CrimeNEWSನಮ್ಮಜಿಲ್ಲೆ

ಬಸ್‌ನಿಂದ ಪ್ರಯಾಣಿಕ ಬಿದ್ದು ಸಾವು: ಡ್ರೈವರ್‌, ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲು

ವಿಜಯಪಥ ಸಮಗ್ರ ಸುದ್ದಿ

ಕಡಬ: ಬಸ್ಸಿನಿಂದ  ಆಯತಪ್ಪಿ ಕೆಳಗೆ ಬಿದ್ದ ಕಡಬದ ಕೃಷಿಕರೊಬ್ಬರು ಮೃತಪಟ್ಟ ಘಟನೆಯಲ್ಲಿ ಬಸ್‌ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ನಿರ್ವಾಹಕ ಆನಂದ ನಾಯ್ಕ್ ಎಂಬವರು ಬಸ್‌ನ ಹಿಂಬದಿಯ ಬಾಗಿಲು ಹಾಕಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಹಾಗೂ ಬಸ್ ಚಾಲಕ ಯು.ಆರ್‌.ಶಶಿಧರ ಎಂಬವರು ಡೋರ್‌ ಹಾಕಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳದೇ ಬಸ್‌ ಓಡಿಸಿದ್ದರ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಬಲ್ಯ ಗ್ರಾಮದ ಕಡಬ ನಿವಾಸಿ ಕೆ.ಪ್ರಶಾಂತ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಕಡಬ ಪೇಟೆಯ ಪೋಸ್ಟ್ ಆಫೀಸ್ ಬಳಿ ಸುಬ್ರಹ್ಮಣ್ಯ ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ KA19 F 3212 ಕೆಎಸ್‌ಆರ್‌ಟಿಸಿ ಬಸ್ ನಿಂದ ಇಬ್ಬರು ಬಿದ್ದಿದ್ದರು ಅವರಲ್ಲಿ ಕಳಾರ ಸಮೀಪದ ಕುದ್ಕೋಳಿ ನಿವಾಸಿ ಅಚ್ಚುತ್ತ ಗೌಡ (63) ಎಂಬುವರು ಮೃತಪಟ್ಟಿದ್ದರು. ಇನ್ನೊರ್ವ ಪ್ರಯಾಣಿಕ ಬಲ್ಯ ನಿವಾಸಿ ರುಕ್ಮಯ್ಯ ಯಾನೆ ಚಂದ್ರ ಎಂಬುವರಿಗೆ ತರಚು ಗಾಯವಾಗಿತ್ತು.

Leave a Reply

error: Content is protected !!
LATEST
KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ BMTC: ವೇತನಕ್ಕೆ ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ ನಮ್ಮಲ್ಲಿ ಒಳಜಗಳ ಗಿಳಜಗಳ ಯಾವುದೂ ಇಲ್ಲ : ಸಿಎಂ ಸಿದ್ದರಾಮಯ್ಯ ಲೋಕಸಮರ 2024: 7ನೇ ಹಂತದ ಚುನಾವಣೆ - ವಾರಣಾಸಿಯಿಂದ 3ನೇ ಬಾರಿಗೆ ಪರೀಕ್ಷೆಗಿಳಿದ ಪ್ರಧಾನಿ ಮೋದಿ KSRTC: ಕರ್ತವ್ಯದ ವೇಳೆಯೇ ಬ್ರೈನ್‌ಸ್ಟ್ರೋಕ್‌ - ಸಾರಿಗೆ ನೌಕರನಿಗೆ ಬೇಕಿದೆ ಆರ್ಥಿಕ ನೆರವು ನಾಲ್ಕನೇ ಹಂತದ ಲೋಕಸಭಾ ಚುನಾವಣೆ: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 62.84ರಷ್ಟು ಮತದಾನ