Vijayapatha – ವಿಜಯಪಥ
Friday, November 1, 2024
NEWSದೇಶ-ವಿದೇಶರಾಜಕೀಯ

ಟ್ವಿಟರ್ ಖಾತೆ ಶಾಶ್ವತ ರದ್ದು ಹಿನ್ನೆಲೆ: ಟ್ವಿಟರ್‌ಗೆ ಸಮಾನಾದ ಹೊಸ ಸಂಸ್ಥೆ ಸ್ಥಾಪನೆಗೆ ಟ್ರಂಪ್ ಚಿಂತನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ವಾಷಿಂಗ್ಟನ್: ರಾಜಕೀಯ ಶತ್ರುಗಳೊಂದಿಗೆ ಸೇರಿಕೊಂಡು ತನ್ನನ್ನು ಮೌನಗೊಳಿಸಲು ಟ್ವಿಟರ್ ಸಂಚು ಹೂಡಿದ್ದು. ಆದರೆ ನಾನು ಮುಂಧಿನ ದಿನಗಳಲ್ಲಿ ಟ್ವಿಟರ್‌ಗೆ ಸಮಾನವಾದ ತನ್ನದೇ ಸ್ವಂತ ಸಂಸ್ಥೆ ಆರಂಭಿಸುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಅಮೆರಿಕ ಕ್ಯಾಪಿಟಲ್‌ಗೆ ಟ್ರಂಪ್ ಬೆಂಬಲಿಗರು ನಡೆಸಿದ ದಾಂಧಲೆಗೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯವಿದೆ ಎಂದು ಪರಿಗಣಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿತ್ತು. ಇದರ ಬೆನ್ನಲ್ಲೇ ತಮ್ಮ ಪೋಟಸ್ (ಟ್ರಂಪ್ ಬೆಂಬಲಿಗರ ಅಧಿಕೃತ ಖಾತೆ)ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಟ್ರಂಪ್, ‘ಟ್ವಿಟರ್ ವಾಕ್ ಸ್ವಾತಂತ್ರ್ಯವನ್ನು ನಿಷೇಧಿಸಿದೆ.

ಇಂದು ರಾತ್ರಿ ಟ್ವಿಟರ್ ನೌಕರರು ಡೆಮಾಕ್ರಾಟ್ಸ್ ಮತ್ತು ರ‍್ಯಾಡಿಕಲ್ ಲೆಫ್ಟ್ ಜೆತೆ ಸಮನ್ವಯ ಮಾಡಿಕೊಂಡು ನನ್ನನ್ನು ಮೌನಗೊಳಿಸುವ ನಿಟ್ಟಿನಲ್ಲಿ ತನ್ನ ಫ್ಲ್ಯಾಟ್‌ಫಾರ್ಮ್‌ನಿಂದ ನನ್ನ ಖಾತೆಯನ್ನು ತೆಗೆದು ಹಾಕಿದೆ. ನೀವು 7.50 ಕೋಟಿ ಮಹಾನ್ ದೇಶಭಕ್ತರು ನನಗೆ ಮತ ಹಾಕಿದ್ದೀರಿ. ಭವಿಷ್ಯದಲ್ಲಿ ತಮ್ಮ ಮಾತನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ತಮ್ಮದೇ ಆದ ಫ್ಲ್ಯಾಟ್‌ಫಾರ್ಮ್ ನಿರ್ಮಿಸುತ್ತೇನೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ವೈಯಕ್ತಿಕ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದ ಬೆನ್ನಲ್ಲೇ ‘ಟೀಮ್ ಟ್ರಂಪ್’ ಅಭಿಯಾನದ ಮತ್ತು ‘ಪೊಟಸ್’ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲು ಪ್ರಾರಂಭಿಸಿದ್ದರು. ಆದರೆ ಟೀಮ್ ಟ್ರಂಪ್ ಖಾತೆಯನ್ನು ಕೂಡ ಅಮಾನತುಗೊಳಿಸಿರುವ ಟ್ವಿಟರ್, ಪೊಟಸ್ ಖಾತೆಯಿಂದಲೂ ಎಲ್ಲ ಟ್ವೀಟ್‌ಗಳನ್ನು ಅಳಿಸಿ ಹಾಕಿದೆ.

ಟ್ವಿಟ್ಟರ್‌ ಕ್ರಮ ಟ್ರಂಪ್ ಅವರಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಏಕೆಂದರೆ ಟ್ರಂಪ್ ಅಧಿಕಾರ ಅವಧಿ ಮುಗಿಯುವವರೆಗೂ ಅವರ ಖಾತೆಯನ್ನು ಫೇಸ್‌ಬುಕ್ ಈಗಾಗಲೇ ಅಮಾನತುಗೊಳಿಸಿದೆ. ಇನ್‌ಸ್ಟಾಗ್ರಾಂ ಕೂಡ ಟ್ರಂಪ್ ಅವರನ್ನು ನಿರ್ಬಂಧಿಸಿದೆ. ದಶಕದಿಂದಲೂ ಟ್ವಿಟ್ಟರ್‌ ಅನ್ನು ನಿರಂತರವಾಗಿ ಬಳಸುತ್ತಿರುವ ಟ್ರಂಪ್ ಅವರಿಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಲು ಈಗ ಬೇರೆ ಯಾವುದೇ ಮಾಧ್ಯಮ ಇಲ್ಲ.

ಹೀಗಾಗಿ ಹಲವಾರು ಇತರ ಸಾಮಾಜಿಕ ಫ್ಲ್ಯಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ದೊಡ್ಡ ಪ್ರಕಟಣೆಯನ್ನು ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮದೇ ಆದ ವೇದಿಕೆಯನ್ನು ನಿರ್ಮಿಸುವ ಸಾಧ್ಯತೆಯನ್ನು ಎದುರು ನೋಡುತ್ತಿದ್ದೇವೆ. ನಮ್ಮನ್ನು ಮೌನಿಯಾಗಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಘೋಷಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ