NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಪರ ಇರುವುದು ಕೇವಲ ಎರಡೇ ಸಂಘಟನೆಗಳು- ಒಂದಂತು ಆರಂಭದಲ್ಲೇ ಎಡವಿ ಬಿದ್ದಿದ್ದು ಎಚ್ಚೆತ್ತುಕೊಳ್ಳಬೇಕಿದೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ನೌಕರರಿಗೋಸ್ಕರವೇ ಇರುವ ಸಂಘಟನೆಗಳು ಪ್ರಮುಖವಾಗಿ ಇತ್ತೀಚೆಗೆ ಹುಟ್ಟಿಕೊಂಡಿರುವ ಎರಡು ಸಂಘಟನೆಗಳು ಮಾತ್ರ. ಅಂದರೆ ನೌಕರರೇ ನೌಕರರಿಗೋಸ್ಕರ ಹುಟ್ಟು ಹಾಕಿರುವ ಸಂಘಟನೆಗಳು.

ಈ ಸಂಘಟನೆಗಳ ಧ್ಯೇಯ ಒಂದೆ ನೌಕರರ ಸಮಸ್ಯೆಗೆ ಪರಿಹಾರ ಸಿಗಬೇಕು. ಇತರ ಸರ್ಕಾರಿ, ನಿಗಮಗಳಲ್ಲಿರುವ ಇರುವಂತೆ ಸಾರಿಗೆ ನೌಕರರು ಮತ್ತು ಅಧಿಕಾರಿಗಳಿಗೂ ಸರಿ ಸಮಾನ ವೇತನ ಸಿಗಬೇಕು. ಜತೆಗೆ, ನೌಕರರು ಅನುಭವಿಸುತ್ತಿರುವ ನಿತ್ಯದ ಕಿರುಕುಳ ತಪ್ಪಬೇಕು ಎಂಬುವುದು.

ಈ ನಿಟ್ಟಿನಲ್ಲಿ ಹುಟ್ಟಿಕೊಂಡಿರುವ ಸಂಘಟನೆಗಳನ್ನು ಹೊರತುಪಡಿಸಿ ಉಳಿದ ಸಂಘಟನೆಗಳು ಸಾರಿಗೆ ನೌಕರರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರೂ ನಂಬಲು ಅಸಾಧ್ಯ. ಇದಕ್ಕೆ ಕಾರಣವೂ ಇದೆ. ಈ ಸಂಘಟನೆಗಳು ಇಡೀ ರಾಜ್ಯದ ಅಷ್ಟೇ ಅಲ್ಲ ದೇಶದ ಯಾವುದೇ ಮೂಲೆಯಲ್ಲಿ ಸಾರಿಗೆ ನೌಕರರನ್ನು ಹೊರತು ಪಡಿಸಿ ಅಂದರೆ ಸರ್ಕಾರಿ ಅಥವಾ ನಿಗಮಮಂಡಳಿಗಳಲ್ಲಿ, ಅಂದರೆ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ಸಂಸ್ಥೆಗಳ ನೌಕರರ ಪರವಾಗಿ ಇವುಗಳ ಹೋರಾಟ ಶೂನ್ಯ.

ಅಂದರೆ, ಇವುಗಳನ್ನು ರಾಜ್ಯ ಸರ್ಕಾರಿ ನೌಕರರಾಗಲಿ ಅಥವಾ ಇತರ ನಿಗಮಗಳ ನೌಕರರಾಗಲಿ ಇವುಗಳ ನೇತೃತ್ವದಲ್ಲಿ ವೇತನ ಹೆಚ್ಚಳ ಸಂಬಂಧವೋ ಅಥವಾ ಇತರ ಸಮಸ್ಯೆಗಳ ನೀಗಿಸುವುದಕ್ಕೋ ಇವುಗಳನ್ನು ಅವಲಂಬಿಸಿಲ್ಲ. ಕಾರಣ ಸರ್ಕಾರಿ ನೌಕರರು ಮತ್ತು ನಿಗಮ ಮಂಡಳಿಗಳ ನೌಕರರು ತಮ್ಮದೇ ಆದ ಸಂಘಟನೆಯನ್ನು ಹೊಂದಿರುವುದು.

ಆ ಎಲ್ಲ ನೌಕರರು ತಮ್ಮ ತಮ್ಮ ಸಂಘಟನೆಗಳ ಮೂಲಕವೇ ತಮ್ಮ ವೇತನ ಹೆಚ್ಚಳ ಇರಬಹುದು ಅಥವಾ ನೌಕರರ ಸಮಸ್ಯೆ ಇರಬಹುದು ಅವುಗಳನ್ನು ಈ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತಾರೆ. ಅಂದರೆ ಸರ್ಕಾರಿ ನೌಕರರಿಗೆ ಏನೆ ತೊಂದರೆ ಆದರೂ ತಮ್ಮದೇ ಆದ ಸಂಘಟನೆಗಳು ಬೆನ್ನೆಲುಬಾಗಿ ನಿಲ್ಲಲಿವೆ.

ಇದಿಷ್ಟೇ ಅಲ್ಲ ಇತರ ನಿಗಮ ಮಂಡಳಿಗಳಲ್ಲಿ ಎಲ್ಲ ಅಧಿಕಾರಿಗಳು ನೌಕರರು ಸೇರಿ ಅವರಲ್ಲೇ ಒಂದೊಂದು ಸಂಘಟನೆಗಳನ್ನು ಮಾಡಿಕೊಂಡಿದ್ದಾರೆ. ಆ ಸಂಘನೆಗಳ ಮೂಲಕವೇ ತಮ್ಮ ಬೇಡಿಕೆಗಳನ್ನು ಸರ್ಕಾರದ ಅಥವಾ ನಿಗಮ ಮಂಡಳಿಗಳ ಆಡಳಿತದ ಮುಂದೆ ಮಂಡಿಸುತ್ತವೆ. ಅದನ್ನು ಪರಿಶೀಲಿಸಿ ಆ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತದೆ.

ಆದರೆ, ಸಾರಿಗೆ ನಿಗಮಗಳಲ್ಲಿ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಕಾರಣ ಇಲ್ಲಿ ಇರುವ ಸಂಘಟನೆಗಳು ಅಧಿಕೃತವಾಗಿ ನೌಕರರೇ ಸೇರಿ ಮಾಡಿಕೊಂಡಿರುವ ಸಂಘಟನೆಗಳಲ್ಲ. ಹೀಗಾಗಿ ಈ ಹಿಂದಿನಿಂದಲೂ ನೌಕರರಿಗೆ ಸಮಸ್ಯೆ ಇದ್ದೇಇದೆ. ಅಲ್ಲದೆ ನಾಲ್ಕು ವರ್ಷಕ್ಕೊಮ್ಮೆ ಬೀದಿಗಿಳಿದು ನೌಕರಿ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಇನ್ನು ಇದನ್ನು ಮನಗಂಡ ಸಾರಿಗೆ ಸಂಸ್ಥೆಗಳಲ್ಲೇ ಕಾಯಂ ನೌಕರರಾಗಿರುವ ಮಂದಿ ಕಳೆದ 2 ವರ್ಷದ ಹಿಂದೆ ಮತ್ತು ಪ್ರಸ್ತುತ ಸಂಘಟನೆಗಳನ್ನು ಹುಟ್ಟುಹಾಕಿದ್ದಾರೆ. ಈ ಸಂಘಟನೆಗಳು ಮುಂದಿನ ದಿನಗಳಲ್ಲಿ ನೌಕರರ ಹಿತಕಾಯುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ, ಇವುಗಳು ನೌಕರರ ಪರವಾದ ನಿಲುವುಗಳನ್ನು ನೌಕರರ ಸಮ್ಮುಖದಲ್ಲಿ ಚರ್ಚಿಸಿ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಯಾವುದೋ ಸಂಘಟನೆಯ ಪ್ರಮುಖರ ಅಧ್ಯಕ್ಷತೆಯಲ್ಲಿ ತಮ್ಮ ನಿಲುವನ್ನು ತೆಗೆದುಕೊಂಡರೆ ನೌಕರರ ಸಮಸ್ಯೆ ಬಗೆಹರಿಸಲು ಸಾಧ್ಯವೆ? ಇನ್ನು ಇಲ್ಲಿಯವರೆಗೆ ಏನಾಗಿದೆಯೋ ಅದು ಈಗ ಬೇಡದ ವಿಷಯ. ಇನ್ನು ಮುಂದೆ ಏನು ಮಾಡಬೇಕು. ನೌಕರರಿಗೆ ಒಳ್ಳೆಯದಾಗುವುದಕ್ಕೆ ನಾವು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಈ ಸಂಘಟನೆಗಳ ಪ್ರಮುಖರು ಯೋಚಿಸಬೇಕಿದೆ.

ಹೀಗೆ ಹೇಳುತ್ತಿರುವುದಕ್ಕೂ ಒಂದು ಪ್ರಮುಖ ಕಾರಣವಿದೆ. ಇತ್ತೀಚೆಗೆ ಸಾರಿಗೆ ನೌಕರರ ವೇತನ ಹೆಚ್ಚಳ ಮತ್ತು ವಜಾಗೊಂಡ ನೌಕರರನ್ನು ಯಾವುದೇ ಷರತ್ತು ಇಲ್ಲದೆ ವಾಪಸ್‌ ತೆಗೆದುಕೊಳ್ಳಬೇಕು ಮತ್ತು ನೌಕರರು, ಅವರ ಕುಟುಂಬದವರ ವಿರುದ್ಧ ದಾಖಲಾಗಿರುವ ಪೊಲೀಸ್‌ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿ ನಡೆಸಿ ಬೃಹತ್‌ ಸತ್ಯಾಗ್ರಹ ಧರಣಿಯಲ್ಲಿ ಎಷ್ಟು ಮಂದಿ ನೌಕರರು ಭಾಗವಹಿಸಿ ಅದನ್ನು ಬೆಂಬಲಿಸಿದರು?

ಅಂದರೆ ಈ ಬೃಹತ್‌ ಸತ್ಯಾಗ್ರಹ ಧರಣಿಯಲ್ಲಿ ನೌಕರರ ಪರವಾದ ನಿಲುವುಗಳು ಬರುತ್ತವೇ ಎಂಬುದರ ಬಗ್ಗೆ ನೌಕರರಿಗೇ ವಿಶ್ವಾಸವಿರಲಿಲ್ಲ. ಹೀಗಾಗಿ ಇತ್ತೀಚೆಗೆ ನಡೆದ ಸತ್ಯಾಗ್ರಹ ಧರಣಿಯಲ್ಲಿ ಕೇವಲ ಬೆಳಗ್ಗೆ 10-15 ಮಂದಿ ಸಂಜೆವೇಳೆಗೆ 30ರಿಂದ 40 ಮಂದಿ ರಾತ್ರಿ ಉಳಿದುಕೊಳ್ಳುತ್ತಿದ್ದದ್ದು ಕೇವಲ ಕೆಲವೇ ಮಂದಿ.

ನೌಕರರು ತಮಗೆ ಒಳ್ಳೇದೂ ಮಾಡಲು ಈ ಸಂಘಟನೆಯ ಮುಖಂಡರು ಹೋರಟಕ್ಕೆ ಇಳಿದಿದ್ದಾರೆ ಎಂಬುವುದು ತಿಳಿದಿದ್ದರೂ ಈ ಹೋರಾಟಕ್ಕೆ ಬೆಂಬಲ ಸೂಚಿಸಲಿಲ್ಲ ಎಂದು ಭಾವಿಸಿದರೆ ಅದು ಮೂರ್ಖತನವೇ ಆಗುತ್ತದೆ. ಇಲ್ಲಿ ನೌಕರರ ಹಿತಕಾಯುವ ದೃಷ್ಟಿಯಲ್ಲಿ ಈ ಹೋರಾಟ ನಡೆಯುತ್ತಿದೆ ಎಂದೆನಿಸಿದರೂ ಅದು ನೌಕರರ ಪಾಲಿಗೆ ಮತ್ತೆ ನಾಲ್ಕು ವರ್ಷಕ್ಕೊಮ್ಮೆ ಅದೇ ಜಂಜಾಟ ಮತ್ತದೆ ವಜಾ, ಅಮಾನತು, ವರ್ಗಾವಣೆ ಶಿಕ್ಷೆಗೆ ನಾಂದಿ ಆಗುತ್ತದೆ. ಇದನ್ನು ಅರಿತ ನೌಕರರು ಈ ಧರಣಿಯನ್ನು ಬೆಂಬಲಿಸಲಿಲ್ಲ.

ಅಂದರೆ ಇಲ್ಲಿ ಹೋರಾಟಕ್ಕೆ ಇಳಿದ ನೌಕರರು ಏನೋ ಒಂದು ಒಳ್ಳೆಯ ಉದ್ದೇಶದಿಂದಲೇ ಇಳಿದರು. ಆದರೆ ಅವರಲ್ಲಿ ಕೆಲವರಿಗೆ ನಾನು ಎಂಬ ಅಹಂ ಇದೆ. ಈ ಅಹಂ ಎಷ್ಟರ ಮಟ್ಟಿಗೆ ಇದೆ ಎಂದರೆ ನನ್ನಿಂದಲೇ ಎಲ್ಲ. ನಮ್ಮನ್ನು ಹೊಗಳಬೇಕು. ನಮ್ಮ ತಪ್ಪುಗಳನ್ನು ಯಾರೂ ಬಹಿರಂಗಪಡಿಸಬಾರದು ಎಂಬ ಅಹಂ ತುಂಬಿ ತುಳುಕುತ್ತಿತ್ತು. ಒಂದು ಹಂತದಲ್ಲಿ ಮಾಧ್ಯಮಗಳಿಲ್ಲದಿದ್ದರೂ ನಮ್ಮ ಹೋರಾಟ ಯಶಸ್ವಿಯಾಗುತ್ತದೆ. ಯಾವುದೋ ಒಂದು ಮಾಧ್ಯಮ ಮೂಲಕ ನಮ್ಮ ಹೋರಾಟ ಇತರರಿಗೆ ತಿಳಿಯಬೇಕಿಲ್ಲ ಎಂಬಷ್ಟು  ಗರ್ವ ಇತ್ತು.

ಆ ಒಂದು ಮಾಧ್ಯಮದಿಂದಲೇ ನಾವು ಈಗ ಬಹುತೇಕ ಎಲ್ಲ ನೌಕರರಿಗೂ ಪರಿಚಯವಾಗಿದ್ದೇವೆ ಎಂಬ ಸಣ್ಣ ಅರಿವು ಇಲ್ಲದೆ ಈ ಗರ್ವಿಗಳಿಗೆ ತಕ್ಕ ಉತ್ತರವನ್ನು ನೌಕರರು ಈ ಧರಣಿ ವೇಳೆ ಕೊಟ್ಟಿದ್ದಾರೆ. ಹೀಗಾಗಿ ಈಗಲಾದರೂ ಇಂಥ ಅಹಂ ಬಿಟ್ಟು ನಾವು ನೌಕರರಿಗಾಗಿ ಸಂಘಟನೆಯನ್ನು ಹುಟ್ಟುಹಾಕಿರುವುದು. ಅವರ ಸಮಸ್ಯೆಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಎಂಬ ನಿಟ್ಟಿನಲ್ಲಿ ಮುಂದಾಗಬೇಕಿದೆ.

ಇದಕ್ಕೂ ಮೊದಲು ತಮ್ಮ ತಪ್ಪಿನ ಅರಿವಾಗಬೇಕಿದೆ. ಇಲ್ಲ ಈಗಲೂ ನಾವು ಏನೂ ತಪ್ಪು ಮಾಡಿಲ್ಲ ಎಂಬ ಅಹಂನಲ್ಲೇ ಮುಂದುವರಿದರೆ ಇತ್ತೀಚೆಗೆ ತಾನೆ ಹುಟ್ಟಿ ಕಣ್ಣುಬಿಟ್ಟಿದ್ದು, ನಡೆಯುವಷ್ಟರಲ್ಲೇ ಅಂಗಾಂಗ ವೈಫಲ್ಯಕ್ಕೆ ತುತ್ತಾಗಬೇಕಾಗುತ್ತದೆ. ಇದು ಎಚ್ಚರಿಕೆ ಗಂಟೆ ಎಂದು ಭಾವಿಸಿದರೆ ಮುಂದೆ ಹೆಮ್ಮರವಾಗಿ ರಾರಾಜಿಸಬಹುದು. ಇಲ್ಲ….

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ