NEWSನಮ್ಮರಾಜ್ಯರಾಜಕೀಯಲೇಖನಗಳು

ಸಾರಿಗೆ ನೌಕರರ ಕುರಿತ ಈ ಕವನದ ಸಾಲುಗಳು ಕಲ್ಲು ಹೃದಯವನ್ನೂ ಕರಿಗಿಸುವಂತಿವೆ

ವಿಜಯಪಥ ಸಮಗ್ರ ಸುದ್ದಿ

“ಓ ದೇವರೇ ಒಂದು ಅಪಘಾತದ ಸಾವನ್ನಾದರೂ ಕೊಡು”

ಓ ದೇವರೇ…
ಒಂದು ಅಪಘಾತದ ಸಾವನ್ನಾದರೂ ಕೊಡು
ನಾನು ಸಾರಿಗೆ ಸಂಸ್ಥೆಯ ನೌಕರ
ನನ್ನ ಸತ್ತ ಶವದ ಮೇಲೆ ಒಂದು ಕೋಟಿ ರೂ. ವಿಮೆಯಾದರೂ ರಾರಾಜಿಸಲಿ

ಸ್ವಾರ್ಥವನ್ನೇ ಸರ್ವಸ್ವವೆಂದು
ನೌಕರನ ಬದುಕನ್ನು ಕೊಂದು
ತಿಪ್ಪೆಗುಂಡಿಯ ಮೇಲಿನ ನಾಯಿ ಕೊಡೆಗಳಂತೆ
ನೂರಾರು ಸಂಘಟನೆಗಳು ಹುಟ್ಟಿವೆ ಹಾಗೂ ಹುಟ್ಟುತ್ತಲೇ ಇವೆ

ನಿತ್ಯವೂ ಚಕ್ರದ ಮೇಲೆ ಚಲಿಸುವ ನಮ್ಮ ಬದುಕು
ಆರ್ಥಿಕವಾಗಿ ದಿವಾಳಿಯಂಚಿಗೆ ಬಂದು ದಿಕ್ಕನ್ನೇ ಕಾಣದೆ ಸ್ಥಗಿತಗೊಂಡಿದೆ

ಬೇಡಿಕೆಗಳ ಬಸಿರು ನಾಲ್ಕು ವರ್ಷಗಳಿಂದ ತಡೆದುಕೊಂಡಿದೆ
ಈಗೀಗ ಊಟಕ್ಕೂ, ಉಸಿರಾಟಕ್ಕೂ
ವ್ಯತ್ಯಾಸ ಕಾಣದೆ ತಡವರಿಸುತ್ತಿದೆ

ನಾಲಿಗೆಯ ರುಚಿಗೆ ಘೋಷಿಸಿದ
ಉಚಿತ ಸೌಲಭ್ಯಗಳು
ಖಚಿತವಾಗಿಯೂ ಸಾರಿಗೆ ನೌಕರರನ್ನು ಕೊಂದು ಕುಣಿಯುತ್ತಿವೆ

ಹುನ್ನಾರದ ಮುದಿ ತೆವಲುಗಳಿಗೆ ಈಗ
ನೌಕರರು ಮಣೆ ಹಾಕುತ್ತಿಲ್ಲ
ಅಯ್ಯೊ ಎಂಥಾ ! ವಿಪರ್ಯಾಸ
ಘರ್ಜಿಸಬೇಕಾದ ಹುಲಿಗಳಲ್ಲೀಗ
ಬೊಳಗುವಷ್ಟು ಶಕ್ತಿಯೂ ಉಳಿದಿಲ್ಲ

ಕೃಪಾಪೋಷಿತ ಸಂಘಟನೆಗಳ ಒಳ ಸಂಚಿನಿಂದ ಸಾರಿಗೆ ನೌಕರರು
ಶಿಕ್ಷೆಗಳ ಸುರಿಮಳೆಯಲ್ಲಿ ಬೆಂದು ಬೆವರಿದ್ದಾರೆ
ಆದರೆ……ಇನ್ನೂ ಬದುಕಿದ್ದಾರೆ

ಮನವಿ-ಮುಷ್ಕರಗಳ ಮೇಲಾಟದಲ್ಲಿ
ಸಾರಿಗೆ ನೌಕರರು ಸೋತಿರಬಹುದು
ಆದರೆ…..ಸತ್ತಿಲ್ಲ

ಓ ದೇವರೇ…
ಒಂದು ಅಪಘಾತದ ಸಾವನ್ನಾದರೂ ಕೊಡು
ನಾನು ಸಾರಿಗೆ ಸಂಸ್ಥೆಯ ನೌಕರ
ನನ್ನ ಸತ್ತ ಶವದ ಮೇಲೆ ಒಂದು ಕೋಟಿ ರೂ. ವಿಮೆಯಾದರೂ ರಾರಾಜಿಸಲಿ

ನಿಮ್ಮ ಭರವಸೆಗಳಿಗೆ ಕಣ್ಣೊರೆಸುವ ತಂತ್ರಗಳಿಗೆ, ಹೇಸಿಗೆ ಇಲ್ಲದೇ‌.. ಹಮ್ಮಿಕೊಳ್ಳುತ್ತಿರುವ ಪೂರ್ವಭಾವಿ ಸಭೆಗಳಲ್ಲಿ ನಕ್ಕು‌ ಬರುವ ನಿರ್ಲಜ್ಜ ನಾಯಕರ ಮುಖಕ್ಕೆ ಸಮಸ್ತ ಸಾರಿಗೆ ನೌಕರರ ಕಣ್ಣೀರೇ ಶ್ರದ್ಧಾಂಜಲಿಯಾಗಲಿ.

ಓ ದೇವರೇ ಒಂದು ಅಪಘಾತದ ಸಾವನ್ನಾದರೂ ಕೊಡು… ರಚನೆ: ಗುರುತ್ವ

ಸಾರಿಗೆ ನೌಕರರ ಅಸಾಹಯಕತೆಗೆ ಈ ಕವನ ಕೈಗನ್ನಡಿ ಇದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿರುವ ವಿವಿಧ ಸಂಘಟನೆಯವರು ಸ್ವಯಂ ಪ್ರೇರಣೆಯಿಂದ ನೌಕರರನ್ನು ಬೆಂಬಲಿಸಬೇಕು.

ಯಾಕೆ ಸಾರಿಗೆ ನೌಕರರು ಕನ್ನಡಿಗರಲ್ಲವೆ.? ಬಾಷೆಯ ವಿಷಯದಲ್ಲಿ ಹೋರಾಟ ಮಾಡುವ ನೀವು ಕನ್ನಡವನ್ನು ಹೊತ್ತು ಮೆರೆಸುವ ಕನ್ನಡಿಗ ಸಾರಿಗೆ ನೌಕರರರಿಗೆ ಅನ್ಯಾಯವಾಗುತ್ತಿದ್ದರೂ ನಿಮಗೆ ಏನು ಅನುಸುತ್ತಿಲ್ಲವೆ? ಕನ್ನಡದ ಹೋರಾಟಗಾರರೆ.? ಸಾರಿಗೆಯ ನೂರಾರು ನೌಕರರು ಆತ್ಮಹತ್ಯೆ ಮಾಡಿಕೊಂಡರು, ನಿಮಗೆ ತಿಳಿಯಲಿಲ್ಲವೆ ಮಾನವ ಹಕ್ಕುಗಳ ಸಂರಕ್ಷಣೆ ಮಾಡುವವರೇ?

ಎಲ್ಲಾದಕ್ಕೂ ಹಣಾನೆ ಮುಖ್ಯವಾಯಿತಾ. ನಾಯಕರುಗಳೆ? ಮಾನವೀಯತೆನೆ ಮರೆತು ಅಧಿಕಾರನೆ ಹೆಚ್ಚಾಯಿತಾ. ರಾಜಕೀಯ ಪಕ್ಷದ ನಾಯಕರುಗಳೆ?

ನೊಂದ ಸಾರಿಗೆ ನೌಕರರರಿಗೆ ನ್ಯಾಯ ಕೊಡಿಸುವುದುಕಿಂತ ನಿಮ್ಮ TRP ನೇ ಹೆಚ್ಚಾಗಿ ಹೋಯಿತಾ ದೃಶ್ಯ ಮಾಧ್ಯಮದವರೆ? ಇಷ್ಟೇನಾ ಪ್ರಪಂಚ…..!?

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ