ಚೆನ್ನೈ: ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನ (97) ಇಂದು ಬೆಳಗ್ಗೆ ನಿಧನರಾಗಿದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರತ್ನ ಅವರು ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದು, ವಿಧಿವಶರಾಗಿರುವ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಇಲ್ಲೇ ಅಂತ್ಯಕ್ರಿಯೆ ನಡೆಸುವುದಾಗಿ ಅವರ ಮಾನಸ ಪುತ್ರ ವೆಂಕಟರಾಮಯ್ಯ ತಿಳಿಸಿದ್ದಾರೆ.
ಇಹಲೋಕ ತೆಜಿಸಿದ ಮೇಲೆ ತಮ್ಮ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲೇ ಮಾಡಿಸಬೇಕೆನ್ನುವುದು ರತ್ನ ಅವರ ಕೊನೆಯಾಸೆಯಾಗಿತ್ತಂತೆ. ಹಾಗಾಗಿ ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
‘ಹೋಗದಿರೀ ಸೋದರರೇ’, ‘ಜಲಲ ಜಲಲ ಜಲಧಾರೆ’, ‘ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು’ ಎಂಬ ಹತ್ತಾರು ಸಾರ್ವಕಾಲಿಕ ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ರತ್ನ ಅವರ ಅಗಲಿಕೆಯಿಂದ ಸಂಗೀತಲೋಕಕ್ಕೆ ಭಾರಿ ನಷ್ಟವಾದಂತ್ತಾಗಿದೆ ಎಂದು ಸಿನಿಮಾ ದಿಗ್ಗಜರು ಕಂಬನಿ ಮಿಡಿದಿದ್ದಾರೆ.