ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಮಾಜಿ ಶಾಸಕ ಕೆ.ವೆಂಕಟೇಶ್ ಮಂಜೂರು ಮಾಡಿಸಿ ತಂದಿದ್ದ ಅನುದಾನದಿಂದಲೇ ತಾಲೂಕಿನಲ್ಲಿ ಇಂದಿಗೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ಎಂದು ಕಾಂಗ್ರೆಸ್ ಕಾರ್ಯಕರ್ತರು ತಾಲೂಕಿನ ಜನತೆಗೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ ಇವರ ಮಾತಿಗೆ ಜೆಡಿಎಸ್ ಕಾರ್ಯಕರ್ತರು ಮರುಳಾಗಬಾರದು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲೂಕಿನ ಜನತೆಯ ಮೂಲಭೂತ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನನ್ನ ಶಕ್ತಿಮೀರಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇದನ್ನು ಸಹಿಸದ ಮಾಜಿ ಶಾಸಕ ಕೆ.ವೆಂಕಟೇಶ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅನಗತ್ಯವಾಗ ಗೊಂದಲಗಳನ್ನು ಸೃಷ್ಟಿಸುತ್ತ ನನ್ನ ಮೇಲೆ ಆರೋಪ ಮಾಡಿಕೊಂಡು ಸುತ್ತುತ್ತಿದ್ದಾರೆ.
ಅನುಭವವಿರುವ ರಾಜಕಾರಣಿ ಮಾಜಿ ಶಾಸಕ ವೆಂಕಟೇಶ್ ಅವರಿಗೆ ವಯಸ್ಸಾಗಿದೆ. ಅರಳೋ ಮರುಳೋ ಎನ್ನುವ ಈ ವಯಸ್ಸಿನಲ್ಲಿ ಕಾಮಾಲೆ ರೋಗದವರಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಒಲ್ಲದ ಮನಸ್ಸಿನಲ್ಲಿ ಟೀಕೆ ಮುಡುತ್ತಾ ತಮ್ಮ ಕಾರ್ಯಕರ್ತರಿಂದ ಚಪ್ಪಾಳೆ ಗೀಟಿಸಿಕೊಳ್ಳುತ್ತಿದ್ದಾರೆ.
ನಾನು ಶಾಸಕನಾಗಿ 3 ವರ್ಷ ಕಳೆಯುತ್ತಿವೆ ಹೀಗಿದ್ದರೂ ಅವರು ತಂದ ಅನುದಾನ ಇಲ್ಲಿಯ ವರೆಗೆ ಉಳಿಯಲು ಸಾಧ್ಯವೇ, ಹೀಗೆ ಹಸಿ ಸುಳ್ಳುಗಳನ್ನು ಹೇಳಿ ನಮ್ಮ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಇದರಿಂದ ನಮ್ಮ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ ಎಂದರು.
ಕಾಡಂಚಿನ ಗ್ರಾಮವಾದ ಕೋಗಿಲವಾಡಿಗೆ ಈಗಾಗಲೇ 66 ಲಕ್ಷ ಅನುದಾನ ನೀಡಿ ಶಾಲಾ ಕಟ್ಟಡ ಹಾಗೂ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಅಲ್ಲದೆ, ಕಾಡಂಚಿನ ಹಬಟೂರು, ಲಕ್ಷ್ಮಿಪುರ, ಚೌತಿ, ಮುತ್ತೂರು ಸೇರಿದಂತೆ ಇತರೆ ಗ್ರಾಮಗಳ ಅಭಿವೃದ್ಧಿಗೆ 30 ಕೋಟಿ ರೂ. ಕೊಟ್ಟಿದ್ದೇನೆ. ಯಾವುದೇ ಗ್ರಾಮಕ್ಕೂ 25 ಲಕ್ಷ ರೂ. ಕಡಿಮೆ ಅನುದಾನ ನೀಡಿಲ್ಲ, ಮುಂದಿನ ದಿನಗಳಲ್ಲಿ ಎಲ್ಲಾ ಕಾಡಂಚಿನ ಗ್ರಾಮಗಳಿಗೂ ಹಂತಹಂತವಾಗಿ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿದರು.
ವಾಗ್ವಾದ:
ಕಾರ್ಯಕ್ರಮದಲ್ಲಿ ಶಾಸಕ ಮಹದೇವ್ ಮಾತನಾಡುತ್ತಾ, ತಾಲೂಕಿನಲ್ಲಿ ನಡೆಯುತ್ತಿರುವ ಅನುದಾನ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ವಿರೋಧ ಪಕ್ಷದವರು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುತ್ತಿದ್ದಾಗ ಕಾಂಗ್ರೆಸ್ ಮುಖಂಡ ಗ್ರಾಪಂ ಮಾಜಿ ಸದಸ್ಯ ಕೋಗಿಲವಾಡಿ ರಾಮಚಂದ್ರ ಮಧ್ಯ ಪ್ರವೇಶಿಸಿ ಮಾಜಿ ಶಾಸಕ ಕೆ.ವೆಂಕಟೇಶ್ ಾವರು ಗ್ರಾಮಕ್ಕೆ 1.20 ಕೋಟಿ ರೂ. ಅನುದಾನ ನೀಡಿದ್ದರು.
ಕೆಲಸಗಳು ನಡೆಯುತ್ತಿರುವಾಗ ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿ ಸಂಪೂರ್ಣ ಹಣವನ್ನೆಲ್ಲ ಬಿಡುಗಡೆ ಮಾಡಿಸಿಕೊಂಡರು ಇದಕ್ಕೆ ನಾವು ವಿರೋಧಿಸಿದಾಗ ಆ ಗುತ್ತಿಗೆದಾರ ನಿಮ್ಮ ಹೆಸರು ಹೇಳೀದರು ಎಂದಾಗ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರಿಗೆ ಬಸ್ ವ್ಯವಸ್ಥೆ ಕುರಿತು ಶಾಸಕರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಜಯಕುಮಾರ್. ಗ್ರಾಪಂ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ರವಿಚಂದ್ರ, ಗೌರಮ್ಮ, ರವಿ, ಲಕ್ಷ್ಮಣಪಟೇಲ್, ಶೇಖರ್, ಸ್ವಾಮಿ, ಮಾಜಿ ಸದಸ್ಯ ಗೋವಿಂದೇಗೌಡ. ಮುಖಂಡರಾದ ಕೆ.ಆರ್.ಮಹೇಶ್, ರಾಮಚಂದ್ರ, ಅಣ್ಣೇಗೌಡ, ಪಾಪೇಗೌಡ, ಎಸ್.ಆರ್.ಎಸ್.ಗೌಡ, ಚೌತಿ ಶಂಕರ್, ಕಾಂತರಾಜ್, ಮುತ್ತೇಗೌಡ, ಸೇರಿದಂತೆ ಮತ್ತಿತರರು ಇದ್ದರು.
Yaradru tarai ottinalli abiruddi kelsa agbeku