NEWSನಮ್ಮಜಿಲ್ಲೆನಮ್ಮರಾಜ್ಯರಾಜಕೀಯ

ಜನರ ಆಶಯ ಒಳಗೊಂಡ ಪ್ರಣಾಳಿಕೆ ಸಿದ್ಧಪಡಿಸುತ್ತದೆ ಎಎಪಿ: ಮಾಧ್ಯಮ ಕೇಂದ್ರ ಉದ್ಘಾಟಿಸಿದ ಪೃಥ್ವಿ ರೆಡ್ಡಿ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿಯು ಜನರ ಆಶಯಗಳನ್ನು ಒಳಗೊಂಡ ಪ್ರಣಾಳಿಕೆ ಸಿದ್ಧಪಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.

ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಪಕ್ಷದ ಮಾಧ್ಯಮ ಕೇಂದ್ರವನ್ನು ಎಎಪಿಯ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ ಹಾಗೂ ಪೃಥ್ವಿ ರೆಡ್ಡಿ ಮಂಗಳವಾರ ಉದ್ಘಾಟಿಸಿದ ಬಳಿ ಮಾಡಿದರು.

ಎಲ್ಲ ಪಕ್ಷಗಳು ಚುನಾವಣೆಗೂ ಮುನ್ನ ಪ್ರಣಾಳಿಕೆ ಬಿಡುಗಡೆ ಮಾಡಿ ಭರವಸೆಗಳನ್ನು ನೀಡುತ್ತವೆ. ಆ ಪ್ರಣಾಳಿಕೆಗಳನ್ನು ಕೆಲವೇ ಕೆಲವು ಜನರು ಎಸಿ ರೂಮಿನಲ್ಲಿ ಕುಳಿತು ಸಿದ್ಧಪಡಿಸಿರುತ್ತಾರೆ. ಜನರಿಗೆ ನಿಜವಾಗಿಯೂ ಏನು ಬೇಕೋ ಅದು ಆ ಪ್ರಣಾಳಿಕೆಗಳಲ್ಲಿ ಇರುವುದಿಲ್ಲ ಎಂದರು.

ಇನ್ನು ಆಮ್‌ ಆದ್ಮಿ ಪಾರ್ಟಿಯು ಪ್ರಣಾಳಿಕೆ ಸಿದ್ಧಪಡಿಸುವ ವಿಧಾನವನ್ನೇ ಬದಲಾಯಿಸಿದೆ. ನೀಡಿದ ಭರವಸೆಗಳಿಗೆ ನಾಯಕರು ಹೇಗೆ ಜವಾಬ್ದಾರರಾಗಿರುತ್ತಾರೆ ಎಂಬುದನ್ನು ಕೂಡ ಎಎಪಿ ಹೇಳಲಿದೆ. ದೆಹಲಿಯಲ್ಲಿ ಜನರ ಆಶಯಗಳು ಪ್ರತಿಬಿಂಬಿಸುವಂತಹ 70 ಅಂಶಗಳ ಪ್ರಣಾಳಿಕ ಸಿದ್ಧಪಡಿಸಲು ಆಮ್‌ ಆದ್ಮಿ ಪಾರ್ಟಿಯು ಜನರೊಂದಿಗೆ ಸಂವಾದಗಳನ್ನು ಏರ್ಪಡಿಸಿತ್ತು ಎಂದು ವಿವರಿಸಿದರು.

ಜನರೊಂದಿಗೆ ಸಂವಾದಗಳನ್ನು ಏರ್ಪಡಿಸುವ ಈ ವಿಧಾನವನ್ನು ಪಂಜಾಬ್‌, ಗೋವಾ ಹಾಗೂ ಇತರೆ ರಾಜ್ಯಗಳಲ್ಲೂ ಅನುಸರಿಸಲಾಗಿತ್ತು. ದೆಹಲಿಯಲ್ಲಿ ಅಧಿಕಾರ ಪಡೆದು 5 ವರ್ಷಗಳ ಪೂರ್ಣಗೊಂಡಾಗ ಪ್ರಣಾಳಿಕೆಗಳಲ್ಲಿ ನೀಡಿದ್ದ ಭರವಸೆಗಳು ಹಾಗೂ ಅವುಗಳನ್ನು ಜಾರಿಗೆ ತಂದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು ಎಂದು ತಿಳಿಸಿದರು.

ಕೆಲವು ಭರವಸೆಗಳು ಪೂರ್ಣ ಪ್ರಮಾಣದಲ್ಲಿ ಈಡೇರದಿರುವುದಕ್ಕೆ ನಿಖರ ಕಾರಣವನ್ನೂ ತಿಳಿಸಲಾಯಿತು. ದೇಶದ ಇತಿಹಾಸದಲ್ಲೇ ಮೊದಲ ಬಾರಿ, ಭರವಸೆ ಈಡೇರಿಸಿದ್ದರೆ ಮಾತ್ರ ಮತ ನೀಡಿ ಎಂದು ಅರವಿಂದ್‌ ಕೇಜ್ರಿವಾಲ್‌ ಮತಯಾಚನೆ ಮಾಡಿದರು ಎಂದು ಪೃಥ್ವಿ ರೆಡ್ಡಿ ಹೇಳಿದರು.

ಬೆಂಗಳೂರಿನ ಬಿಬಿಎಂಪಿ ಚುನಾವಣೆಗೂ ಕೂಡ ಆಮ್‌ ಆದ್ಮಿ ಪಾರ್ಟಿಯು ಜನರ ಆಶಯಗಳನ್ನು ಒಳಗೊಂಡ ಪ್ರಣಾಳಿಕೆ ಸಿದ್ಧಪಡಿಸುತ್ತದೆ. ಪ್ರತಿವಾರ್ಡ್‌ನಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಅನೇಕ ರಸ್ತೆಗಳಲ್ಲಿ ಸಂವಾದಗಳನ್ನು ನಡೆಸಲಿದ್ದಾರೆ ಎಂದು ವಿವರಿಸಿದರು.

ಇನ್ನು ಪ್ರತಿ ವಾರ್ಡ್‌ಗೆ ಬೇಕಾಗಿರುವ ಯೋಜನೆಗಳನ್ನು ಪತ್ತೆ ಹಚ್ಚಿ 243 ವಾರ್ಡ್‌ಗಳಿಗೆ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ. ಜನರಿಂದ ಪದೇಪದೇ ಕೇಳಿ ಬಂದ ಬೇಡಿಕೆಗಳನ್ನು ಒಳ್ಗೊಂಡ ʻನಮ್ಮ ಊರು ಪ್ಲಾನ್‌ ಫಾರ್‌ ಯಾಕ್ಷನ್‌ʼ ಪ್ರಣಾಳಿಕೆಯನ್ನು ಕೂಡ ಎಎಪಿ ಸಿದ್ಧಪಡಿಸಲಿದೆ. ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ಪಕ್ಷದ್ದಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ʻನಮ್ಮ ಊರು ಗ್ಯಾರೆಂಟೀಸ್‌ʼ ಪಟ್ಟಿಯನ್ನು ಕೂಡ ಎಎಪಿ ಬಿಡುಗಡೆ ಮಾಡಲಿದೆ ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...