- ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ಮೊದಲ ಹಂತದ ಗ್ರಾಮ ಪಂಚಾಯಿತಿ ಸಮರ ಇಂದು ಬೆಳಗ್ಗೆ ಗಂಟೆಯಿಂದ ಆರಂಭವಾಗಿದ್ದು, ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿ ಮತ್ತು ಕಂಗ್ರಾಳಿಯಲ್ಲಿ ಲಘು ಲಾಠಿ ಪ್ರಹಾರವಾಗಿದೆ.
ಮತದಾನ ಕೇಂದ್ರದಲ್ಲಿ ಗುಂಪು ಗುಂಪಾಗಿ ಅಭ್ಯರ್ಥಿಗಳು ಸೇರಿದ್ದರಿಂದ ಗಲಾಟೆ ಆರಂಭವಾಗಿತ್ತು. ಅದನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಮೊದಲು ಎಚ್ಚರಿಕೆ ನೀಡಿದ್ದರು.
ಆದರೆ ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ಗುಂಪುಗುಂಪಾಗಿಯೇ ಗಲಾಟೆ ಮಾಡುತ್ತಿದ್ದರು. ಗಲಾಟೆ ಕೈ ಮೀರುವ ಸ್ಥಿತಿ ನೋಡಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
133 ತಾಲೂಕುಗಳ 2930 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಫೈಟ್ ನಡೆಯುತ್ತಿದೆ. ಇಂದು ಸಂಜೆ 6 ಗಂಟೆಗೆ ಈ ಎಲ್ಲ ಗ್ರಾಪಂಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಯಲ್ಲಿ ಭ್ರವಾಗಲಿದೆ.