ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಬೀದರ್ ಶಾಖೆಯ ಕಚೇರಿಯನ್ನು ಇದೇ ಸೆ.28ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಖೆಯ ನೂತನ ಅಧ್ಯಕ್ಷ ಬಸವರಾಜ ಚಾಮರೆಡ್ಡಿ ತಿಳಿಸಿದ್ದಾರೆ.
ಸೆ.28ರ ಸಂಜೆ 5 ಗಂಟೆಗೆ ಬೀದರ್ ಶಾಖೆಯ ಕಚೇರಿ ಉದ್ಘಾಟನೆ ನೆರವೇರಲಿದ್ದು, ಉದ್ಘಾಟನಾ ಸಮಾರಂಭಕ್ಕೆ, ಸ್ಥಳೀಯ ಜನಪ್ರತಿನಿಧಿಗಳು, ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಹಾಗೂ ರಾಜ್ಯದ ಮುಖಂಡರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕೂಟದ ಶಾಖೆ ಉದ್ಘಾಟನೆ ಹಿನ್ನೆಲೆಯಲ್ಲಿ ಸೋಮವಾರ ಕೆಕೆಆರ್ಟಿಸಿ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ಅವರಿಗೆ ವಿಭಾಗ ಮಟ್ಟದ ಪದಾಧಿಕಾರಿಗಳ ಪಟ್ಟಿ ಸಲ್ಲಿಸಲಾಯಿತು ಮತ್ತು ಕುಂದುಕೊರತೆ ಸಭೆಗೆ ಆಹ್ವಾನಿಸುವಂತೆ ಮನವಿಸಲಾಯಿತು.
ಈ ವೇಳೆ ಬೀದರ್ ವಿಭಾಗ ಅಧ್ಯಕ್ಷ ಬಸವರಾಜ ಚಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶಿವಯೋಗಿ, ಕಾರ್ಯಾಧ್ಯಕ್ಷ ಅನೀಲ ಪಾಟೀಲ್, ಖಜಾಂಚಿ ಶರಣಪ್ಪಾ ಶೆಂಬೆಳ್ಳಿ, ಶಿವಾನಂದ ಸೀತಾಳಗೇರಾ, ಲಕ್ಷ್ಮಣ ಇದ್ದರು.