NEWSನಮ್ಮಜಿಲ್ಲೆನಮ್ಮರಾಜ್ಯಶಿಕ್ಷಣ-

ಬಸಪ್ಪರಿಗೆ ಗೌರವ ಡಾಕ್ಟರೇಟ್ ಪ್ರದಾನ : ವೈವಿಧ್ಯಮಯ ಜಾನಪದ ಕಲೆಗಳ ಅನಾವರಣ

ತೆಲುಗು ಮಾತೃಭಾಷೆಯ ಮುಸ್ಲಿಂ ಯುವಕನಿಗೆ ಜಾನಪದ ಸಾಹಿತ್ಯದಲ್ಲಿ ರ‍್ಯಾಂಕ್ ಜತೆಗೆ ಚಿನ್ನದ ಪದಕ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ಏಷ್ಯಾದಲ್ಲೇ ಜಾನಪದ ಅಧ್ಯಯನಕ್ಕಾಗಿ ಸ್ಥಾಪನೆಗೊಂಡ ಮೊಟ್ಟಮೊದಲ ಹಾಗೂ ಏಕೈಕ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಭಾಜನವಾಗಿರುವ ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವಕ್ಕೆ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಸಮ ಕುಲಾಧಿಪತಿಗಳಾದ ರಾಜ್ಯಪಾಲರು ಹಾಗೂ ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವರ ಅನುಪಸ್ಥಿತಿಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗೊಟಗೋಡಿಯಲ್ಲಿರುವ ವಿಶ್ವವಿದ್ಯಾಲಯದ ಹಿರೇತಿಟ್ಟು ಬಯಲು ರಂಗಮಂದಿರದ ಆವರಣದಲ್ಲಿ ಇಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವ ಸಮಾರಂಭ ಜರುಗಿತು.

ಘಟಿಕೋತ್ಸವ ಸಮಾರಂಭ ಆರಂಭವಾಗುವ ಮುನ್ನ ವಿವಿಯ ಮುಖ್ಯ ಆಡಳಿತ ಕಚೇರಿಯಿಂದ ಬಯಲು ರಂಗಮಂದಿರದವರೆಗೆ ಕುಲಪತಿಗಳು, ಮುಖ್ಯ ಅತಿಥಿಗಳನ್ನು ಜಾನಪದ ವಾಧ್ಯಗಳು, ಕಲಾ ಜಾಥಾದೊಂದಿಗೆ ಅದ್ದೂರಿಯಾಗಿ ಶಿಸ್ತುಬದ್ಧವಾಗಿ ವೇದಿಕೆಗೆ ಕರೆತರಲಾಯಿತು.

ಬೆಳಗ್ಗೆ 11 ಗಂಟೆಗೆ ಸರಿಯಾಗಿ ಆರಂಭಗೊಂಡ ಘಟಿಕೋತ್ಸವವನ್ನು ಜಾನಪದ ವಿವಿಯ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ್ ಚಾಲನೆ ನೀಡಿದರು. ಅಂತರಾಷ್ಟ್ರೀಯ ವೀರಗಾಸೆ ಕಲಾವಿದರು ಕರ್ನಾಟಕ ಜಾನಪದ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಚಿಕ್ಕಮಗಳೂರ ಜಿಲ್ಲೆಯ ತರಿಕೆರೆ ತಾಲೂಕಿನ ಮಾಳೇನಹಳ್ಳಿಯ ಗ್ರಾಮದ ಎಂ.ಆರ್.ಬಸಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ, ವಿವಿಧ ವಿಷಯದ 789 ಜನರಿಗೆ ಪಿ.ಎಚ್.ಡಿ., ಎಂ.ಎ. ಸೇರಿದಂತೆ ವಿವಿಧ ಪದವಿ ಹಾಗೂ ಡಿಪ್ಲೋಮಾ ಪದವಿ ಘೋಷಿಸಿದರು.

ಉದಯವಾಣಿ ದಿನಪತ್ರಿಕೆಯ ಧಾರವಾಡ ಜಿಲ್ಲಾ ವರದಿಗಾರರಾದ ಬಸವರಾಜ ಹೊಂಗಲ್ ಸೇರಿದಂತೆ 19 ಜನರಿಗೆ ಪಿ.ಎಚ್. ಡಿ.ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ 2018-19ನೇ ಸಾಲಿನ ಜಾನಪದ ಸಾಹಿತ್ಯದ ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ವಿಜೇತರಾದ ಹುಸೈನಸಾಬ ಪಿ. ಹಾಗೂ 2017-18ನೇ ಸಾಲಿನ ಜಾನಪದ ಸಾಹಿತ್ಯದ ಸ್ನಾತಕೋತ್ತರ ಪದವಿಯಲ್ಲಿ ರೂಪಾ ಮೂಡೇರ ಅವರಿಗೆ ಚಿನ್ನದ ಪದಕ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

ಉಳಿದಂತೆ ಜಾನಪದಶಾಸ್ತ್ರ ವಿಭಾಗ ಪ್ರಕಾಶ ವಿ. ಲಮಾಣಿ, ಜಾನಪದ ಕಲೆ ವಿಭಾಗ ಪ್ರವೀಣ.ವಿ.ಕರೆಪ್ಪನ್ನವರ, ಸಾಲಿಯನ್ ಸಂತೋಷ,ಜಾನಪದ ಪ್ರವಾಸೋದ್ಯಮ ವಿಭಾಗ ಬಸವರಾಜ್, ಲಕ್ಷ್ಮಣ ಆರ್ ಬಂಡಿವಡ್ಡರ,ಜಾನಪದ ಮಾಧ್ಯಮ ಹಾಗೂ ಸಂವಹನ ವಿಭಾಗ ನಾರಾಯಣ ಕರೆವ್ವನವರ, ದೇವರಾಜ ಎಚ್ ಕೋಡಿಹಳ್ಳಿ,ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗ ಬಸವರಾಜ್ ಛಲಗೇರಿ, ಪವೀತ್ರ.ಜಿ.ಬಡಿಗೇರ, ಬಸಮ್ಮ ಬಿ ಗೂಳನ್ನವರ, ಜಾನಪದ ಸಾಹಿತ್ಯ ವಿಭಾಗದಲ್ಲಿ ಜಾನಪದಶಾಸ್ತ್ರ ಲಕ್ಷ್ಮಿ ಬಾರ್ಕಿ, ಎಮ್.ಬಿ.ಎ ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ ಹರಳು ಲಿಂಗರಾಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದರೊಂದಿಗೆ 39 ಜನ ಪಿಜಿ ಡಿಪ್ಲೋಮಾ, 476 ಡಿಪ್ಲೋಮಾ, 196 ವಿವಿಧ ಸರ್ಟಿಫಿಕೇಟ್ ಜಾನಪದ ಕೋರ್ಸ್‍ಗಳನ್ನು ಪೂರೈಸಿದವರಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

ಗಮನಸೆಳೆದ ವಿದ್ಯಾರ್ಥಿಗಳು
ಸಾಂಪ್ರದಾಯಿಕ ಉಡಿಗೆ ತೊಟ್ಟು ವಿದ್ಯಾರ್ಥಿಗಳು ಗಮನಸೆಳೆದರು. ವಿದ್ಯಾರ್ಥಿನಿಯರು ಬಂಗಾರದ ಅಂಚಿನ ಬಿಳಿಸಿರೆ ರವಿಕೆತೊಟ್ಟರೆ ವಿದ್ಯಾರ್ಥಿಗಳು ಸಾಂಪ್ರದಾಯಿಕವಾದ ಬಿಳಿ ಕಚ್ಚೆಪಂಚೆ, ಜುಬ್ಬಾ ಧರಿಸಿ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು. ಕುಲಪತಿಗಳು ಸೇರಿದಂತೆ ಸಮಾರಂಭದಲ್ಲಿ ಭಾಗವಹಿಸಿದ ವಿವಿಧ ನಿಖಾಯದ ಡೀನ್‍ಗಳು ಬಿಳಿ ಬಣ್ಣದ ಕೋರ್ಟು, ಬಿಳಿ ಕಚ್ಚೆಪಂಚೆ, ತಲೆಗೆ ಬಣ್ಣದ ರುಮಾಲು ಸುತ್ತಿಕೊಂಡು ಘಟಿಕೋತ್ಸವದಲ್ಲಿ ಭಾಗವಹಿಸಿ ಸಾಂಪ್ರದಾಯಕ ಮೆರಗು ತಂದರು. ಅಲಂಕೃತ ಮಣ್ಣಿನ ಮಡಿಕೆ, ಚಾಮರಗಳು, ವೇದಿಕೆಗೆ ರಂಗು ತಂದರೆ ವೇದಿಕೆ ಮೇಲೆ ಮಣ್ಣಿನ ಮಡಿಕೆ ಹಾಗೂ ಲೋಟದಲ್ಲಿ ಗಣ್ಯರಿಗೆ ಕುಡಿಯಲು ನೀರು ತುಂಬಿಸಿಟ್ಟು ಗಮನ ಸೆಳೆಯಿತು.

ಹಾರ್ಡ್ ವರ್ಕ್‍ಗಿಂತಲೂ ಸ್ಮಾಟ್‍ವರ್ಕ್ ಮುಖ್ಯ
ನನ್ನದೊಂದು ಚಿಕ್ಕ ಹಳ್ಳಿ, ಬಡ ಕುಟುಂಬದಿಂದ ಬಂದವಳು. ಹಾರ್ಡ್ ವರ್ಕ್‍ಗಿಂತಲೂ ಸ್ಮಾಟ್‍ವರ್ಕ್ ಸಾಧನೆಗೆ ಮುಖ್ಯ. ಜಾನಪದ ಸಾಹಿತ್ಯ ಸಂಶೋಧನೆಯಲ್ಲಿ ಮುಂದುವರೆವುದು ನನ್ನ ಅಭಿಲಾಸೆ ಎಂದು ಜಾನಪದ ಸಾಹಿತ್ಯುದಲ್ಲಿ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ವಿಜೇತ ವಿದ್ಯಾರ್ಥಿ ರೂಪಾ ಮುಡೆರ ಅವರ ಅನಿಸಿಕೆ.

ಕನ್ನಡದಲ್ಲಿಯೇ ಸಾಧನೆ
20 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ನಾವು ಗುಳೆ ಬಂದವರು. ಕನ್ನಡದಲ್ಲಿಯೇ ಸಾಧನೆ ಮಾಡಬೇಕು ಎಂಬ ಕನಸಿಗೆ ಸಿಕ್ಕ ಗೌರವ. ತಾಂತ್ರಿಕತೆ ಮತ್ತು ವೈಜ್ಞಾನಿಕತೆಗೆ ಮೊರೆ ಹೋಗದೆ ಪೂರ್ವಿಕರ ಆಚಾರ-ವಿಚಾರಗಳನ್ನು ತಿಳಿದು ಮುಂದಿನ ಪೀಳಿಗೆಗೆ ಮುಂದುವರೆಸಬೇಕು ಎಂಬುದು ಜಾನಪದ ಸಾಹಿತ್ಯದಲ್ಲಿ ರ್ಯಾಂಕ್‍ನೊಂದಿಗೆ ಚಿನ್ನದ ಪದಕಗಳನ್ನು ಗೆದ್ದ ಎಂ.ಎ. ವಿದ್ಯಾರ್ಥಿ ಹುಸೈನ್ ಸಾಬ್ ಅಭಿಮತ.

ಕುಲಸಚಿವ ಪ್ರೊ.ಕೆಎನ್ ಗಂಗಾನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್. ಮಂಜುನಾಥ ಸಾಲಿ, ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಪುರಸ್ಕøತ ವೀರಗಾಸೆ ಕಲಾವಿದ ಎಂ.ಆರ್.ಬಸಪ್ಪ ಸೇರಿದಂತೆ ವಿವಿಧ ನಿಖಾಯಗಳ ಡೀನರು-ಮುಖ್ಯಸ್ಥರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ವಿವಿಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಡಿದ್ದರು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ