ತೊಂದರೆ ಏಕೆ ಮುಂದಿನ ದಿನಗಳಲ್ಲಿ ಸರ್ಕಾರ ವೇತನಕ್ಕೆ ಹಣ ಬಿಡುಗಡೆ ಮಾಡುತ್ತದೆ. ಆ ವೇಳೆ ವೇತನ ಕೊಟ್ಟರಾಯಿತು. ಈಗ ಬಸ್‌ಗಳ ಅಗತ್ಯವಿರುವುದರಿಂದ ಖರೀದಿಯಲ್ಲಿ ತೊಡಗಿದ್ದೇವೆ.

l ಹೆಸರೇಳಲ್ಲಿಚ್ಚಿಸದ ಬಿಎಂಟಿಸಿ ಅಧಿಕಾರಿ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ