NEWSನಮ್ಮಜಿಲ್ಲೆನಮ್ಮರಾಜ್ಯಸಂಸ್ಕೃತಿ

ಸಾರಿಗೆ ನೌಕರರ ವಾಟ್ಸ್‌ ಆಪ್‌ ಅಳಲು: ಕಾರ್ಮಿಕರ ಕಣ್ಣೀರಿನ ಹನಿಗಳಲ್ಲಿ ನೀವೆಲ್ಲ ಕೈ ತೊಳಿತಿದ್ದೀರಾ?

ಸರ್ಕಾರ, ಸಾರಿಗೆ ಸಚಿವರು, ಸಂಸ್ಥೆಯ ವ್ಯವಸ್ಥಾಪಕರಿಗೆ ನೌಕರರ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಂಸ್ಥೆಯ ಬಸ್ ಗಳಲ್ಲಿ ಎಲ್ರಿಗೂ ರಿಯಾಯಿತಿ ಬಸ್ ಪಾಸ್ ಕೊಟ್ಕೊಂಡು ಲಾಸ್ ಅಂತ ತೋರಿಸ್ತಾ ಹೋಗ್ತಾಯಿರಿ, ಸಂಸ್ಥೆಯಲ್ಲಿ ಕಷ್ಟ ಪಟ್ಟು ದುಡಿಯೋ ಕಾರ್ಮಿಕರ ಕಣ್ಣೀರಿನ ಹನಿಗಳಲ್ಲಿ ನೀವೆಲ್ಲ ಕೈ ತೊಳಿತಿದ್ದೀರಾ ಎಂದು ನೌಕರರ ವಾಟ್ಸ್‌ ಆಪ್‌ ಪೇಜ್‌ನಲ್ಲಿ ನೌಕರರ ತಮಗಾಗುತ್ತಿರುವ ಅನ್ಯಾಯವನ್ನು ತೋಡಿಕೊಳ್ಳುತ್ತಿದ್ದಾರೆ.

ಇನ್ನು ನಮಗೆ ಈಗ ಸಮಯ ಸಂದರ್ಭ ಬಂದಿದೆ. ಸಂಸ್ಥೆಯ ಸಿಂಬ್ಬದಿಗಳು ನಾವು ಏನೂ ಅಂತ ಸ್ವಲ್ಪದಿನದಲ್ಲಿ ನಮ್ಮ ನೌಕರರ ಕೂಟದ ಅಧ್ಯಕ್ಷರ ಮುಂದಾಳತ್ವದಲ್ಲಿ ಹಾಗೂ ನಮ್ಮ ನೌಕರರ ಸಂಘದ ಗೌರವಧ್ಯಕ್ಷರು ಆದ ಕೋಡಿಹಳ್ಳಿ ಚಂದ್ರಶೇಖರ ಸರ್ ಅವರ ನೇತೃತ್ವದಲ್ಲಿ ಸರಕಾರಕ್ಕೆ ಬಿಸಿ ತಟ್ಟಿಸೋತಣ ಸ್ನೇಹಿತರೆ.

ನೀವು ನಮ್ಮನ್ನು ಇಷ್ಟೊಂದು ಕಾಯಿಸುತ್ತಿರೋದು ನೋಡಿದ್ರೆ ನಮ್ಮ ನೌಕರರ ತಾಳ್ಮೆನಾ ಪರೀಕ್ಷೆ ಮಾಡ್ತಿದೀರಾ? ಈ ಸಾರಿ ಮುಸ್ಕರದಲ್ಲಿ ಪ್ರತಿಯೊಬ್ಬರ ನೌಕರರ ಕುಟುಂಬಗಳು ಬೀದಿಗೆ ಬಂದು ಹೋರಾಟಕ್ಕೆ ತಯಾರಾಗಿ. ನಮ್ಮ ಬೇಡಿಕೆಗಳು ಈಡೇರು ವವರೆಗೂ ಮುಸ್ಕರ ನಡಿಸೋಣ ಸ್ನೇಹಿತರೆ ಎನ್ನುತ್ತಿದ್ದಾರೆ.

ಸಾರಿಗೆ ನೌಕರರು ಸರ್ಕಾರದ ಮುಂದೆ ಏನಾದ್ರೂ ಬೇಡಿಕೆ ಅಥವಾ ಮುಷ್ಕರ ಮಾಡಿದಾಗ ಯಾವಾಗಲೂ ಒಂದೇ ಮಾತು ಸರ್ಕಾರ ಪದೇಪದೇ ಹೇಳುತ್ತೆ. ಸಾರಿಗೆ ಸಂಸ್ಥೆ ನಷ್ಟದಲ್ಲಿರುವ ಕಾರಣ ಸಂಬಳ ಕೊಡೋಕು ಹಾಗುತ್ತಿಲ್ಲ ಎಂದು.

ಹಾಗಾದರೆ ಸಾರಿಗೆ ನೌಕರರ ಕಡೆಯಿಂದ ಸರ್ಕಾರಕ್ಕೆ ಒಂದು ಪ್ರಶ್ನೆ ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ಎಷ್ಟು ಲಾಭ ಇದೆ. ಸರ್ಕಾರಿ ಆಸ್ಪತ್ರೆಗಳಿಂದ ಹಾಗೂ ಸರ್ಕಾರಿ ವೈದ್ಯರಿಂದ ಎಷ್ಟು ಲಾಭ ಇದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವರಿಂದ ಎಷ್ಟು ಲಾಭ ಬರುತ್ತಿದೆ.

ವಿಧಾನಸೌಧದಲ್ಲಿ ಕೆಲಸ ಮಾಡುವ ಸರ್ಕಾರಿ ಸಿಬ್ಬಂದಿಯಿಂದ ಎಷ್ಟು ಲಾಭ ಗಳಿಸುತ್ತಿದ್ದೀರಿ ಇವರ‍್ಯಾರಿಗೂ ಇಲ್ಲದ ಶೋಷಣೆ, ಕನಿಷ್ಠ ವೇತನ, ಹೆಚ್ಚು ದೈಹಿಕ ಮತ್ತು ಮಾನಸಿಕ ಶ್ರಮ ಹಾಕುತ್ತಿರುವ ಸಾರಿಗೆ ನೌಕರರಿಂದ ಆದಾಯ ಬಯಸುವುದು ಯಾವ ನ್ಯಾಯ.

ಇದು ಸಾರ್ವಜನಿಕರ ಸೇವೆಗೆ ಇರುವುದು. ಲಾಭದ ಪ್ರಶ್ನೆ ಬರೋದಿಲ್ಲ ಎಂದು ನೀವೇ ವೇದಿಕೆ ಮೇಲೆ ಭಾಷಣ ಬಿಗಿಯುತ್ತೀರಿ. ಆದರೆ ನಮಗೆ ವೇತನ ಕೊಡುವ ವೇಳೆ ಲಾಭ ನಷ್ಟ ಲೆಕ್ಕ ಹಾಕುತ್ತೀರಿ ಇದು ಯಾವ ನ್ಯಾಯ ಸ್ವಾಮಿ ಎಂದು ವಾಟ್ಸ್‌ ಆಪ್‌ ಮೂಲಕ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

ಇನ್ನಾದರೂ ಸಾರಿಗೆ ನೌಕರರನ್ನು ಇತರ ನೌಕರರಂತೆ ನಡೆಸಿಕೊಳ್ಳಬೇಕು ಎಂಬ ಕೂಗು ಈಗ ಸಾರ್ವಜನಿಕ ವಲಯದಲ್ಲೂ ಕೇಳಿ ಬರುತ್ತಿದೆ. ಆದರೆ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರು ಮಾತ್ರ ನೌಕರರ ಬಗ್ಗೆ ಯಾವುದೇ ಕಾಳಜಿ ತೋರಿದಂತೆ ಕಾಣುತ್ತಿಲ್ಲ. ಹೀಗೆ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎನಿಸುತ್ತಿದೆ. ಹೀಗಾಗಿ ಈಗಲಾದರೂ ಸರ್ಕಾರ ಮತ್ತು ಸಚಿವರು ಎಚ್ಚೆತ್ತುಕೊಳ್ಳಬೇಕಿದೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ