NEWSನಮ್ಮಜಿಲ್ಲೆರಾಜಕೀಯ

ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಿ: ಕಾನ್ಯ ಶಿವಮೂರ್ತಿ

ವೀರಶೈವ ಮಹಾಸಭಾದಿಂದ ಗ್ರಾಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ನಾಮ ನಿರ್ದೇಶಿತರಿಗೆ ಸನ್ಮಾನ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಸಂಘಟನೆಗಳು ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದಾದ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ದಿ ಕಾಣಲು ಸಾಧ್ಯ ಎಂದು ಅಖಿಲ ಭಾರತರ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ವೀರಶೈವ ಮಹಾಸಭಾ ವತಿಯಿಂದ ನಡೆದ ನೂತನ ಗ್ರಾ.ಪಂ.ಸದಸ್ಯರು, ವಿವಿಧ ಸಂಘ ಸಂಸ್ಥೆಗಳಿಗೆ ಆಯ್ಕೆ ಮತ್ತು ನಾಮ ನಿರ್ದೇಶಿತರಾದವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದ ಜನಪತ್ರಿನಿಧಿಗಳು ಸಮಾಜದಲ್ಲಿ ಇರುವ ಎಲ್ಲಾ ವರ್ಗದ ಜನರಿಗೆ ಸೇವೆ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಹೆಸರು ತರಬೇಕು. ಗ್ರಾಮೀಣ ಪ್ರದೇಶದಲ್ಲಿ ಇರುವ ಕಡುಬಡವರನ್ನು ಗುರುತಿಸಿ ಪಟ್ಟಿ ನೀಡಿದರೆ ವೀರಶೈವ ಮಹಾಸಭಾ ವತಿಯಿಂದ ಮನೆ ನಿರ್ಮಾಣ ಮತ್ತು ಶೈಕ್ಷಣಿಕ ವಿದ್ಯಾಭ್ಯಾಸ ಮುಂತಾದ ಕಾರ್ಯಗಳಿಗೆ ಸಹಕಾರ ನೀಡಲಾಗುವುದು.

ಸಮಾಜದ ಯಾವುದೆ ಕಾರ್ಯಕ್ರಮಗಳು ನಡೆದರು ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ನಿರ್ವಹಸಿದಾಗ ಮಾತ್ರ ಯಶಸ್ವಿಯಾಗಲು ಮತ್ತು ಸಮಾಜದ ಬೆಳೆವಣಿಗೆಯಾಗಲು ಸಾಧ್ಯವಾಗಲಿದೆ. ಮತ್ತು ಪ್ರತಿ ತಾಲೂಕಿನ ವೀರಶೈವ ಮಹಾಸಭಾದ ಒಂದು ಪ್ರತ್ಯೇಕ ಭವನ ನಿರ್ಮಾಣವಾಗಬೇಕು ಈ ನಿಟ್ಟಿನಲ್ಲಿ ತಾಲೂಕು ಘಟಕ ಕಾರ್ಯೋನ್ಮುಖವಾಗಬೇಕು ಎಂದರು.

ಅಭಾವಿಸಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಾರ್ಬಳ್ಳಿ ಮೂರ್ತಿ ಮಾತನಾಡಿ ಸಂಘಟನೆಗಳು ಹೆಸರಿಗಷ್ಟೆ ಸೀಮಿತವಾಗದೆ ಸಮಾಜ ಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಾಗ ಮಾತ್ರ ಇತರೆ ವರ್ಗದವರಿಗೆ ಮಾದರಿಯಾಗಲು ಸಾಧ್ಯವಾಗಲಿದೆ. ಸಮಾಜ ನಮಗೇನು ನೀಡಿದೆ ಎಂಬುದರ ಬದಲಾಗಿ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರು ಚಿಂತಿಸಿ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷ ಕೆ.ಪಿ.ಚಂದ್ರಶೇಖರಯ್ಯ ಮಾತನಾಡಿ ಮಠಾಧೀಶರು ಒಂದು ವರ್ಗ ಜಾತಿಗಳಿಗೆ ಸೀಮಿತವಾಗದೆ ಸಮಾಜದ ಹಿಂದುಳಿದವರ ಅಭಿವೃದ್ದಿಗೆ ಶ್ರಮಿಸಬೇಕು ಆಗ ಮಾತ್ರ ಮಠಮಂದಿರಗಳ ಬಗ್ಗೆ ಜನರಲ್ಲಿ ಗೌರವ ಭಾವನೆ ಮೂಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಧರಣೀಶ್ ಅನಿಸಿಕೆ ಹಂಚಿಕೊಂಡರು, ಗ್ರಾಮ ಪಂಚಾಯಿತಿ ನೂತನ ಸದಸ್ಯರು, ಅಧ್ಯಕ್ಷರು, ಟಿಎಪಿಸಿಎಂಎಸ್ ನಿರ್ದೇಶಕರು, ನಿವೃತ್ತ ನೌಕರರು, ಸರಕಾರಿ ನಾಮನಿರ್ದೇಶಿತ ಸದಸ್ಯರು, ಸನ್ಮಾನಿಸಲಾಯಿತು.

ರಾಜ್ಯ ಯುವ ಘಟಕದ ನಿರ್ದೇಶಕ ವಿರೂಪಾಕ್ಷ, ಒಳಚಂರಂಡಿ ಮತ್ತು ನೀರು ಸರಬರಾಜು ನಿರ್ದೇಶಕ ಆರ್.ಟಿ.ಸತೀಶ್, ಮಾಜಿ ಅಧ್ಯಕ್ಷ ಮಂಜುನಾಥಸ್ವಾಮಿ, ಕಾರ್ಯದರ್ಶಿ ಬಿ.ಮುಖೇಶ್ ಕುಮಾರ್, ವಿದ್ಯಾಶಂಕರ್ ಮಾತನಾಡಿದರು.

ಬೆಕ್ಕರೆ ನಂಜುಂಡಸ್ವಾಮಿ, ಪುರಸಭಾ ಸದಸ್ಯ ನಿರಂಜನ್, ಸುದರ್ಶನ್, ಪಿಎಲ್‌ಡಿಬ್ಯಾಂಕ್ ನಿರ್ದೇಶಕ ಆನಂದ್, ಕೊಪ್ಪ ಗ್ರಾ.ಪಂ.ಅಧ್ಯಕ್ಷ ರೇಣುಕಾಸ್ವಾಮಿ, ರಾವಂದೂರುಗ್ರಾ.ಪಂ.ಅಧ್ಯಕ್ಷ ಆರ್.ಎಸ್.ವಿಜಯಕುಮಾರ್, ಸಂಘದ ಜಿಲ್ಲಾ ನಿರ್ದೇಶಕರಾದ ಕುಮಾರ್, ಮಲ್ಲಿಕಾರ್ಜುನ್, ಯುವಘಟಕದ ತಾ.ಅಧ್ಯಕ್ಷ ಮಂಜು, ಉಪಾಧ್ಯಕ್ಷ ವಿನಯ್, ಗಿರೀಶ್, ಸೇರಿದಂತೆ ಮತ್ತಿತರರು ಇದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ