NEWSನಮ್ಮರಾಜ್ಯ

ಶೇ.45ರಷ್ಟು ವೇತನ ಹೆಚ್ಚಳ ಮಾಡಿಸಿ ಎಲ್ಲಿ ಇಟ್ಟುಕೊಳ್ಳುತ್ತೀರಿ ಎಂದವನ ಹೆಡೆಮುರಿಕಟ್ಟಿದ ಸಾರಿಗೆ ನೌಕರರು

ಓಟ್‌ ಮಾಡುವ ಮೂಲಕ ನಿನ್ನ ಸ್ಥಾನ ಇದೇ ಎಂದು ತೋರಿಸಿ ವಕೀಲರಿಗೆ ಜೈ ಎಂದರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸಮಸ್ತ ನೌಕರರ ಪರವಾಗಿ ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಹೈ ಕೋರ್ಟ್‌ನಲ್ಲಿ ಅರ್ಜಿ ಹಾಕಿರುವ ವಕೀಲರ ನಡೆಯನ್ನು ಟೀಕಿಸಿರುವ ವ್ಯಕ್ತಿಯ ವಿರುದ್ಧ ನೌಕರರು A ಎಂದು ಕಮೆಂಟ್‌ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಹೈ ಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು.

ವಕೀಲರು ನಮ್ಮನ್ನು ಬೆಂಬಲಿಸಲು ನೀವು ಸಿದ್ಧರಿದ್ದರೆ A ಎಂದು ಮತ್ತು ಟೀಕಿಸಿರುವ ವ್ಯಕ್ತಿಯನ್ನು ಬೆಂಬಲಿಸುತ್ತೇವೆ ಎಂದಾದರೆ B ಎಂದು ಕಮೆಂಟ್‌ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.

ವಕೀಲರ ಮನವಿಗೆ 6 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, ಅದರಲ್ಲಿ ಕೇವಲ 57ಮಂದಿಯಷ್ಟೇ B ಎಂದು ಕಮೆಂಟ್‌ ಮಾಡಿದ್ದರೆ ಉಳಿದ 5943 ಮಂದಿ A ಎಂದು ಕಮೆಂಟ್‌ ಮಾಡುವ ಮೂಲಕ ನೌಕರರ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಗೆ ಮುಖಭಂಗವಾಗುವಂತೆ ಮಾಡಿದ್ದಾರೆ.

 ಎಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ವ್ಯಂಗ್ಯ: ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ಅವರು ಏನು ಕಳೆದ ಏಳೂವರೆ ವರ್ಷದಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡದಿರುವ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, (ಅದು ನಾಳೆ ಮಾ.21ರಂದು ವಿಚಾರಣೆಗೆ ಬರಲಿದೆ) ಆ ಅರ್ಜಿಯಲ್ಲಿ ನೌಕರರ ಮೂಲ ವೇತನದ ಜತೆಗೆ ಬಿಡಿಎ ಮರ್ಜ್‌ ಮಾಡಿ ಶೇ.45ರಷ್ಟು ವೇತನ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ವಕೀಲ ಶಿವರಾಜು ಅವರು ಕೋರ್ಟ್‌ನಲ್ಲಿ ಅರ್ಜಿಸಲ್ಲಿಸಿರುವುದಕ್ಕೆ ಬೆಂಬಲ ನೀಡುವ ಬದಲಿಗೆ ನೌಕರರ ಪರ ಎಂದು ಹೇಳಿಕೊಳ್ಳುವ ಸಂಘಟನೆಯೊಂದರ ಹಿರಿಯ ಮುಖಂಡ, ಶೇ.45ರಷ್ಟು ವೇತನ ಹೆಚ್ಚಳ ಮಾಡಿದರೆ ಅದನ್ನು ವಕೀಲರು ಎಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದ.

ಇದರಿಂದ ಅಸಮಾಧಾನಗೊಂಡ ವಕೀಲ ಶಿವರಾಜು ಅವರು ಇದನ್ನು ಸಾಮಾಜಿಕ ತಾಲತಾಣದಲ್ಲಿ ಪ್ರಶ್ನಿಸುವ ಮೂಲಕ, ನೌಕರರಿಗೆ ಈ ವಿಷಯದ ಬಗ್ಗೆ ಸಮಗ್ರವಾಗಿ ತಿಳಿಸಿ, ಆ ನಿಮ್ಮ ವ್ಯಕ್ತಿ ನೀಡಿರುವ ಹೇಳಿಕೆಯನ್ನು ಬೆಂಬಲಿಸುತ್ತೀರಾ ಎಂದು ಕೇಳಿದ್ದರು. ಅದನ್ನು ಶೇ.97ರಷ್ಟು ನೌಕರರು ಒಪ್ಪುವುದಿಲ್ಲ ಎಂದು A ಕಮೆಂಟ್‌ ಮಾಡುವ ಮೂಲಕ ಹೇಳಿಕೆ ನೀಡಿದ್ದಾರೆ.

 ಕೀಳಾಗಿ ನೋಡುತ್ತಾ ದರ್ಪ ಮೆರೆಯುತ್ತಿರುವ : ಇನ್ನು ಕಳೆದ 40 ವರ್ಷದಿಂದಲೂ ನೌಕರರು ಮತ್ತು ಸಂಸ್ಥೆಯ ಅಧಿಕಾರಿಗಳನ್ನು ಕೀಳಾಗಿ ನೋಡುತ್ತಾ ದರ್ಪ ಮೆರೆಯುತ್ತಿರುವ ಅಲ್ಲದೆ, ಸರ್ಕಾರ ವೇತನ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಉತ್ತರನ ಪೌರುಷ ತೋರಿಸಿ ನಂತರ ಸುಮ್ಮನಾಗುವ ಮೂಲಕ ನೌಕರರಿಗೆ ಸರಿಯಾದ ವೇತನ ಇತರ ಸವಲತ್ತುಗಳನ್ನು ಕೊಡಿಸುವಲ್ಲಿ ಸೋತಿರುವ ಈತ ನೌಕರರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ವ್ಯಕ್ತಿ ಎಂದು ಕಿಡಿಕಾರಿದ್ದಾರೆ.

ಅಲ್ಲದೆ, 1/1/2020ರಿಂದ ಜಾರಿಗೆ ಬರುವಂತೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿಸಿರುವುದರಿಂದ ಯಾರಿಗೆ ಲಾಭವಿದೆ. ನೌಕರರಿಗೆ ಇದರಿಂದ ಅನುಕೂಲ ವಾಗುತ್ತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಕೀಲರು, ನಿಮ್ಮ ಬಣ್ಣವನ್ನೆಲ್ಲ ಕಾನೂನಾತ್ಮಕವಾಗಿಯೇ ಬಯಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ವೇತನ ಹೆಚ್ಚಳ ಸಂಬಂಧ ಸಭೆ ಕರೆದೇ ಇಲ್ಲ:  ಇನ್ನು ನೌಕರರನ್ನಾಗಲಿ ಇಲ್ಲ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನಾಗಲಿ ವೇತನ ಹೆಚ್ಚಳ ಸಂಬಂಧ ಸಭೆ ಕರೆದು ಅವರ ಅನಿಸಿಕೆ, ಅಭಿಪ್ರಾಯಗಳನ್ನು ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಸರ್ಕಾರ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ತೀರ್ಮಾನಿಸಿ ಕೊನೆಗೆ ಶೇ.15ರಷ್ಟು ಮಾಡಿಸಿಕೊಂಡು ಬಂದ ಇಂಥ ಅವಿವೇಕಿಯಿಂದ ನಾವು ಉದ್ದಾರ ಅದಂತೆಯೇ ಎಂದು ನೌಕರರು ಮತ್ತು ಅಧಿಕಾರಿಗಳು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ನಡುವೆ ಇದೇ ಮಾ.21ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ನೌಕರರಾರು ಈತನ ಮಾತಿಗೆ ಬೆಲೆಕೊಡುವುದಿಲ್ಲ ಎಂದು ತಿಳಿದ ಕೂಡಲೇ ಮಾಜಿ ಐಪಿಎಸ್‌ ಅಧಿಕಾರಿಯ ಮೂಲಕ ಸಾರಿಗೆ ಎಂಡಿ ಅವರನ್ನು ತರಾತುರಿಯಲ್ಲಿ ಭೇಟಿ ಮಾಡಿ ನೀವು ಕೊಟ್ಟಿದ್ದೆ ಸಾಕು ಎಂದು ಕೈ ಮುಗಿದು ಹೊರಬಂದ ಇವನು ನೌಕರರ ಪಾಲಿನ ಉದ್ಧಾರಕನೆ ಎಂದು ಕಿಡಿಕಾರಿದ್ದಾರೆ.

ಇಷ್ಟಾದರೂ ಮಾನ ಮರ್ಯಾದೆ ಇಲ್ಲದವನಂತೆ ನಾವು ಏನು ಹೇಳದಿದ್ದರು ನಮ್ಮ ವೇತನ ಹೆಚ್ಚಳ ಮಾಡಿಸುವುದಕ್ಕೆ ಮುಂದಾಗಿ, ಅತಂತ್ರ ಮಾಡಿರುವ ಇವನನ್ನು ನಾವು ಕ್ಷೆಮಿಸಲು ಸಾಧ್ಯವೇ ಇಲ್ಲ ಎಂದು ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ ನೌಕರರು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ