NEWSನಮ್ಮರಾಜ್ಯರಾಜಕೀಯ

ಚುನಾವಣಾ ಪೂರ್ವ ತಯಾರಿ: ರಾಜ್ಯಕ್ಕೆ  ಭೇಟಿಕೊಟ್ಟ ಆಯೋಗದ  ಮೂರು ತಂಡಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಯಲ್ಲಿ  ಪೂರ್ವ ತಯಾರಿಗಳ ಪರಿಶೀಲನೆಗಾಗಿ ಭಾರತ ಚುನಾವಣಾ ಆಯೋಗದ ಮೂರು ತಂಡಗಳು ಭೇಟಿ ನೀಡಿ ಸಭೆಗಳನ್ನು ನಡೆಸಿವೆ.

ಮೇ ನಲ್ಲಿ ಬರುವ ಸಾರ್ವತ್ರಿಕ ಚುನಾವಣೆ  ಕುರಿತಂತೆ ಜಿಲ್ಲಾಮಟ್ಟದಲ್ಲಿ ನಡೆಯುತ್ತಿರುವ ಪೂರ್ವತ ಯಾರಿಗಳ ಪರಿಶೀಲನೆಗಾಗಿ  ರಾಜ್ಯದ  5 ಕ್ಕೂ ಹೆಚ್ಚು ಜಿಲ್ಲೆಗಳಿಗೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಹಿರಿಯ ಅಧಿಕಾರಿಗಳ ತಂಡ  ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕವು ಮಾಹಿತಿ ಕಲೆಹಾಕಿದೆ.

ಫೆಬ್ರವರಿ 7 ರಂದು ರಾಜ್ಯಕ್ಕೆ ಆಗಮಿಸಿದ  ಮೂವರು ಹಿರಿಯ ಅಧಿಕಾರಿಗಳ ತಂಡಗಳಲ್ಲಿ ಒಂದು ತಂಡ ರಾಜ್ಯದ ಯಾದಗಿರಿ ಮತ್ತು ಕಲಬುರಗಿ ವಿಭಾಗ, ಮತ್ತೊಂದು ಚಾಮರಾಜನಗರ ಮತ್ತು ಮೈಸೂರು, ಮೂರನೇ ತಂಡ ಸ್ವೀಪ್‌ ನಿರ್ದೇಶಕರ ನೇತೃತ್ವದಲ್ಲಿ ಬೆಂಗಳೂರು ವಲಯ ಮತ್ತು ಜಿಲ್ಲಾ ನೂಡಲ್‌ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ ನಡೆಸಿದರು.

ಈ ಚುನಾವಣಾ ಆಯೋಗದ  ಮೂರು ತಂಡಗಳ  ಮೂರು ದಿನಗಳ ರಾಜ್ಯ ಭೇಟಿಯಲ್ಲಿ ಮುಖ್ಯವಾಗಿ ನಡೆಸಿದ ಸಭೆಗಳಲ್ಲಿ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತದಾನ ನಡೆದಿರುವ ಮತಗಟ್ಟೆಗಳನ್ನು ಗುರುತಿಸುವುದು, ಕಡಿಮೆ ಮತದಾನಕ್ಕೆ ಕಾರಣಗಳನ್ನು ಕಂಡು ಹಿಡಿದು ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು, ಮತದಾನದ ಜಾಗೃತಿ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಬಗೆ ಹೇಗೆ ಎಂದು ಚರ್ಚಿಸಿವೆ.

ಇನ್ನು ಮತಗಟ್ಟೆಗಳ  ಗುರುತಿಸಿ ಮತ್ತು ಅವುಗಳಿಗೆ ಅಗತ್ಯ ಮೂಲ ಸೌಕರ್ಯಗಳ ಅಭಿವೃದ್ಧಿಪಡಿಸುವುದು, ಅಗತ್ಯ  ಅಧಿಕಾರಿ/ ಸಿಬ್ಬಂದಿ ನಿಯೋಜಿಸುವುದು, ಹೊಸ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಹೆಚ್ಚಿನ ಯುವಮತದಾರರನ್ನು ಸೆಳೆಯುವುದು ಸೇರಿದಂತೆ ಮತದಾರರ ಪಟ್ಟಿ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲು ಚರ್ಚಿಸಲಾಯಿತು.

ಭಾರತ ಚುನಾವಣಾ ಆಯೋಗದ ಉಪ ಮುಖ್ಯ ಆಯುಕ್ತ ಅಜಯ್‌ ಬಾಡು ಅವರ ನೇತೃತ್ವದ ಈ ತಂಡದ ಜತೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಮತ್ತು ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್‌ ಅವರು ಭಾಗವಹಿಸಿದ್ದರು.

ಈ ತಂಡ ಯಾದಗಿರಿ ಜಿಲ್ಲೆಗೆ ಬೇಟಿ ನೀಡಿ ಇವಿಎಮ್‌ ಮತ್ತು ವಿವಿಪ್ಯಾಟ್ಟ್‌‌ಗಳ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದೆ. ಮತದಾರರ ಜಾಗೃತಿಗಾಗಿ ಸ್ವೀಪ್‌ ಮೂಲಕ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಗಳಿಗೂ ಚಾಲನೆ ನೀಡಿ, ಕಲಬುರಗಿ ವಲಯದ ಜಿಲ್ಲಾಧಿಕಾರಿಗಳೊಂದಿಗೆ ಚುನಾವಣಾ ಪೂರ್ವ ತಯಾರಿ ಕುರಿತಂತೆ ಸಭೆ ನಡೆಸಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶಕರಾದ ಶ್ರೀಮತಿ ಶುಭಾ ಸಕ್ಸೇನಾ ಹಾಗೂ ಕಾರ್ಯದರ್ಶಿ ಬಿ.ಸಿ ಪಾತ್ರ ಅವರ ನೇತೃತ್ವದ ತಂಡ ಚಾಮರಾಜನಗರ ಜಿಲ್ಲೆಗೆ ಬೇಟಿ ನೀಡಿ ಇವಿಎಮ್‌ ಮತ್ತು ವಿವಿಪ್ಯಾಟ್ಟ್‌‌ಗಳ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದೆ.

ಮತದಾರರ ಜಾಗೃತಿಗಾಗಿ ಸ್ವೀಪ್‌ ಮೂಲಕ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಮೈಸೂರು ವಲಯದ ಜಿಲ್ಲಾಧಿಕಾರಿಗಳೊಂದಿಗೆ ಚುನಾವಣಾ ಪೂರ್ವ ತಯಾರಿ ಕುರಿತಂತೆ ಸಭೆ ನಡೆಸಿದೆ.  ಈ ತಂಡದ ಜತೆಗೆ ರಾಜ್ಯ ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್‌ ಕುಮಾರ್  ಭಾಗವಹಿಸಿದ್ದರು.‌

ಭಾರತ ಚುನಾವಣಾ ಆಯೋಗದ ಸ್ವೀಪ್‌ ನಿರ್ದೇಶಕರಾದ ಸಂತೋಷ್‌ ಅಜ್ಮೇರ ಅವರ ನೇತೃತ್ವದ ತಂಡ ಮತದಾರರ ಜಾಗೃತಿಯ ರಾಜ್ಯ ಸ್ವೀಪ್‌ ಕಾರ್ಯಕ್ರಮಗಳ ಪೂರ್ವತಯಾರಿ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್‌ ನೂಡಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಈ ಸಂದರ್ಭದಲ್ಲಿ ರಾಜ್ಯ ಸ್ವೀಪ್‌ ನೂಡಲ್‌ ಅಧಿಕಾರಿ ಪಿ.ಎಸ್‌ ವಸ್ತ್ರದ್‌  ಉಪಸ್ಥಿತರಿದ್ದರು.

ಮೊದಲ ದಿನ ಮತಗಟ್ಟೆಗಳು ಸೇರಿದಂತೆ ವಿವಿಧ ರೀತಿಯ ಮೊದಲ ಹಂತದ ಪೂರ್ವತಯಾರಿ ಕಾರ್ಯಗಳನ್ನು ಖುದ್ದಾಗಿ ವೀಕ್ಷಿಸಿದ ತಂಡಗಳು ಎರಡನೆ ದಿನ ಆಯಾ ವಲಯ ಮಟ್ಟದ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದವು.

ಫೆಬ್ರವರಿ 9 ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಿದ ಈ ಮೂರು ತಂಡಗಳ ಹಿರಿಯ ಅಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ನೇತೃತ್ವದಲ್ಲಿ ಬೆಳಗಾವಿ ವಲಯದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿತು.

ಮಧ್ಯಾಹ್ನದ ನಂತರ ವಿಧಾನಸೌಧದಲ್ಲಿ ಬೆಂಗಳೂರು ವಲಯದ ಜಿಲ್ಲಾದಿಕಾರಿಗೊಂದಿಗೆ ಸಭೆ ನಡೆಸಿ ನಂತರ ನವದೆಹಲಿಗೆ ಪ್ರಯಾಣ ಬೆಳಸಿತು.

 

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ